Site icon Vistara News

IPL 2023 | ಐಪಿಎಲ್‍ನಲ್ಲಿ ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪಂಜಾಬ್​ ವೇಗಿ ಸಂದೀಪ್ ಶರ್ಮ!

sandeep sharma

ಮುಂಬಯಿ: ಕೊಚ್ಚಿಯಲ್ಲಿ ನಡೆದ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ(IPL 2023) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಕಳೆದ ವಾರ ಮುಕ್ತಾಯ ಕಂಡಿದೆ. ಈ ಹರಾಜಿನಲ್ಲಿ ಹಲವು ದೇಶೀಯ ಮತ್ತು ವಿದೇಶಿ ಆಟಗಾರರು ಭರ್ಜರಿ ಮೊತ್ತವನ್ನು ಪಡೆದಿದ್ದಾರೆ. ಆದರೆ ಅನುಭವಿ ವೇಗಿ ಸಂದೀಪ್ ಶರ್ಮಾ ಈ ಬಾರಿ ಸೇಲ್ ಆಗದೇ ಉಳಿದರು. ಇದು ಸ್ವತಃ ಸಂದೀಪ್​ ಅವರಿಗೆ ಬೇಸರ ಮೂಡಿಸಿದೆ.

“ತಾನು ಮಾರಾಟವಾಗದೆ ಇರುವುದನ್ನು ನೋಡಿ ಆಘಾತ ಮತ್ತು ನಿರಾಸೆ ಆಗಿದೆ. ನಾನು ಏಕೆ ಮಾರಾಟವಾಗದೆ ಹೋದೆ ಎಂದು ನನಗೆ ತಿಳಿದಿಲ್ಲ. ನಾನು ಯಾವ ತಂಡಕ್ಕಾಗಿ ಆಡಿದ್ದೇನೋ ಆ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದೇನೆ. ಕೆಲವು ತಂಡಗಳು ನನಗೆ ಬಿಡ್ ಮಾಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ ಆದರೆ ಹಾಗಾಲಿಲ್ಲ” ಎಂದು ಪಂಜಾಬ್ ವೇಗಿ ಸಂದೀಪ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

“ನಿಜ ಹೇಳಬೇಕೆಂದರೆ, ನಾನು ಇದನ್ನು ನಿರೀಕ್ಷಿಸಿರಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ರಣಜಿ ಟ್ರೋಫಿಯಲ್ಲಿ ಹಿಂದಿನ ಆವೃತ್ತಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದಿದ್ದೇನೆ. ಸಯ್ಯದ್​​ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದೇನೆ. ಹೀಗಿರುವಾಗ ಎಲ್ಲಿ ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ” ಎಂದು ಸಂದೀಪ್ ಬೇಸರ ತೋಡಿಕೊಂಡಿದ್ದಾರೆ.

“ನಾನು ಯಾವಾಗಲೂ ನನ್ನ ಬೌಲಿಂಗ್‍ನಲ್ಲಿ ಸ್ಥಿರವಾಗಿರಲು ಶ್ರಮಿಸುತ್ತಿರುತ್ತೇನೆ. ನನ್ನನ್ನು ತಿರಸ್ಕರಿಸುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೂ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಒಂದು ವೇಳೆ ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಸಂದೀಪ್​ ಶರ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | IPL Auction 2023 | ಮೊಮ್ಮಗನಿಗೆ ಸಿಕ್ಕಿದ ದುಡ್ಡಿನ ಕಂತೆ ನೋಡಿ ಖುಷಿಯಲ್ಲಿ ಕಣ್ಣೀರು ಹಾಕಿದ ಹ್ಯಾರಿ ಬ್ರೂಕ್​ ಅಜ್ಜಿ!

Exit mobile version