Site icon Vistara News

IPL 2023: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಂಜಾಬ್​ ಕಿಂಗ್ಸ್​

Nitish Rana and Shikhar Dhawan

ಕೋಲ್ಕತ್ತಾ: ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಪ್ಲೇಆಫ್​ಗೇರುವ ಅವಕಾಶವನ್ನು ಜೀವಂತವಾಗಿರಿಸಲು ಜಿದ್ದಿಗೆ ಬಿದ್ದಿರುವ ಪಂಜಾಬ್ ಕಿಂಗ್ಸ್ ತಂಡ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ. ಇದು ಹಾಲಿ ಆವೃತ್ತಿಯ 53ನೇ ಪಂದ್ಯವಾಗಿದೆ. ಐತಿಹಾಸಿಕ ಈಡನ್​ ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ಈ ಹಣಾಹಣಿ ನಡೆಯುತ್ತಿದೆ.

ನಿತೀಶ್ ರಾಣಾ ನೇತೃತ್ವದ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಗೆಲುವು ಕಂಡಿತ್ತು. ಐದುರನ್​ಗಳಿಂದ ಹೈದರಾಬಾದ್ ವಿರುದ್ಧ ಗೆದ್ದ ಕಾರಣ ಖುಷಿಯಲ್ಲಿದೆ. ಅಂತೆಯೇ ತಂಡದ ಆರಂಭಿಕ ಬ್ಯಾಟರ್​ ಜೇಸನ್ ರಾಯ್ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಅತ್ತ ಪಂಜಾಬ್​ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 214 ರನ್ ಗಳಿಸಿದ್ದರೂ, 6 ವಿಕೆಟ್​ಗಳಿಂದ ಸೋತಿತ್ತು. ಈ ಮೂಲಕ ಬೌಲಿಂಗ್ ದೌರ್ಬಲ್ಯ ಪ್ರದರ್ಶಿಸಿತ್ತು. ಸದ್ಯ ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್​ ನಡೆಸದೇ ಹೋದರೆ ಮತ್ತೆ ಸೋಲು ಕಾಣುವ ಸಾಧ್ಯತೆ ಇದೆ.

ಸಂಭಾವ್ಯ ಆಡುವ ಬಳಗ

ಕೋಲ್ಕೊತಾ ನೈಟ್​ ರೈಡರ್ಸ್​​ : ಜೇಸನ್ ರಾಯ್, ರಹ್ಮನುಲ್ಲಾ ಗುರ್ಬಜ್​, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ IPL 2023: ಆರಂಭಿಕ ಸೋಲಿಗೆ ತವರಿನಲ್ಲಿ ಸೇಡು ತೀರಿಸೀತೇ ಮುಂಬೈ ಇಂಡಿಯನ್ಸ್​?

ಪಂಜಾಬ್​ ಕಿಂಗ್ಸ್​ : ಶಿಖರ್ ಧವನ್ (ನಾಯಕ), ಪ್ರಭ್​ಸಿಮ್ರಾನ್​ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್​ಸ್ಟನ್​, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್​​ದೀಪ್ಸಿಂಗ್.

ತಂಡಗಳ ಮುಖಾಮುಖಿ

ಇತ್ತಂಡಗಳ ಒಟ್ಟು ಮುಖಾಮುಖಿ- 31

ಕೋಲ್ಕೊತಾ ನೈಟ್​ ರೈಡರ್ಸ್ ಗೆಲುವು- 20

ಪಂಜಾಬ್​ ಕಿಂಗ್ಸ್​ ಗೆಲುವು- 11

Exit mobile version