ಜೈಪುರ: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡ ರಾಜಸ್ಥಾನ್ ರಾಯಲ್ಸ್ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ನಡೆಯುವ ದ್ವಿತೀಯ ಪಂದ್ಯದಲ್ಲಿ ದುರ್ಬಲ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಹೈದರಾಬಾದ್ ತಂಡ 9 ಪಂದ್ಯಗಳನ್ನು ಆಡಿದ್ದು ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿ 6 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ. ಪ್ಲೇ ಆಪ್ ರೇಸ್ ಜೀವಂತವಿರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಒಂದೊಮ್ಮೆ ಈ ಪಂದ್ಯದಲ್ಲಿಯೂ ಸೋಲು ಕಂಡರೆ ಸನ್ರೈಸರ್ಸ್ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯ ಆರಂಭಿಕ ಹಂತದಲ್ಲಿ ಭರ್ಜರಿ ಆಟವಾಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಬಳಿಕ ನೀರಸ ಪ್ರದರ್ಶನ ತೋರುವ ಮೂಲಕ ಇದೀಗ ಸೋಲಿನ ಸುಳಿಗೆ ಸಿಲುಕಿದೆ. ಜಾಸ್ ಬಟ್ಲರ್, ಶಿಮ್ರಾನ್ ಹೆಟ್ಮೈರ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಜತೆಗೆ ಬೌಲರ್ಗಳಾದ ಟ್ರೆಂಟ್ ಬೌಲ್ಟ್, ಚಹಲ್, ಅಶ್ವಿನ್ ಮೋಡಿ ಮಾಡುವಲ್ಲಿ ಎಡವುತ್ತಿದ್ದಾರೆ.
ಇದನ್ನೂ ಓದಿ IPL 2023 : ಗಂಭೀರ್ ಜತೆ ಗಲಾಟೆ ಬಗ್ಗೆ ಬಿಸಿಸಿಐಗೆ ವಿವರಣೆ ನೀಡಿದ ವಿರಾಟ್ ಕೊಹ್ಲಿ, ದಂಡಕ್ಕೆ ಅಸಮಾಧಾನ
ಹೈದರಾಬಾದ್ ತಂಡದಲ್ಲಿ ವಿಶ್ವ ದರ್ಜೆಯ ಬ್ಯಾಟರ್ಗಳು ಮತ್ತು ಬೌಲರ್ಗಳ ಪಡೆಯೇ ಹೊಂದಿದ್ದರೂ ಯಾರು ಕೂಡ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಬೌಲಿಂಗ್ನಲ್ಲಿ ಕಳಪೆ, ಬೌಲಿಂಗ್ನಲ್ಲಿ ಹಿಡಿತ ಸಾಧಿಸಿದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಇದು ತಂಡದ ಸ್ಥಿರ ಪ್ರದರ್ಶನವಾಗಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ತಂಡದ ಮೇಲೆ ನಂಬಿಕೆ ಇರಿಸುವುದು ಕಷ್ಟ ಸಾಧ್ಯ.
ಪಿಚ್ ರಿಪೋರ್ಟ್
ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನ ಪಿಚ್ ಬ್ಯಾಟರ್‌ಗಳಿಗೆ ರನ್‌ಗಳಿಸಲು ಅತ್ಯಂತ ಕಠಿಣ ಪಿಚ್ ಎನಿಸಿಕೊಂಡಿದೆ. ಇಲ್ಲಿ ಸ್ಪಿನ್ನರ್‌ಗಳಿಗೆ ವಿಕೆಟ್ ಪಡೆಯಲು ಉತ್ತಮ ಅವಕಾಶವಿದೆ. ಹೀಗಾಗಿ ಉಭಯ ತಂಡಗಳು ಸ್ಪಿನ್ ಬೌಲಿಂಗ್ಗೆ ಹೆಚ್ಚಿನ ಮಹತ್ವ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2023 : ಲಕ್ನೊ ವಿರುದ್ಧವೂ ಗೆಲುವಿನ ಅಭಿಯಾನ ಮುಂದುವರಿಸುವುದೇ ಗುಜರಾತ್?
ಸಂಭಾವ್ತ ತಂಡಗಳು
ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ತ ಪಡಿಕ್ಕಲ್, ಶಿಮ್ರೋನ್ ಹೆಟ್ಮೈರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಆ್ಯಡಂ ಜಂಪಾ, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯಜುವೇಂದ್ರ ಚಹಾಲ್.
ಸನ್‌ರೈಸರ್ಸ ಹೈದರಾಬಾದ್: ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೆನ್, ಅಕೇಲ್ ಹೊಸೈನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ. ನಟರಾಜನ್, ಕಾರ್ತಿಕ್ ತ್ಯಾಗಿ.