ಕ್ರಿಕೆಟ್
IPL 2023 : ಗೌತಮ್ ಗಂಭೀರ್ ಅಸಾಮಾನ್ಯ ಕೋಚ್ ಎಂದು ಹೊಗಳಿದ ನವಿನ್ ಉಲ್ ಹಕ್!
ಗಂಭೀರ್ ಮತ್ತು ಕೊಹ್ಲಿ ಗಲಾಟೆಯ ಬಳಿಕ ಸುದ್ದಿಯಲ್ಲಿದ್ದ ಅಫಘಾನಿಸ್ತಾನ ಬೌಲರ್ ಲಕ್ನೊ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶರಿಗೆ ಮತ್ತೊಂದು ಬಾರಿ ಹೊಗಳಿಕೆ ಸಲ್ಲಿಸಿದ್ದಾರೆ.
ಲಖನೌ: ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿಯ ನಡುವಿನ ಗಲಾಟೆಯ ವೇಳೆ ಮುನ್ನೆಲೆಗೆ ಬಂದವರು ಲಕ್ನೊ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ನವಿನ್ ಉಲ್ ಹಕ್. ಅಪಘಾನಿಸ್ತಾನದ ಈ ಯುವ ಬೌಲರ್ ವಿರಾಟ್ ಕೊಹ್ಲಿಯ ಜತೆ ಮೈದಾನದಲ್ಲಿ ಹಾಗೂ ಪಂದ್ಯದ ಬಳಿಕವೂ ಜಗಳವಾಡಿದ್ದರು. ಶತ್ರುವಿನ ಶತ್ರು ಮಿತ್ರ ಎಂಬಂತೆ ಆ ಬಳಿಕ ಗಂಭೀರ್ ಹಾಗೂ ನವಿನ್ ಸಾಕಷ್ಟು ಹತ್ತಿರವಾಗಿದ್ದರು. ಕೊಹ್ಲಿಯನ್ನು ವಿರೋಧಿಸಲು ತಮಗೊಬ್ಬರ ನೆರವು ಇದೆ ಎಂದು ಗೊತ್ತಾಗಿದ್ದೇ ತಂಡ ನವಿನ್ ಉಲ್ ಹಕ್, ಸೋಶಿಯಲ್ ಮೀಡಿಯಾಗಳಲ್ಲೂ ಕೊಹ್ಲಿಯನ್ನು ಕೆಣಕುತ್ತಿದ್ದರು. ಕೊಹ್ಲಿ ಔಟಾದಾದ ಮಾವಿನ ಹಣ್ಣಿ ಚಿತ್ರ ಹಾಕಿ ಸಂಭ್ರಮಿಸಿದ್ದು, ಆರ್ಸಿಬಿ ಲೀಗ್ ಹಂತದಲ್ಲೇ ಹೊರ ಬಿದ್ದಾಗ ಇನ್ಸ್ಟಾಗ್ರಾಮ್ನಲ್ಲಿ ತಮಾಷೆ ಮಾಡಿದ್ದೆಲ್ಲವೂ ಸುದ್ದಿಯಾಗಿತ್ತು. ಇದೀಗ ಲಕ್ನೊ ತಂಡದ ಐಪಿಎಲ್ ಅಭಿಯಾನ ಕೊನೆಗೊಂಡಿದೆ. ಈ ರೀತಿಯಾಗಿ ವಾಪಸ್ ತೆರಳಲು ಮುಂದಾಗಿರು ಅವರು ಮೆಂಟರ್ ಗೌತಮ್ ಗಂಭೀರ್ ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ.
“ಮಾರ್ಗದರ್ಶಕ, ತರಬೇತುದಾರ, ಆಟಗಾರ ಅಥವಾ ಯಾರಾದರೂ ನಾನು ಮೈದಾನದಲ್ಲಿ ಪ್ರತಿಯೊಬ್ಬನ ಪರವಾಗಿ ನಿಲ್ಲುತ್ತೇನೆ. ಪ್ರತಿಯೊಬ್ಬರಿಂದಲೂ ನಾನು ಅದನ್ನೇ ನಿರೀಕ್ಷಿಸುತ್ತೇನೆ. ಅಂತೆಯೇ ಗೌತಮ್ ಗಂಭೀರ್ ಭಾರತ ಕ್ರಿಕೆಟ್ನ ದಂತಕಥೆಯಾಗಿದ್ದಾರೆ. ಅವರಿಗೆ ಭಾರತದಲ್ಲಿ ಅಪಾರ ಗೌರವವಿದೆ. ಅವರು ಭಾರತೀಯ ಕ್ರಿಕೆಟ್ಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಒಬ್ಬ ಮಾರ್ಗದರ್ಶಕನಾಗಿ, ತರಬೇತುದಾರನಾಗಿ, ಕ್ರಿಕೆಟ್ ದಂತಕಥೆಯಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನನ್ನ ಕ್ರಿಕೆಟ್ ಅನ್ನು ನಾನು ನಿರ್ವಹಿಸಬೇಕು ಎಂಬುದನ್ನು ಅವರಿಂದ ಕಲಿತಿದ್ದೇನೆ ಎಂಬುದಾಗಿ ನವಿನ್ ಉಲ್ ಹಕ್ ಹೇಳಿದ್ದಾರೆ.
ನನ್ನ ವೈಯಕ್ತಿಕ ಪ್ರದರ್ಶನಕ್ಕೆ ಎರಡನೇ ಸ್ಥಾನ
ಮುಂಬೈ ವಿರುದ್ಧದ ಪಂದ್ಯದಲ್ಲಿ ನವೀನ್ 9.50ರ ಸರಾಸರಿಯಲ್ಲಿ 38 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇದಲ್ಲದೆ, ಪ್ರಸ್ತುತ ಋತುವಿನಲ್ಲಿ ಫ್ರಾಂಚೈಸಿಗಾಗಿ ಆಡಿದ 8 ಪಂದ್ಯಗಳಲ್ಲಿ ವೇಗಿ 11 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಪ್ರದರ್ಶನಗಳಿಗಿಂತ ತಂಡಗಳ ಗೆಲುವುಗಳು ಮುಖ್ಯ ಎಂದು ನವೀನ್ ಒಪ್ಪಿಕೊಂಡಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನನ್ನ ಉತ್ತಮ ಸೀಸನ್. ನಾವು ತಂಡವಾಗಿ ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ವೈಯಕ್ತಿಕ ಪ್ರದರ್ಶನಗಳು ಲೆಕ್ಕಕ್ಕೆ ಬರುವುದಿಲ್ಲ. ಅಂತಿಯಮವಾಗಿ ಟ್ರೋಫಿಯನ್ನು ಗೆಲ್ಲುವುದು ನಮ್ಮ ತಂಡದ ಗುರಿಯಾಗಿತ್ತು. ನನ್ನ ವೈಯಕ್ತಿಕ ಪ್ರದರ್ಶನ ಎರಡನೇ ಸ್ಥಾನದಲ್ಲಿದೆ. ಇದು ನನಗೆ ಉತ್ತಮ ಋತುವಾಗಿತ್ತು, ನಾನು ಈ ಐಪಿಎಲ್ನಿಂದ ಕೆಲವು ವಿಷಯಗಳನ್ನು ಕಲಿತಿದ್ದೇನೆ, “ಎಂದು ಅವರು ನವಿನ್ ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಎಲ್ಲ ಐಪಿಎಲ್ ಟೀಮ್ಗಿಂತ ಅಧಿಕ ಆದಾಯ ಗಳಿಸಿದ ಗುಜರಾತ್ ಟೈಟನ್ಸ್, ಹೇಗೆ ಸಾಧ್ಯ?
ಲಕ್ನೊ ಸೂಪರ್ ಜೈಂಟ್ಸ್ ತಂಡ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 82 ರನ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ . ಐದು ಬಾರಿ ಪ್ರಶಸ್ತಿ ಗೆದ್ದಿರುವ ತಂಡಗಳು ಫೈನಲ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿ ಹೊಂದಿದೆ.
ಕ್ರಿಕೆಟ್
IPL 2023 : ಶುಭ್ಮನ್ ಶತಕ ಆನ್ಲೈನ್ ವೀಕ್ಷಣೆಯಲ್ಲೂ ದಾಖಲೆ, ಎಷ್ಟಿತ್ತು ವೀಕ್ಷಕರ ಸಂಖ್ಯೆ?
ಶುಬ್ಮನ್ ಗಿಲ್ ಅವರ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ 2023ರ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಶತಕವು ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಹೊಸ ವಿಶ್ವ ದಾಖಲೆ ಸೃಷ್ಟಿಸಿತು.
ಅಹಮದಾಬಾದ್: ಐಪಿಎಲ್ 2023ರಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ತಮ್ಮ ಬ್ಯಾಟಿಂಗ್ ವೈಭವ ಮುಂದುವರಿಸಿದ್ದಾರೆ. ಕಳೆದ ನಾಲ್ಕು ಇನಿಂಗ್ಸ್ಗಳಲ್ಲಿ ಮೂರನೇ ಐಪಿಎಲ್ ಶತಕವನ್ನು ಬಾರಿಸಿದ್ದಾರೆ. ಅಂತೆಯೇ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 129ರನ್ ಗಳಿಸುವ ಮೂಲಕ ಗಿಲ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವರ ಶತಕದ ನೆರವಿನಿಂದ ಗುಜರಾತ್ ತಂಡ ಮೊದಲು ಬ್ಯಾಟ್ ಮಾಡಿ 233 ರನ್ ಬಾರಿಸಿತ್ತು. ಅಂತೆಯೇ ಮುಂಬೈ ವಿರುದ್ದ 62 ರನ್ಗಳ ವಿಜಯ ದಾಖಲಿಸಿ ಫೈನಲ್ಗೇರಿತು.
ಇದೇ ವೇಳೆ ಐಪಿಎಲ್ನ ಆನ್ಲೈನ್ ಸ್ಟ್ರೀಮಿಂಗ್ ಹಕ್ಕನ್ನು ಹೊಂದಿರುವ ಜಿಯೋ ಸಿನಿಮಾ ಕೂಡ ಹೊಸ ದಾಖಲೆ ಸೃಷ್ಟಿಸಿತು. ಗಿಲ್ ಶತಕ ಬಾರಿಸಿದ ಈ ಪಂದ್ಯವನ್ನು ಏಕಕಾಲಿಕ್ಕೆ 2.57 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯಾಗಿದೆ. ಶುಭ್ಮನ್ ಅವರ ಶತಕಕ್ಕೆ ದಾಖಲೆಯ ಮಂದಿ ವೀಕ್ಷಕರಾದರು ಎಂದು ಜಿಯೋ ಸಿನಿಮಾ ಹೇಳಿದೆ.
A NEW WORLD RECORD ⚡
— JioCinema (@JioCinema) May 26, 2023
The next generation is here, on the pitch and on the digital screen 🫡
2.57 Cr viewers together witnessed Shubman Gill's show, a streaming world record that could just be broken tonight or this coming Sunday!#IPLonJioCinema #GTvMI pic.twitter.com/3AShh66lGB
ವೀಕ್ಷಕರ ಸಂಖ್ಯೆ ಗುಜರಾತ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್ ಪಂದ್ಯ ಮತ್ತು 2019ರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ದಾಖಲೆಯನ್ನು ಮೀರಿಸಿದೆ.
ಮಂಗಳವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗಿಲ್ ಅವರ ಶತಕದ ವೈಭವವನ್ನು ಜಿಯೋಸಿನಿಮಾ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿತು ಎಂದು ಜಿಯೊ ಸಿನಿಮಾ ತಿಳಿಸಿದೆ.
ವಯಾಕಾಮ್ 18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಕೂಡ ಈ ಕುರಿತು ಮಾತನಾಡಿ. “ಡಿಜಿಟಲ್ ವೇದಿಕೆಯಲ್ಲಿ ಸಮಕಾಲೀನ ವೀಕ್ಷಕರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಜಿಯೋ ಸಿನೆಮಾ ಒಂದು ಮೈಲಿಗಲ್ಲನ್ನು ಸ್ಥಾಪಿಸಿದೆ” ಎಂದು ಹೇಳಿದ್ದಾರೆ.
ಐಪಿಎಲ್ 2023ರ ಆರಂಭಿಕ ಏಳು ವಾರಗಳಲ್ಲಿ 1500 ಕೋಟಿ ವೀಡಿಯೊ ವೀಕ್ಷಣೆಗಳನ್ನು ದಾಖಲಿಸುವ ಮೂಲಕ ಡಿಜಿಟಲ್ ಕ್ರೀಡಾ ಜಗತ್ತಿನಲ್ಲಿ ಇದು ಜಾಗತಿಕ ಮೈಲುಗಲ್ಲು ಸ್ಥಾಪಿಸಿದೆ. ಇತ್ತೀಚೆಗೆ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ 2.5 ಕೋಟಿ ವೀಕ್ಷಕರ ದಾಖಲೆ ಸೃಷ್ಟಿಯಾಗಿತ್ತು. ಈ ಮೂಲಕ ಜಿಯೊ ಸಿನಿಮಾ ಹಲವಾರು ಮೈಲುಗಲ್ಲುಗಳನ್ನು ದಾಟುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಆರ್ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್ ಉಲ್ ಹಕ್!
ಜಿಯೋ ಸಿಸಿಮಾದ ಟಾಟಾ ಐಪಿಎಲ್ 2023 ಪ್ರಸ್ತುತಿಯು ನಿರಂತರವಾಗಿ ಹೊಸ ಸಾಧನೆ ಮಾಡುತ್ತಿದೆ. ಋತುವಿನಾದ್ಯಂತ ಪ್ರತಿ ವಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮುರಿದಿದೆ. ಇದು ಕ್ರಿಕೆಟ್ ಅಭಿಮಾನಿಗಳ ಆದ್ಯತೆಯ ಬದಲಾವಣೆಯ ಪುರಾವೆಯಾಗಿದೆ. ಏಪ್ರಿಲ್ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಎಸ್ ಧೋನಿ ನೇತೃತ್ವದ ಸಿಎಸ್ಕೆ ತಂಡ ಆಡುವಾಗ 2.4 ಕೋಟಿ ವೀಕ್ಷಕರು ಪಂದ್ಯ ವೀಕ್ಷಿಸಿದ್ದರು ಎಂಬುದಾಗಿಯೂ ಜಿಯೋ ಸಿನಿಮಾ ಹೇಳಿದೆ.
ಕ್ರಿಕೆಟ್
Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್ ಕೊಹ್ಲಿ!
ಪೂಮಾ ಕಂಪನಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿಯ ಮೈದಾನದಲ್ಲಿನ ವರ್ತನೆಯನ್ನು ಪತ್ನಿ ಅನುಷ್ಕಾ ತೋರಿಸಿಕೊಟ್ಟರು.
ಬೆಂಗಳೂರು: ಮೈದಾನದ ಹೊರಗೆ ಹಾಗೂ ಒಳಗೆ ಅಭಿಮಾನಿಗಲ ಪಾಲಿನ ನೆಚ್ಚಿನ ಕ್ರಿಕೆಟಿಗ. ಅವರು ಎಲ್ಲೇ ಇದ್ದರೂ ಟಾಕ್ ಆಫ್ ದಿ ಟೌನ್ ಎನಿಸಿಕೊಳ್ಳುತ್ತಾರೆ. ಅವರು ಕ್ರಿಕೆಟ್ ಆಡುವಾಗ, ಪತ್ನಿಯೊಂದಿಗೆ ಪ್ರವಾಸದಲ್ಲಿದ್ದಾಗ, ಜಾಹೀರಾತು ಕಾರ್ಯಕ್ರಮಗಳಲ್ಲಿದ್ದಾಗ ಅವರಾಡುವ ಪ್ರತಿಯೊಂದು ಮಾತುಗಳಿಗೂ ಅಭಿಮಾನಿಗಳು ತಲೆದೂಗುತ್ತಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋಯರ್ಗಳನ್ನು ಹೊಂದಿರುವ ಆಟಗಾರ ಎನಿಸಿದ್ದು. ಕೆಲವು ದಿನಗಳ ಹಿಂದೆ ಅವರ ಪಾಲೋಯರ್ಗಳ ಸಂಖ್ಯೆ 25 ಕೋಟಿ ದಾಟಿದೆ. ಈ ಮೂಲಕ ಇಷ್ಟೊಂದು ಅಭಿಮಾನಿಗಳನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಪೂಮಾ ಕಂಪನಿಯ ಕಾರ್ಯಕ್ರಮದಲ್ಲಿ ಪರಸ್ಪರ ತಮಾಷೆಗಾಗಿ ಜಗಳವಾಡಿದ್ದು ಸುದ್ದಿಯಾಗಿದೆ. ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಸ್ಟಾರ್ ದಂಪತಿ ಕಳೆದ ತಿಂಗಳು ಪೂಮಾದ ‘ಲೆಟ್ ಥೆರ್ ಬಿ ಸ್ಪೋರ್ಟ್ಸ್’ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಅಭಿಮಾನಿಗಳೊಂದಿಗೆ ಚಿಟ್ಚಾಟ್ ನಡೆಸಿದರು. ಕೆಲವೊಂದು ವಿನೋದಗಳಲ್ಲೂ ಪಾಲ್ಗೊಂಡರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಅಭಿಮಾನಿಗಳು ಅವುಗಳನ್ನು ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದಾರೆ. ವೀಡಿಯೊದಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾವ ರೀತಿ ಆಕ್ರಮಣಕಾರಿ ಭಾವ ತೋರುತ್ತಾರೆ ಎಂದು ಗೇಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಎದುರಾಳಿ ತಂಡದ ವಿಕೆಟ್ ಪತನಗೊಂಡಾಗ ಬೌಲರ್ಗಿಂತ ಹೆಚ್ಚು ಸಂಭ್ರಮಿಸುತ್ತಾರೆ ಎಂಬುದಾಗಿಯೂ ಅನುಷ್ಕಾ ಹೇಳುತ್ತಾರೆ.
Fun moments between Virat Kohli and Anushka Sharma.
— Mufaddal Vohra (@mufaddal_vohra) May 27, 2023
Anushka imitating Virat's celebration was the best! pic.twitter.com/e3ono4oXlG
ಏಪ್ರಿಲ್ 23, 2023 ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಥ ಸಂದರ್ಭವನ್ನು ವಿರಾಟ್ ಕೊಹ್ಲಿ ಪಂದ್ಯದ ನಡುವೆ ಸ್ಲೆಜಿಂಗ್ ಮಾಡಲೂ ವಿರಾಟ್ ಕೊಹ್ಲಿ ಯಾವ ರೀತಿ ಬಳಸುತ್ತಾರೆ ಎಂಬುದನ್ನೂ ಅನುಷ್ಕಾ ಶರ್ಮಾ ತೋರಿಸಿದ್ದಾರೆ.
“ಆಜ್ ತೋ ರನ್ ಬನಾ ಲೇ ಕೊಹ್ಲಿ (ಇಂದು ಏಪ್ರಿಲ್ 24, ಕನಿಷ್ಠ ಅಷ್ಟಾದೂ ರನ್ ಗಳಿಸು ಕೊಹ್ಲಿ) ಎಂದು ಅನುಷ್ಕಾ ಸ್ಲೆಜ್ ಮಾಡುತ್ತಾರೆ. ಆದರೆ ಇದಕ್ಕೆ ವಿರಾಟ್ ಕೂಡ ಪ್ರತ್ಯುತ್ತರ ನೀಡುತ್ತಾರೆ. ಕಳೆದ ಮೂರು ತಿಂಗಳಿಂದ ಆಡಿರುವ ಪಂದ್ಯಗಳಿಗಿಂತ ಹೆಚ್ಚು ನಾನು ಆಡಿದ್ದೇನೆ ಎಂದು ಹೇಳುತ್ತಾರೆ. (ಅನುಷ್ಕಾ ಶರ್ಮಾ ಅವರು ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಕತೆಯನ್ನು ಆಧರಿಸಿದ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡಿದ್ದೇನೆ ಎಂಬುದೇ ವಿರಾಟ್ ಕೊಹ್ಲಿಯ ಮಾತಿನ ಅರ್ಥ.
ಇದನ್ನೂ ಓದಿ : IPL 2023: ತಂಡವನ್ನು ಸೋಲಿಸಿದರೂ ಎದುರಾಳಿ ತಂಡದ ಆಟಗಾರನಿಗೆ ಜೆರ್ಸಿ ನೀಡಿ ಗೌರವಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹಾಲಿ ಐಪಿಎಲ್ ಋತುವಿನ ಒಂದೆರಡು ವೈಫಲ್ಯಗಳನ್ನು ಕಂಡಿದ್ದರೂ, ಉಳಿದಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಟಿ20 ಮಾದರಿಯ ಅದ್ಭುತ ಫಾರ್ಮ್ನಲ್ಲಿದ್ದಾರೆ ಅವರು. ಐಪಿಎಲ್ನ 14 ಇನಿಂಗ್ಸ್ಗಳಲ್ಲಿ 53ರ ಸರಾಸರಿಯಂತೆ ಮತ್ತು 140 ಸ್ಟ್ರೈಕ್ರೇಟ್ನಲ್ಲಿ 639 ರನ್ ಗಳಿಸಿದ್ದಾರೆ. ಅವರು ಈ ಋತುವಿನ ಲೀಗ್ನ ಹಂತದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೆಯವರು. ಆರ್ಸಿಬಿ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಫಾಫ್ ಡು ಪ್ಲೆಸಿಸ್ ಮೊದಲ ಸ್ಥಾನ ಪಡೆದಿದ್ದಾರೆ.
ಕೊಹ್ಲಿಯ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ವಿಫಲವಾಯಿತು. ಆಡಿದ ಹದಿನಾಲ್ಕು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಏಳರಲ್ಲಿ ಸೋತು ಹದಿನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಜೂನ್ 7 ರಂದು ಲಂಡನ್ನ ಓವಲ್ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅವರೀಗ ತಯಾರಿ ನಡೆಸುತ್ತಿದ್ದಾರೆ.
ಕ್ರಿಕೆಟ್
IPL 2023 : ಸಿಎಸ್ಕೆ ತಂಡ ಚಾಂಪಿಯನ್ ಆದರೆ ಈ ಮೂರು ದಾಖಲೆಗಳು ಗ್ಯಾರಂಟಿ; ಯಾವೆಲ್ಲ ಅವು?
ಅಹಮದಾಬಾದ್ನ ನರೆಂದ್ರ ಮೋದಿ ಸ್ಟೇಡಿಯಮ್ನಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಅಹಮದಾಬಾದ್: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಮೇ 23ರಂದು) ನಡೆದ ಐಪಿಎಲ್ 2023ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು 15 ರನ್ಗಳಿಂದ ಸೋಲಿಸಿತು. ಈ ಮೂಲಕ ದುಬೈನಲ್ಲಿ ನಡೆದಿದ್ದ 2021ರ ಋತುವಿನ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ಬಳಿಕ ಮತ್ತೊಂದು ಬಾರಿ ಫೈನಲ್ಗೇರಿತು.
The Triumphant Return 💛
— Chennai Super Kings (@ChennaiIPL) May 27, 2023
✍️ your favourite moment from Summer of 2018! #WhistlePodu #Yellove 🦁 pic.twitter.com/Ym28PGgv3J
ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಇದುವರೆಗೆ ಆಡಿರುವ ಒಟ್ಟು ನಾಲ್ಕು ಪಂದ್ಯಗಳಲ್ಲಿ ಗಳಿಸಿದ ಮೊದಲ ಗೆಲುವಾಗಿದೆ. ಮಾರ್ಚ್ 31ರಂದು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದರು. ಅದರಲ್ಲಿ ಪಾಂಡ್ಯ ಬಳಗ ಐದು ವಿಕೆಟ್ಗಳಿಂದ ವಿಜಯ ಸಾಧಿಸಿತ್ತು. ಏತನ್ಮಧ್ಯೆ ಸಿಎಸ್ಕೆ ತಂಡ 2011ರ ಋತುವಿನಲ್ಲಿ ಅಳವಡಿಸಲಾದ ಪ್ಲೇಆಫ್ ಮಾದರಿಯಲ್ಲಿ ಇದುವರೆಗೆ ಸಿಎಸ್ಕೆ ತಂಡ ಐದು ಬಾರಿ ಕ್ವಾಲಿಫೈಯರ್ 1ರಲ್ಲಿ ಗೆಲುವು ದಾಖಲಿಸಿದಂತಾಗಿದೆ.
ಸಿಎಸ್ಕೆ ತಂಡ ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಐಪಿಎಲ್ ಫೈನಲ್ನಲ್ಲಿ ಐದು ಬಾರಿ ಸೋತಿದೆ. ಮೂರು ಬಾರಿ ಮುಂಬಯಿ ಇಂಡಿಯನ್ಸ್ ತಂಡ ತಲಾ ಒಂದು ಸಲ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದೆ. ಇವೆಲ್ಲದರ ನಡುವೆ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರೆ ಸಿಎಸ್ಕೆ ತಂಡ ಮೂರು ದಾಖಲೆಗಳನ್ನು ಸೃಷ್ಟಿಸಲಿದೆ. ಅವುಗಳ ವಿವರ ಇಲ್ಲಿದೆ.
ಸರಿಗಟ್ಟಲಿದೆ ಮುಂಬಯಿ ದಾಖಲೆ
ಭಾನುವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ, ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿ ಹೊರಹೊಮ್ಮಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ದಾಖಲೆ ಸರಿಗಟ್ಟಲಿದೆ ಸಿಎಸ್ಕೆ ತಂಡ ಇದವರೆಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದರೆ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ. 2010, 2011, 2018 ಮತ್ತು 2021ರಲ್ಲಿ ಸೂಪರ್ ಕಿಂಗ್ಸ್ ಐಪಿಎಲ್ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನೊಂದಿಗೆ ಎಂಎಸ್ ಧೋನಿಯೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : IPL 2023 : ಕ್ವಾಲಿಫೈಯರ್ 1ರಲ್ಲಿ ಗೆಲ್ಲುವವರು ಯಾರು? ಸಿಎಸ್ಕೆ ಅಥವಾ ಗುಜರಾತ್?
ಐಪಿಎಲ್ ಗೆದ್ದ ಅತಿ ಹಿರಿಯ ನಾಯಕ
ಸಿಎಸ್ಕೆ ನಾಯಕ ಎಂಎಸ್ ಧೋನಿ ಆರಂಭದಿಂದಲೂ ಸಿಎಸ್ಕೆ ನಾಯಕರಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದರೆ, ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಪಟ್ಟ ಗಳಿಸಿದ ಹಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ. ಧೋನಿಗೆ ಈಗ 41 ನೇ ವರ್ಷ. ಈ ಮೂಲಕ ಮತ್ತೊಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಋತುರಾಜ್ಗೂ ದಾಖಲೆಯ ಅವಕಾಶ
ಫೈನಲ್ ಪಂದ್ಯದಲ್ಲಿ ಗಾಯಕ್ವಾಡ್ 36 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ ಮತ್ತು ಸಿಎಸ್ಕೆ ತಂಡ ಟ್ರೋಫಿಯನ್ನು ಗೆದ್ದರೆ, ಅವರು ಪ್ರಶಸ್ತಿ ಗೆದ್ದ ವರ್ಷದಲ್ಲಿ 600+ ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ 2021ರಲ್ಲಿ ಋತುರಾಜ್ 635 ರನ್ ಪೇರಿಸಿದ್ದರು. ಹಾಲಿ ಋತುವಿನಲ್ಲಿ 564* ರನ್ ಗಳಿಸಿದ್ದಾರೆ.
ಕ್ರಿಕೆಟ್
IPL 2023 : ಫೈನಲ್ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇದು ಐಪಿಎಲ್ನ 250ನೇ ಪಂದ್ಯವಾಗಿದೆ.
ಅಹಮದಾಬಾದ್ : 70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) ಮೆಗಾ ಫೈನಲ್ ಕಡೆಗೆ ನೆಟ್ಟಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ.
- 05- ಗುಜರಾತ್ ಟೈಟನ್ಸ್ ಹಾಗೂ ಐಪಿಎಲ್ನಲ್ಲಿ ಐದನೇ ಬಾರಿ ಎದುರಾಗುತ್ತಿವೆ. ಮೂರು ಬಾರಿ ಟೈಟನ್ಸ್ ತಂಡ ಗೆದ್ದಿದ್ದರೆ ಒಂದು ಬಾರಿ ಚೆನ್ನೈ ತಂಡ ಗೆಲುವು ಸಾಧಿಸಿದೆ. ಐದನೇ ಬಾರಿಯ ಗೆಲುವು ಯಾರಿಗೆ ಎಂಬುದು ಈ ಪಂದ್ಯದ ಬಳಿಕ ಗೊತ್ತಾಗಲಿದೆ.
- 06- ಅಜಿಂಕ್ಯ ರಹಾನೆ ಐಪಿಎಲ್ನಲ್ಲಿ ಒಟ್ಟಾರೆ 94 ಸಿಕ್ಸರ್ ಬಾರಿಸಿದ್ದಾರೆ. 100 ಗುರಿ ತಲುಪಲು ಅವರು ಈ ಪಂದ್ಯದಲ್ಲ ಆರು ಸಿಕ್ಸರ್ ಬಾರಿಸಬೇಕಾಗಿದೆ.
- 16- ಅಜಿಂಕ್ಯ ರಹಾನೆ ಟಿ20 ಮಾದರಿ ಕ್ರಿಕೆಟ್ನಲ್ಲಿ ಒಟ್ಟು 5939 ರನ್ ಬಾರಿಸಿದ್ದಾರೆ. 6000 ರನ್ಗಳ ಮೈಲುಗಲ್ಲು ದಾಖಲು 61 ರನ್ಗಳ ಕೊರತೆ ಎದುರಿಸುತ್ತಿದ್ದಾರೆ.
- 02- ಟಿ20 ಕ್ರಿಕೆಟ್ನಲ್ಲಿ 150 ವಿಕೆಟ್ಗಳನ್ನು ಪಡೆಯಲು ಹಾರ್ದಿಕ್ ಪಾಂಡ್ಯ (148) ಅವರಿಗೆ ಎರಡು ವಿಕೆಟ್ಗಳ ಅಗತ್ಯವಿದೆ.
- 04- ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಟಿ20 ಮಾದರಿಯಲ್ಲಿ 496 ಫೋರ್ಗಳನ್ನು ಬಾರಿಸಿದ್ದಾರೆ. 500 ಸಾಧನೆ ಮಾಡಲು 4 ಫೋರ್ಗಳು ಬೇಕಾಗಿವೆ.
- 01- ಸಿಎಸ್ಕೆ ನಾಯಕ ಎಂ.ಎಸ್.ಧೋನಿ ಐಪಿಎಲ್ನಲ್ಲಿ 349 ಫೋರ್ಗಳನ್ನು ಬಾರಿಸಿದ್ದಾರೆ. 350ರ ಗಡಿ ದಾಟಲು ಒಂದು ಫೋರ್ನ ಅಗತ್ಯವಿದೆ.
- 02- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಐಪಿಎಲ್ನಲ್ಲಿ 98 ಸಿಕ್ಸರ್ಗಳನ್ನು ಬಾರಿಸಿದ್ದು, 100 ಸಿಕ್ಸರ್ಗಳನ್ನು ಬಾರಿಸಲು 2 ಸಿಕ್ಸರ್ ಬೇಕಾಗಿದೆ.
- 02- ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ ಇದುವರೆಗೆ 48 ವಿಕೆಟ್ಗಳನ್ನು ಕಬಳಿಸಿದ್ದಾರೆ. 50 ವಿಕೆಟ್ ಕಬಳಿಸಲು ಅವರಿಗೆ 2 ವಿಕೆಟ್ ಅಗತ್ಯವಿದೆ.
- 04- ರಶೀದ್ ಖಾನ್ ಗುಜರಾತ್ ತಂಡದ ಪರ 46 ವಿಕೆಟ್ ಉರುಳಿಸಿದ್ದರು. 50 ವಿಕೆಟ್ ಪೂರೈಸಲು 4 ವಿಕೆಟ್ ಅಗತ್ಯವಿದೆ.
- 08- ರವೀಂದ್ರ ಜಡೇಜಾ ಐಪಿಎಲ್ನಲ್ಲಿ 192 ಫೋರ್ಗಳನ್ನು ಬಾರಿಸಿದ್ದಾರೆ. 200 ಫೋರ್ಗಳನ್ನು ಪೂರ್ಣಗೊಳಿಸಲು ಎಂಟು ಫೋರ್ಗಳ ಅಗತ್ಯವಿದೆ.
- 11- ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಎಗ ಐಪಿಎಲ್ನಲ್ಲಿ 11 ಬಾರಿ ಫೈನಲ್ ತಲುಪಿದ ಹೆಗ್ಗಳಿಕೆ ಸಿಗಲಿದೆ.
- 01- ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್ಕೆ ಪರ 249 ಪಂದ್ಯಗಳಲ್ಲಿ ಆಡಿದ್ದು 250ನೇ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಒಂದು ಪಂದ್ಯ ಬಾಕಿ ಇದೆ.
- 49- ಗುಜರಾತ್ ತಂಡದ ಬ್ಯಾಟರ್ ಶುಭ್ಮನ್ ಗಿಲ್ಗೆ ಐಪಿಎಲ್ನಲ್ಲಿ 900 ರನ್ಗಳ ಗಡಿ ದಾಟಲು 49 ರನ್ಗಳ ಅಗತ್ಯವಿದೆ.
- 123- ಐಪಿಎಲ್ನಲ್ಲಿ ಋತು ಒಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಮಾಡಲು ಶುಭ್ಮನ್ ಗಿಲ್ಗೆ (851) ಗೆ 123 ರನ್ಗಳ ಅಗತ್ಯವಿದೆ.
- 01- ಗುಜರಾತ್ ತಂಡದ ಬೌಲರ್ ಅಲ್ಜಾರಿ ಜೋಸೆಫ್ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 99 ವಿಕೆಟ್ ಉರುಳಿಸಿದ್ದು. 00ರ ಸಾಧನೆ ಮಾಡಲು ಒಂದು ವಿಕೆಟ್ ಬೇಕಾಗಿದೆ.
- 03- ಗುಜರಾತ್ ಬೌಲರ್ ಮೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 147 ವಿಕೆಟ್ ಪಡೆದಿದ್ದು. 150 ವಿಕೆಟ್ಗಳನ್ನು ಪೂರೈಸಲು 3 ವಿಕೆಟ್ಗಳ ಅಗತ್ಯವಿದೆ.
- 01- ಚೆನ್ನೈ ತಂಡದ ಬೌಲರ್ ದೀಪಕ್ ಚಾಹರ್ ಟಿ20 ಮಾದರಿಯಲ್ಲಿ 149 ವಿಕೆಟ್ಗಳನ್ನು ಉರುಳಿಸಿದ್ದು. 150ರ ಮೈಲುಗಲ್ಲು ಸ್ಥಾಪಿಸಲು ಒಂದು ವಿಕೆಟ್ ದೂರದಲ್ಲಿದ್ದಾರೆ.
- 05- ಐಪಿಎಲ್ನಲ್ಲಿ 100 ಫೋರ್ಗಳ ಸಾಧನೆ ಮಾಡಲು ಸಿಎಸ್ಕೆ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆಗೆ (95) ಐದು ಫೋರ್ಗಳ ಅಗತ್ಯವಿದೆ.
- 01- ಗುಜರಾತ್ ತಂಡದ ಬೌಲರ್ ಮೋಹಿತ್ ಶರ್ಮಾ (99) ಅವರಿಗೆ ಐಪಿಎಲ್ನ 100ನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ7 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ10 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ22 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕರ್ನಾಟಕ22 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕ್ರಿಕೆಟ್23 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ21 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ