Site icon Vistara News

IPL 2023: ಗುಜರಾತ್​ ಬೌಲಿಂಗ್​ ದಾಳಿಗೆ ಪರದಾಡಿದ ಪಂಜಾಬ್

Harbhajan Singh, who named the team that will make it to the playoffs, said, "Is THERE RCB?

ಮೊಹಾಲಿ: ಗುಜರಾತ್​ ಟೈಟನ್ಸ್​ ತಂಡದ ಬೌಲರ್​ಗಳ ಸಂಘಟಿತ ಬೌಲಿಂಗ್​ ದಾಳಿಗೆ ರನ್​ ಗಳಿಸಲು ಪರದಾಡಿದ ಪಂಜಾಬ್​​ ಕಿಂಗ್ಸ್​ 153 ರನ್​ ಗಳಿಸಿ ಸವಾಲೊಡ್ಡಿದೆ. ಪಂಜಾಬ್​ ಪರ ಮ್ಯಾಥ್ಯೂ ಶಾರ್ಟ್‌ 36 ರನ್​ ಬಾರಿಸಿದರು. ಉಳಿದ ಯಾವ ಬ್ಯಾಟರ್​ಗಳಿಂದಲೂ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ.

ಮೊಹಾಲಿಯ ಐ.ಎಸ್‌.ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್​ ಬಾರಿಸಿತು. ಎದುರಾಳಿ ಗುಜರಾತ್​ ಗೆಲುವಿಗೆ 154 ರನ್​ ಬಾರಿಸಬೇಕಿದೆ.

ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ನಾಯಕನ ನಿರ್ಧಾರವನ್ನು ಗುಜರಾತ್​ ಬೌಲರ್​ಗಳು ಸಮರ್ಥಿಸಿಕೊಂಡರು. ಆರಂಭದಲ್ಲೇ ಮೊಹಮ್ಮದ್​ ಶಮಿ ಖಾತೆ ತೆರೆಯುವ ಮೊದಲೇ ಪ್ರಭ್​ಶಿಮ್ರಾನ್​ ಸಿಂಗ್​ ವಿಕೆಟ್​ ಬೇಟೆಯಾಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಜಾನಿ ಬೇರ್​ಸ್ಟೋ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡ ಸೇರ್ಪಡೆಗೊಂಡಿದ್ದ ಮ್ಯಾಥ್ಯೂ ಶಾರ್ಟ್‌ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಕ್ರೀಸ್​ಗೆ ಬಂದ ಆರಂಭದಲ್ಲೇ ಮೊಹಮ್ಮದ್​ ಶಮಿ ಓವರ್​ನಲ್ಲಿ ಅವರು ಬಡಬಡನೆ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು.

ಬಿರುಸಿನಿಂದಲೇ ಬ್ಯಾಟ್​ ಬೀಸುತ್ತಿದ್ದ ಅವರನ್ನು ಕಳೆದ ಪಂದ್ಯದ ಹ್ಯಾಟ್ರಿಕ್​​ ವಿಕೆಟ್​ ವೀರ ರಶೀದ್​ ಖಾನ್​ ಕ್ಲೀನ್​ ಬೌಲ್ಡ್​ ಮಾಡುವ ಮೂಲಕ ಅವರ ಬ್ಯಾಟಿಂಗ್​ ಅಬ್ಬರಕ್ಕೆ ಬ್ರೇಕ್​ ಹಾಕಿದರು. ಒಟ್ಟು 24 ಎಸೆತ ಎದುರಿಸಿದ ಅವರು 36 ರನ್​ ಬಾರಿಸಿದರು. 6 ಬೌಂಡರಿ ಮತ್ತು ಒಂದು ಸಿಕ್ಸರ್​ ಒಳಗೊಂಡಿತ್ತು. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್​ ಮೂಲಕ ತಂಡಕ್ಕೆ ಆಸರೆಯಾಗಿದ್ದ ನಾಯಕ ಶಿಖರ್​ ಧವನ್​ ಅವರು ಈ ಪಂದ್ಯದಲ್ಲಿ ಕೇವಲ 8 ರನ್​ಗೆ ಔಟಾದರು.

ಇದನ್ನೂ ಓದಿ IPL 2023: ತಂದೆಯ ಕ್ರಿಕೆಟ್​ ಪ್ರದರ್ಶನವನ್ನು ಟಿವಿಯಲ್ಲಿ ಕಂಡು ಖುಷಿಪಟ್ಟ ಅಂಬೆಗಾಲಿನ ಮಗು; ವಿಡಿಯೊ ವೈರಲ್​

ಮ್ಯಾಥ್ಯೂ ಶಾರ್ಟ್‌ ವಿಕೆಟ್​ ಪತನದ ಬಳಿಕ ತಂಡದ ಮೊತ್ತವೂ ಕುಂಡಿತವಾಗಿ ಸಾಗಿತು. ಜಿತೇಶ್​ 25 ರನ್​ ಗಳಿಸಿ ಮೋಹಿತ್​ ಶರ್ಮ ಅವರಿಗೆ ವಿಕೆಟ್​ ಒಪ್ಪಿಸಿದರು. ಮೋಹಿತ್ ಶರ್ಮ ಅವರು ಮೂರು ವರ್ಷಗಳ ಬಳಿಕ ಐಪಿಎಲ್​ ಟೂರ್ನಿಯಲ್ಲಿ ಆಡಲಿಳಿದರು. ಅವರು 2020ರಲ್ಲಿ ಪಂಜಾಬ್​ ತಂಡದ ಪರ ಕೊನೆಯ ಬಾರಿ ಐಪಿಎಲ್​ ಪಂದ್ಯವನ್ನಾಡಿದ್ದರು. ಮೂರು ವರ್ಷಗಳ ಬಳಿಕ ಆಡಿದರೂ ಉತ್ತಮ ಪ್ರದರ್ಶನ ತೋರಿದರು. 4 ಓವರ್​ ಎಸೆದು ಕೇವಲ 18 ರನ್​ ನೀಡಿ 2 ವಿಕೆಟ್​ ಕಿತ್ತರು. ಆಲ್​ರೌಂಡರ್​ ಸ್ಯಾಮ್​ ಕರನ್​ 22, ಭನುಕಾ ರಾಜಪಕ್ಸೆ 20 ರನ್​ ಬಾರಿಸಿದರು. ಅಂತಿಮ ಹಂತದಲ್ಲಿ ಶಾರುಖ್​ ಖಾನ್​ ಅವರು ಸಿಡಿದು ನಿಂತ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅವರು 9 ಎಸೆತಕ್ಕೆ 22 ರನ್​ ಗಳಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಅಸೌಖ್ಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕ್ವ ವಹಿಸಿಕೊಂಡರು. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ರಶೀದ್​ ಖಾನ್​ ತಂಡವನ್ನು ಮುನ್ನಡೆಸಿದ್ದರು.

Exit mobile version