ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಡೆದ ಐಪಿಎಲ್ 16ನೇ ಆವೃತ್ತಿಯ 38ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜಂಟ್ಸ್ ತಂಡ 57 ರನ್‌ಗಳ ಸುಲಭ ಜಯ ಕಂಡಿದೆ. ಆದರೆ, ಕೆ. ಎಲ್ ರಾಹುಲ್ಗೆ ಈ ಗೆಲುವಿವಿಂದ ಖುಷಿ ಆಗಿಲ್ಲ. ಯಾಕೆಂದರೆ ಅವರ ತಂಡ ಅದಕ್ಕಿಂತ ಹಿಂದಿನ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಕೆಲವೇ ರನ್‌ಗಳ ಅಂತರದಿಂದ ಸೋತಿರುವ ಬಗ್ಗ ಅವರಿಗೆ ಬೇಸರವಿದೆ. ಈ ಬಗ್ಗೆ ಪಂಜಾಬ್ ವಿರುದ್ಧದ ಪಂದ್ಯ ಮುಗಿದ ಬಳಿಕ ರಾಹುಲ್ ಹೇಳಿಕೊಂಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 22ರಂದು ಲಖನೌನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡಿ ಎದುರಾಳಿ ಗುಜರರಾತ್ ಟೈಟನ್ಸ್ ತಂಡವನ್ನು 135 ರನ್‌ಗಳಿಗೆ ಕಟ್ಟಿ ಹಾಕಿತ್ತು. ಬಳಿಕ ಬ್ಯಾಟ್ ಮಾಡಿದ ಲಕ್ನೊ ತಂಡ 128 ರನ್ ಗಳಿಸಿ 7 ರನ್‌ಗಳ ಸೋಲಿಗೆ ಒಳಗಾಯಿತು. ಈ ಬೇಸರ ಇನ್ನೂ ರಾಹುಲ್ ಮನದಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಬ್ಯಾಟರ್‌ಗಳ 257 ರನ್ ಚಚ್ಚಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ 2 ನೇ ತಂಡ ಎಂದು ಖ್ಯಾತಿ ಪಡೆದುಕೊಂಡರೂ ಅವರಿಗೆ ಹಳೆ ನೋವು ಮಾಸಿಲ್ಲ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡ ಕೆಟ್ಟದಾಗಿ ಆಡಿತು. ಹೀನಾಯ ಸೋಲು ನಮ್ಮನ್ನು ಕಾಡುತ್ತಿದೆ. ಆ ಪಂದ್ಯದ ನಂತರ ಮೂರ್ನಾಲ್ಕು ದಿನ ವಿಶ್ರಾಂತಿ ದೊರೆತ ಕಾರಣ ನೋವು ಮರೆಯಿತು. ತವರು ಅಂಗಣದಲ್ಲಿ ಆಡುವಾಗ ಹೆಚ್ಚು ಒತ್ತಡವಿರುತ್ತದೆ. ಆದರೆ, ಒಂದು ಭಾರಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬಳಿಕ ನೆಮ್ಮದಿಯಾಗಿದೆ ಎಂದು ಹೇಳಿದರು.
ಪಂದ್ಯದಲ್ಲಿ ಏನಾಯಿತು?
38ನೇ ಪಂದ್ಯದಲ್ಲಿ ರನ್‌ಗಳ ಮಳೆಯೇ ಸುರಿಯಿತು. ದೊಡ್ಡ ಮೊತ್ತದ ಈ ಪಂದ್ಯದಲ್ಲಿ ಗೆಲುವು ಪ್ರವಾಸಿ ಲಕ್ನೊ ತಂಡದ ಪಾಲಾಯಿತು. ಆತಿಥೇಯ ಪಂಜಾಬ್ ತಂಡವೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ, 258 ರನ್‌ಗಳ ಗುರಿಯನ್ನು ಭೇದಿಸಲು ಸಾಧ್ಯವಾಗದೇ 56 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಲಕ್ನೊ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿದರೆ, ಪಂಜಾಬ್ ಬಳಗ ಸೋಲಿಗೆ ಸುಳಿಗೆ ಸಿಲುಕಿತು. ಇದು ಪಂಜಾಬ್ನ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಹಾಲಿ ಆವೃತ್ತಿಯಲ್ಲಿ ದಾಖಲಾದ ಮೊದಲ 200 ಪ್ಲಸ್ ರನ್
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆತಿಥೇಯ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಲಕ್ನೊ ಬ್ಯಾಟರ್ಗಳು ಮೈದಾನ ತುಂಬೆಲ್ಲ ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದರು. ಇದರಿಂದಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ತಂಡ 19 .5 ಓವರ್ಗಳಲ್ಲಿ 201 ರನ್‌ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು.