Site icon Vistara News

IPL 2023: ಪಂಜಾಬ್​-ರಾಜಸ್ಥಾನ್​ ಮಧ್ಯೆ ಕಾದಾಟ; ಸೋತ ತಂಡ ಮನೆಗೆ

Rajasthan Royals

ಧರ್ಮಶಾಲ: ಪ್ಲೇ ಆಫ್​ ರೇಸ್​ನಲ್ಲಿ ಕ್ಷೀಣ ಅವಕಾಶ ಹೊಂದಿರುವ ಒಂದೇ ದೋಣಿಯ ಎರಡು ಪಯಣಿಗರಾದ ಪಂಜಾಬ್​ ಕಿಂಗ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ ಶುಕ್ರವಾರದ ಐಪಿಎಲ್​ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಇಲ್ಲಿ ಸೋತ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಈ ತಂಡ ಯಾವುದು ಎಂಬುದು ಪಂದ್ಯದ ಕೌತುಕ. ಇತ್ತಂಡಗಳ ಈ ಹಣಾಹಣಿ ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ನಡೆಯಲಿದೆ.

ಪಂಜಾಬ್​ ತಂಡಕ್ಕೆ ಪ್ಲೇ ಆಫ್​ ಪ್ರವೇಶಿಸುವ ಸುವರ್ಣ ಅವಕಾಶವೊಂದಿತ್ತು. ಆದರೆ ಬುಧವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡದ್ದೇ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಒಂದೊಮ್ಮೆ ಪಂಜಾಬ್​ ಈ ಪಂದ್ಯ ಗೆದ್ದರೆ 14 ಅಂಕ ಗಳಿಸಲಿದೆ. ಆದರೂ ಪಂಜಾಬ್​ಗೆ ಪ್ಲೇ ಆಫ್​ ಪ್ರವೇಶಿಸುವುದು ಕಷ್ಟ. ಏಕೆಂದರೆ ರನ್​ರೇಟ್​ ಕಳಪೆಯಾಗಿದೆ. ಅತ್ಯಂತ ದೊಡ್ಡ ಅಂತರದಿಂದ ಗೆದ್ದರೂ ತನಗಿಂತ ಮೇಲಿರುವ ತಂಡಗಳು ದೊಡ್ಡ ಅಂತರದಿಂದ ಸೋಲು ಕಂಡರೆ ಆಗ ಪಂಜಾಬ್​ಗೆ ಒಂದು ಅವಕಾಶ ಸಿಗಲಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪಂಜಾಬ್​ ತನಗಿಂತ ಮೇಲಿರುವ ತಂಡಗಳ ಸೋಲನ್ನು ಬಯಸಬೇಕಿದೆ.

ರಾಜಸ್ಥಾನ್​ ಸ್ಥಿತಿಯೂ ಪಂಜಾಬ್​ನಂತೆಯೇ ಇದೆ. ಆರಂಭಿಕ ಹಂತದಲ್ಲಿ ಅಬ್ಬರ ಆಟವಾಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ರಾಜಸ್ಥಾನ್​ ಆ ಬಳಿಕ ಸತತ ಪಂದ್ಯಗಳನ್ನು ಸೋಲುತ್ತಾ ಸಾಗಿ ಇದೀಗ ಟೂರ್ನಿಯ ನಿರ್ಗಮನದ ಬಾಗಿಲಿಗೆ ಬಂದು ನಿಂತಿದೆ. ವಿಶ್ವದ ಅಗ್ರ ಕ್ರಿಕೆಟಿಗರನ್ನು ಹೋಂದಿರುವ ತಂಡ ಎಂಬ ಖ್ಯಾತಿ ಪಡೆದಿದ್ದ ಸಂಜು ಪಡೆ ಕಳೆದ ಆರ್​ಸಿಬಿ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಕೇವಲ 59ರನ್​ಗೆ ಆಲೌಟ್​ ಆಗಿ ತೀವ್ರ ಮುಖಭಂಗ ಎದುರಿಸಿತ್ತು.

ಇದನ್ನೂ ಓದಿ IPL 2023: ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಂಡ ತಂಡಗಳೆಷ್ಟು; ಆರ್​ಸಿಬಿ ಸ್ಥಿತಿ ಹೇಗಿದೆ; ಸಂಪೂರ್ಣ ಮಾಹಿತಿ ಇಲ್ಲಿದೆ

ಸಂಭಾವ್ಯ ತಂಡಗಳು

ಪಂಜಾಬ್​ ಕಿಂಗ್ಸ್​ : ಶಿಖರ್ ಧವನ್ (ನಾಯಕ), ಪ್ರಭ್​ಸಿಮ್ರಾನ್​ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್​ಸ್ಟನ್​, ಜಿತೇಶ್ ಶರ್ಮಾ, ಸ್ಯಾಮ್ ಕರನ್​, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್​​ದೀಪ್​ ಸಿಂಗ್​.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೈಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಯಜ್ವೇಂದ್ರ ಚಹಲ್, ಟ್ರೆಂಟ್​ ಬೌಲ್ಟ್​

Exit mobile version