ಕೋಲ್ಕೊತಾ: ಶನಿವಾರದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಕೋಲ್ಕತ್ತಾದಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದ್ದು ಶನಿವಾರ ರಾತ್ರಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರ ರಾತ್ರಿ ಸುರಿದ ಮಳೆಗೆ ಮೈದಾನವನ್ನು ಸಂಪೂರ್ಣವಾಗಿ ಕವರ್ನಿಂದ ಮುಚ್ಚಲಾಗಿತ್ತು. ಒಂದೊಮ್ಮೆ ಶನಿವಾರ ಮಳೆಯಿಂದ ಪಂದ್ಯ ಮಳೆಯಿಂದ ರದ್ದಾರೆ ಆಗ ಲಕ್ನೋ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕೆಕೆಆರ್ ಟೂರ್ನಿಯೊಂದ ಹೊರಬೀಳಲಿದೆ. ಇನ್ನೊಂದಡೆ ಬೆಂಗಳೂರಿನಲ್ಲಿಯೂ ಶನಿವಾರ ಜೋರು ಮಳೆಯಾಗಿದ್ದು, ಭಾನುವಾರ ನಡೆಯುವ ಮಹತ್ವದ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಮಳೆಯಿಂದ ಆರ್ಸಿಬಿ ಮತ್ತು ಗುಜರಾತ್ ನಡುವಣ ಪಂದ್ಯ ರದ್ದಾದರೆ ಇದಕ್ಕೂ ಮುನ್ನ ನಡೆಯುವ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ, ಆರ್ಸಿಬಿ ಪ್ಲೇ ಆಪ್ ರೇಸ್ನಿಂದ ಹೊರಬೀಳಲಿದೆ. ಒಟ್ಟಾರೆ ಅಂತಿಮ ಹಂತದಲ್ಲಿ ಮಳೆ ಯಾವ ತಂಡಕ್ಕೆ ತಣ್ಣೀರೆರಚಲಿದೆ ಎಂದು ಕಾದು ನೋಡಬೇಕಿದೆ.
ಕೋಲ್ಕತ್ತಾ ತಂಡ ಸದ್ಯ ಗೆದ್ದರೂ ಪ್ಲೇ ಆಪ್ ಪ್ರವೇಶ ಕಷ್ಟ ಸಾಧ್ಯ. 14 ಅಂಕ ಸಂಪಾದಿಸಿದರೂ ರನ್ ರೇಟ್ ಕಡಿಮೆ ಇದೆ. ಜತೆಗೆ ತನಗಿಂತ ಮೇಲಿರುವ ತಂಡಗಳು ದೊಡ್ಡ ಅಂತದಿಂದ ಸೋಲು ಕಾಣಬೇಕು. ಹೀಗಾಗಿ ಕ್ಷೀಣ ಅವಕಾಶ ಎನ್ನಬಹುದು. ಸದ್ಯ ಲಕ್ನೋ ತಂಡ 15 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೆಕೆಆರ್ ವಿರುದ್ಧ ಗೆದ್ದರೆ ದ್ವಿತೀಯ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ಗೆ ಲಗ್ಗೆ ಇಡಲಿದೆ.
ಇದನ್ನೂ ಓದಿ IPL 2023: ಕಾನ್ವೆ-ಗಾಯಕ್ವಾಡ್ ಅರ್ಧಶತಕ; ಬೃಹತ್ ಮೊತ್ತ ದಾಖಲಿಸಿದ ಚೆನ್ನೈ
ಸಂಭಾವ್ಯ ತಂಡಗಳು
ಲಕ್ನೊ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ (ನಾಯಕ), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯಿ, ಮೊಹ್ಸಿನ್ ಖಾನ್, ಅವೇಶ್ ಖಾನ್.
ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ರಹ್ಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.