Site icon Vistara News

IPL 2023 | ಮುಂಬೈ ಇಂಡಿಯನ್ಸ್​ ಜತೆಗಿನ ಸುದೀರ್ಘ ನಂಟು ಕಳೆದುಕೊಂಡ ಕೀರನ್‌ ಪೊಲಾರ್ಡ್​

polard

ಮುಂಬಯಿ: ಮುಂದಿನ ಸೀಸನ್​ನ ಐಪಿಎಲ್ ಕೂಟಕ್ಕೆ ಎಲ್ಲ ಫ್ರಾಚೈಸಿಗಳು ಭರ್ಜರಿ ತಯಾರಿ ಜತೆಗೆ ಸರ್ಜರಿಯನ್ನು ಮಾಡಲಾರಂಭಿಸಿದೆ. ಡಿಸೆಂಬರ್​ನಲ್ಲಿ ಮಿನಿ ಹರಾಜು ನಡೆಯಲಿದ್ದು. ಅದಕ್ಕೂ ಮೊದಲು ಎಲ್ಲ ಫ್ರಾಂಚೈಸಿಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾರಂಭಿಸಿವೆ. ಅಚ್ಚರಿ ಎಂದರೆ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ತನ್ನ ಸ್ಟಾರ್​ ಆಟಗಾರ ಕೀರನ್​ ಪೊಲಾರ್ಡ್ ಅವರನ್ನು ತಂಡದಿಂದ ಕೈ ಬಿಟ್ಟಿದೆ.

ಮೊದಲ ಬಾರಿಗೆ ತಂಡದಿಂದ ಹೊರಬಿದ್ದ ಪೊಲಾರ್ಡ್​

ರೋಹಿತ್ ಶರ್ಮಾ ನಾಯಕತ್ವದ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ನೆಚ್ಚಿನ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ಮೊದಲ ಬಾರಿಗೆ ಕೈಬಿಟ್ಟಿದೆ. ಆರಂಭದಿಂದಲೂ ಮುಂಬೈ ಪಾಳಯದಲ್ಲೇ ಇದ್ದ ಪೊಲಾರ್ಡ್​ಗೆ ಇದೇ ಮೊದಲ ಬಾರಿಗೆ ತಂಡದ ಬಾಗಿಲು ಮುಚ್ಚಲಾಗಿದೆ. ಇದರೊಂದಿಗೆ ಪೊಲಾರ್ಡ್​ಗೆ ಮುಂಬೈ ತಂಡದ ಜತೆಗಿನ ಬಹು ವರ್ಷಗಳ ನಂಟು ಕೊನೆಗೊಂಡಂತಾಗಿದೆ.

ಮುಂಬೈ ತಂಡ ಒಟ್ಟು 10 ಆಟಗಾರರನ್ನು ಉಳಿಸಿಕೊಂಡಿದ್ದು, 5 ಆಟಗಾರರನ್ನು ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ, ಡೆವಾಲ್ಡ್ ಬ್ರೇವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸ್ಯಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್​ಪ್ರೀತ್​ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡಿದೆ. ಆದರೆ ಫ್ಯಾಬಿಯಾನ್ ಅಲೆನ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಾಂಡೆ ಮತ್ತು ಹೃತಿಕ್ ಶೋಕಿನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | IPL 2023 | ಧೋನಿ, ಜಡೇಜಾ ಸೇರಿ 9 ಆಟಗಾರರನ್ನು ಉಳಿಸಿಕೊಂಡ ಚೆನ್ನೈ ಸೂಪರ್​ ಕಿಂಗ್ಸ್​

Exit mobile version