Site icon Vistara News

IPL 2023: ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಂಡ ತಂಡಗಳೆಷ್ಟು; ಆರ್​ಸಿಬಿ ಸ್ಥಿತಿ ಹೇಗಿದೆ; ಸಂಪೂರ್ಣ ಮಾಹಿತಿ ಇಲ್ಲಿದೆ

ipl playoffs

#image_title

ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023)​ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಪ್ಲೇ ಆಫ್​ಗೇರುವ ನಿಟ್ಟಿನಲ್ಲಿ ಕೆಲ ತಂಡಗಳಿಗೆ ಇನ್ನುಳಿದ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡ ಎದುರಾಗಿದೆ. ಹೀಗಾಗಿ ಕೆಲ ತಂಡಗಳು ಹಲವು ಲೆಕ್ಕಾಚಾರದೊಂದಿಗೆ ಕಣ್ಣಕಿಳಿಯುತ್ತಿವೆ. ಹಾಲಿ ಚಾಂಪಿಯನ್​ ಗುಜರಾತ್​ ತಂಡ ಈಗಾಗಲೇ ಪ್ಲೇ ಆಫ್​ ಪ್ರವೇಶಿಸಿ ನಿಟ್ಟುಸಿರು ಬಿಟ್ಟಿದೆ. ಆದರೆ ಉಳಿದ ಮೂರು ಸ್ಥಾನಕ್ಕಾಗಿ ಭಾರಿ ಫೈಪೊಟಿ ಆರಂಭವಾಗಿದೆ.

ಡೆಲ್ಲಿ ವಿರುದ್ಧ ಪಂಜಾಬ್​ ಸೋತ ಕಾರಣ ಮುಂಬೈ ಮತ್ತು ಆರ್​ಸಿಬಿ ತಂಡಗಳಿಗೆ ಈ ರೇಸ್​ನಲ್ಲಿ ಮತ್ತಷ್ಟು ಬೂಷ್ಟ್​ ದೊರೆತಿದೆ. ಸದ್ಯ ಪ್ಲೇ ಆಪ್​ ರೇಸ್​ ಹೇಗಿದೆ ಮತ್ತು ಯಾವ ತಂಡಗಳಿಗೆ ಗೆಚ್ಚಿನ ಅವಕಾಶವಿದೆ ಎಂಬ ಮಾಹಿತಿ ಇಂತಿದೆ. ಪಂಜಾಬ್​ ತಂಡಕ್ಕೆ ಇನ್ನು ಒಂದು ಪಂದ್ಯ ಬಾಕಿ ಇದೆ. ಶುಕ್ರವಾರ ರಾಜಸ್ಥಾನ್​ ವಿರುದ್ಧ ಧರ್ಮಶಾಲದಲ್ಲೇ ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಈ ಪಂದ್ಯ ಗೆದ್ದರೆ ಪಂಜಾಬ್​ 14 ಅಂಕ ಗಳಿಸಲಿದೆ. ಆದರೂ ಪಂಜಾಬ್​ಗೆ ಪ್ಲೇ ಆಫ್​ ಪ್ರವೇಶಿಸುವುದು ಕಷ್ಟ. ಏಕೆಂದರೆ ರನ್​ರೇಟ್​ ಕಳಪೆಯಾಗಿದೆ. ಅತ್ಯಂತ ದೊಡ್ಡ ಅಂತರದಿಂದ ಗೆದ್ದರೂ ತನಗಿಂತ ಮೇಲಿರುವ ತಂಡಗಳು ದೊಡ್ಡ ಅಂತರದಿಂದ ಸೋಲು ಕಂಡರೆ ಆಗ ಪಂಜಾಬ್​ಗೆ ಒಂದು ಅವಕಾಶ ಸಿಗಲಿದೆ.

ಮುಂದಿನ ಪಂದ್ಯದಲ್ಲಿ ಆರ್​ಸಿಬಿ ಮತ್ತು ಮುಂಬೈ ಗೆದ್ದರೆ ಆಗ ಪಂಜಾಬ್​ ಅಂತಿಮ ಪಂದ್ಯದಲ್ಲಿ ಗೆದ್ದರೂ ಯಾವುದೇ ಪ್ರಯೋಜನವಿಲ್ಲ. ಧವನ್​ ಪಡೆ ಟೂರ್ನಿಯಿಂದ ಹೊರ ಬೀಳಲಿದೆ. ಕಳೆದ ಪಂದ್ಯಲ್ಲಿ ಡೆಲ್ಲಿ ವಿರುದ್ಧ ಗೆದ್ದಿದ್ದರೆ ಪಂಜಾಬ್​ಗೆ ಈ ಸ್ಥಿತಿ ಎದುರಾಗುತ್ತಿರಲಿಲ್ಲ. ಒಟ್ಟಾರೆ ಪಂಜಾಬ್​ ತನಗಿಂತ ಮೇಲಿರುವ ತಂಡಗಳ ಸೋಲನ್ನು ಬಯಸಬೇಕಿದೆ.

ಇದನ್ನೂ ಓದಿ IPL 2023: ಧೋನಿ ನನ್ನ ಮೊದಲ ನಾಯಕ; ಕೆ.ಎಲ್​ ರಾಹುಲ್​ ಹೀಗೆ ಹೇಳಲು ಕಾರಣವೇನು?

ಒಂದೊಮ್ಮೆ ಆರ್​ಸಿಬಿ ಸನ್​ರೈಸರ್ಸ್​ ವಿರುದ್ಧ ಸೋತರೆ ಆಗ ಮುಂಬೈ ತಂಡಕ್ಕೆ ಹೆಚ್ಚು ವರದಾನವಾಗಲಿದೆ. ಮುಂಬೈ ಅಂತಿಮ ಪಂದ್ಯದಲ್ಲಿ ಸಣ್ಣ ಅಂತರದಿಂದ ಗೆದ್ದರೂ ತಂಡಕ್ಕೆ 16 ಅಂಕ ಲಭಿಸಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ. ಲಕ್ನೋ ಮತ್ತು ಚೆನ್ನೈ ಈಗಾಗಲೇ 15 ಅಂಕ ಹೊಂದಿದೆ. ಆರ್​ಸಿಬಿ ಅಂತಿಮ ಪಂದ್ಯದಲ್ಲಿ ಗೆದ್ದರೂ 14 ಅಂಕ ಮಾತ್ರ ಸಿಗಲಿದೆ. ಹೀಗಾಗಿ ಆರ್​ಸಿಬಿ ಹೈದರಾಬಾದ್​ ವಿರುದ್ಧ ಸೋತರೆ ಮುಂಬೈ ಅಂತಿಮ ಪಂದ್ಯದಲ್ಲಿ ಸೋಲು ಕಾಣಬೇಕು ಆಗ ಆರ್​ಸಿಬಿ 14 ಅಂಕದೊಂದಿಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್​ ಪ್ರವೇಶ ಪಡೆಯಬಹುದು. ಮುಂಬೈಗಿಂತ ಆರ್​ಸಿಬಿ ರನ್​ರೇಟ್​ ಹೆಚ್ಚಿದೆ. ಒಟ್ಟಾರೆ ತಂಡಗಳ ಮಧ್ಯೆ ಹಾವು ಏಣಿ ಆಟ ಆರಂಭವಾಗಿದೆ.

Exit mobile version