ಹಿಮಾಚಲ ಪ್ರದೇಶ: ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಬೇಕಿದ್ದರೆ ಪಂಜಾಬ್ಗೆ ಡೆಲ್ಲಿ ವಿರುದ್ಧ ಗೆಲುವು ಅತ್ಯಗತ್ಯ. ಈ ಮಹತ್ವದ ಪಂದ್ಯ ಬುಧವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಇದು ಶಿಖರ್ ಧವನ್ ಪಡೆಗೆ ಮಾಡು ಇಲ್ಲ ಮಡಿ ಪಂದ್ಯವಾಗಿದ್ದರೆ. ಅತ್ತ ಡೆಲ್ಲಿಗೆ ಔಪಚಾರಿಕ ಪಂದ್ಯವಾಗಿದೆ. ಏಕೆಂದರೆ ಡೆಲ್ಲಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಡೆಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ, ವಾರ್ನರ್ ಪಡೆಯ ಸವಾಲನ್ನು ಪಂಜಾಬ್ ಕಡೆಗಣಿಸಬಾರದು. ಏಕೆಂದರೆ ದೀಪ ಆರುವ ಮೊದಲು ಜೋರಾಗಿ ಉರಿಯುವಂತೆ ಡೆಲ್ಲಿ ಆಟಗಾರರು ಈ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಆದ್ದರಿಂದ ದವನ್ ಪಡೆ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಇಡಬೇಕಿದೆ. ಒಂದೊಮ್ಮೆ ಈ ಪಂದ್ಯ ಸೋತರೆ ಪಂಜಾಬ್ ಟೂರ್ನಿಯಿಂದ ಹೊರಬೀಳಲಿದೆ. ಪಂಜಾಬ್ ಈ ಪಂದ್ಯದಲ್ಲಿ ಗೆಲವು ಸಾಧಿಸಿದರೆ ಮಾತ್ರ ಸಾಲದು, ಗೆಲುವಿನ ಜತೆಗೆ ರನ್ ರೇಟ್ ಕೂಡ ತಂಡಕ್ಕೆ ಅತ್ಯಗತ್ಯವಾಗಿದೆ. ಏಕೆಂದರೆ ತನಗಿಂತ ಮೇಲಿರುವ ತಂಡಗಳು ಕೂಡ 16 ಅಂಕ ಸಂಪಾದಿಸಿದ್ದಲ್ಲಿ ಆಗ ರನ್ ರೇಟ್ ಪಾತ್ರ ಮುಖ್ಯವಾತ್ತದೆ.
ಇದನ್ನೂ ಓದಿ IPL 2023: ಲಕ್ನೋ ಪಂದ್ಯಕ್ಕೂ ಮುನ್ನ ಅರ್ಜುನ್ ತೆಂಡೂಲ್ಕರ್ಗೆ ನಾಯಿ ಕಡಿತ
ಡೆಲ್ಲಿ ವಿರುದ್ಧ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಪ್ರಭ್ಶಿಮ್ರಾನ್ ಸಿಂಗ್ ಮೇಲೆ ತಂಡ ಈ ಪಂದ್ಯದಲ್ಲಿಯೂ ಬರವಸೆ ಇರಿಸಿದೆ. ಕಳೆದ ಮುಖಾಮುಖಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಶಿಖರ್ ಧವನ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮ ಅವರೆಲ್ಲ ಈ ಪಂದ್ಯದಲ್ಲಿ ತಂಡವನ್ನು ಆಧರಿಸಬೇಕಿದೆ. ಬೌಲಿಂಗ್ ನಲ್ಲಿ ನಥಾನ್ ಎಲ್ಲಿಸ್, ರಾಹುಲ್ ಚಹಾರ್, ಅರ್ಶ್ದೀಪ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ರಬಾಡ ಮಾತ್ರ ಇನ್ನೂ ಘಾತಕವಾಗಿ ಕಂಡುಬಂದಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭದಿಂದ ಇಲ್ಲಿಯ ವರೆಗೆ ಆಧಾರವಾಗಿದ್ದು ನಾಯಕ ಡೇವಿಡ್ ವಾರ್ನರ್ ಮಾತ್ರ. ಪ್ರತಿ ಪಂದ್ಯದಲ್ಲಿಯೂ ಅವರದ್ದು ಏಕಾಂಗಿ ಹೋರಾಟ. ಒಂದು ಪಂದ್ಯದಲ್ಲಿ ಫಿಲಿಪ್ ಸಾಲ್ಟ್ ಅವರು ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಆ ಬಳಿಕ ಅವರ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಉಳಿದ ಎಲ್ಲ ಬ್ಯಾಟರ್ಗಳು ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಕಳಪೆ ಪ್ರದರ್ಶನದ ಮೂಲಕ ಪೆಲಿಲಿಯನ್ ಸೇರುತ್ತಿದ್ದಾರೆ. 150 ಒಳಗಿನ ರನ್ ಕೂಡ ಪೇರಿಸಲು ಸಾಧ್ಯವಾಗದೆ ಸೋಲು ಕಾಣುತ್ತಿದೆ.
ಇದನ್ನೂ ಓದಿ IPL 2023: ಚೆನ್ನೈ ತಂಡಕ್ಕೆ ಸ್ಟ್ರೋಕ್ ಕೊಟ್ಟ ಸ್ಟೋಕ್ಸ್
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್ದೀಪ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಅಕ್ಷರ್ ಪಟೇಲ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.