Site icon Vistara News

IPL 2023: ಬೌಲಿಂಗ್​ನಲ್ಲಿ ನೂತನ ದಾಖಲೆ ಬರೆದ ಪಂಜಾಬ್​ ತಂಡದ ವೇಗಿ ಕಗಿಸೊ ರಬಾಡ

IPL 2023: Punjab fast bowler Kagiso Rabada set a new record in bowling

IPL 2023: Punjab fast bowler Kagiso Rabada set a new record in bowling

ಮೊಹಾಲಿ: ಪಜಾಂಬ್​ ಕಿಂಗ್ಸ್​ ತಂಡದ ವೇಗಿ ಕಗಿಸೊ ರಬಾಡ ಐಪಿಎಲ್​ನಲ್ಲಿ(IPL 2023) ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಕಡಿಮೆ ಎಸೆತಗಳಲ್ಲಿ 100 ವಿಕೆಟ್​​ ಪಡೆದ ಮೊದಲ ಬೌಲರ್​ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ಲಸಿತ ಮಾಲಿಂಗ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಮೊಹಾಲಿಯ ಐ.ಎಸ್‌.ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್​ ಬಾರಿಸಿತು. ಜವಾಬಿತ್ತ ಗುಜರಾತ್​ ಟೈಟನ್ಸ್​ 19.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 154 ರನ್​ ಬಾರಿಸಿ ಗೆಲುವು ದಾಖಲಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟಿದ ಗುಜರಾತ್​ಗೆ ಆರಂಭಿಕರಾದ ವೃದ್ಧಿಮಾನ್​ ಸಾಹಾ ಮತ್ತು ಶಭಮನ್​ ಗಿಲ್​ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಕೇವಲ ನಾಲ್ಕು ಓವರ್​ಗಳಲ್ಲಿ 40 ರನ್​ ಜತೆಯಾಟ ನಡೆಸಿತು. ಈ ವೇಳೆ ಕಗಿಸೊ ರಬಾಡ ಅವರು ಸಾಹಾ ವಿಕೆಟ್​ ಕಿತ್ತರು. ಈ ವಿಕೆಟ್​ ಪಡೆಯುತ್ತಿದ್ದಂತೆ ರಬಾಡ ಅವರು ಐಪಿಎಲ್​ನಲ್ಲಿ ನೂರು ವಿಕೆಟ್​ ಪೂರ್ತಿಗೊಳಿಸಿದ ಸಾಧನೆ ಮಾಡಿದರು.

ಇದನ್ನೂ ಓದಿ Most Matches By 50 Plus Runs In IPL Records: 50 ಪ್ಲಸ್ ರನ್​ ಅಂತರದಲ್ಲಿ ಅತಿ ಹೆಚ್ಚು ಬಾರಿ ಪಂದ್ಯಗಳಲ್ಲಿ ಸೋತ ತಂಡಗಳು

ನೂರು ವಿಕೆಟ್​ ಪಡೆಯುತ್ತಿದ್ದಂತೆ ರಬಾಡ ಅವರು ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ರಬಾಡ 64 ಪಂದ್ಯ ಮತ್ತು ಕೇವಲ 1,438 ಎಸೆತಗಳಲ್ಲಿ ಈ ಮೈಲುಗಲ್ಲನ್ನು ತಲುಪಿದರು. ಇದಕ್ಕೂ ಮುನ್ನ ಮಾಲಿಂಗ ಅವರು 70 ಪಂದ್ಯ, 1622 ಎಸೆತಗಳ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ ಮಾಲಿಂಗ ಅವರ ಸಾಧನೆ ಪತನಗೊಂಡಿದೆ. ಆರ್​ಸಿಬಿ ತಂಡದ ಹರ್ಷಲ್ ಪಟೇಲ್​ ಅವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಹರ್ಷಲ್​ 1647 ಎಸೆತಗಳ ಮೂಲಕ 100 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಗುಜರಾತ್​ಗೆ ರೋಚಕ ಗೆಲುವು

ಸಣ್ಣ ಮೊತ್ತವನ್ನು ಬೆನ್ನಟ್ಟುವಲ್ಲಿ ಪರದಾಡಿದ ಗುಜರಾತ್​ ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ತೆಗೆಯುವ ಸವಾಲಿಗೆ ಬಂದು ನಿಂತಿತು. ಇದೇ ವೇಳೆ ಅರ್ಧಶತಕ ಬಾರಿಸಿದ್ದ ಶುಭಮನ್​ ಗಿಲ್​ ಕ್ಲೀನ್​ ಬೌಲ್ಡ್​ ಆದರು. ಮುಂದಿನ ಎಸೆತಗಳಲ್ಲಿ ಕೇವಲ ಒಂದೊಂದು ರನ್​ ದಾಖಲಾಯಿತು. ಈ ವೇಳೆ ಪಂಜಾಬ್​ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸಲಾಗಿತ್ತು. ಡೇವಿಡ್​ ಮಿಲ್ಲರ್​ ಅವರು ಸ್ಟ್ರೈಕ್​ನಲ್ಲಿದ್ದರೂ ಅವರಿಂದಲೂ ದೊಡ್ಡ ಹೊಡೆ ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮ ಎರಡು ಎಸೆತದ ಮುಂದೆ ನಾಲ್ಕು ರನ್​ ಬೇಕಿದ್ದಾಗ ತೆವಾಟಿಯ ಬೌಂಡರಿ ಬಾರಿಸಿ ಗೆಲುವನ್ನು ಸಾರಿದರು. ಈ ಮೂಲಕ ಗುಜರಾತ್​ ರೋಚಕ ಗೆಲುವು ದಾಖಲಿಸಿತು.

Exit mobile version