ಗುವಾಹಟಿ: ಆಡಿದ ಮೊದಲ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್(Rajasthan Royals) ಮತ್ತು ಪಂಜಾಬ್ ಕಿಂಗ್ಸ್(Punjab Kings) ಬುಧವಾರದ ಐಪಿಎಲ್ನ(IPL 2023) 8ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇಲ್ಲಿ ಒಂದು ತಂಡ ಟೂರ್ನಿಯಲ್ಲಿ ಮೊದಲ ಸೋಲು ಕಾಣಲಿದೆ. ಆ ತಂಡ ಯಾವುದೆಂಬುವುದು ಈ ಪಂದ್ಯದ ಕೂತೂಹಲ. ಇದು ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುವ ಮೊದಲ ಐಪಿಎಲ್ ಪಂದ್ಯವಾಗಿದೆ. ಫುಟ್ಬಾಲ್ ಪ್ರಿಯ ಈಶಾನ್ಯದ ಅಭಿಮಾನಿಗಳಿಗೆ ಕ್ರಿಕೆಟ್‌ನಲ್ಲೂ ಆಸಕ್ತಿ ಹುಟ್ಟಿಸಲು ಈ ಪಂದ್ಯ ಉತ್ತೇಜನ ನೀಡುವ ಸಾಧ್ಯತೆಯಿದೆ.
ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದೆ. ದಕ್ಷಿಣ ಆಫ್ರಿಕಾದ ಆಟಗಾರರು ಕೂಡ ತಂಡ ಸೇರಿದ್ದಾರೆ. ಹೀಗಾಗಿ ಈ ಹೋರಾಟ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ರಾಯಲ್ಸ್ ತಂಡವು ಜಾಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಈ ಪಂದ್ಯದಲ್ಲಿಯೂ ಅವರು ಬ್ಯಟಿಂಗ್ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಬೌಲಿಂಗ್ನಲ್ಲಿ ಅನುಭವಿ ಆರ್. ಅಶ್ವಿನ್ ಯಜುವೇಂದ್ರ ಚಹಲ್ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ವಿಕೆಟ್ ಟೇಕರ್ ಬೌಲರ್‌ಗಳ ಪಡೆಯೇ ಇದೆ. ಆದರೆ ಪಡಿಕ್ಕಲ್ ಬ್ಯಾಟ್ ಮಾತ್ರ ಸದ್ದು ಮಾಡುತ್ತಿಲ್ಲ.
ಶಿಖರ್ ಧವನ್ ಸಾರಥ್ಯದ ಪಂಜಾಬ್ ಕಿಂಗ್ಸ್ ಕೂಡ ಸಮರ್ಥವಾಗಿದೆ. ಭಾನುಕಾ ರಾಜಪಕ್ಸೆ, ಶಾರುಖ್ ಖಾನ್ ಬ್ಯಾಟಿಂಗ್ ವಿಭಾಗದ ಬಲವಾದರೆ, ಬೌಲಿಂಗ್ನಲ್ಲಿ ಕಗಿಸೊ ರಬಾಡ, ಅರ್ಶ್ದೀಪ್ ಸಿಂಗ್, ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರಿಗೆ ರಾಹುಲ್ ಚಹಾರ್ ಮತ್ತು ಸಿಕಂದರ್ ರಜಾ ಕೂಡ ಉತ್ತಮ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ IPL Team Record: ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ 200 ಮತ್ತು ಅದಕ್ಕಿಂತ ಹೆಚ್ಚು ರನ್ ಬಾರಿಸಿದ ತಂಡಗಳು
ಸಂಭಾವ್ಯ ತಂಡ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ತ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆ.ಎಂ ಆಸಿಫ್, ಯಜುವೇಂದ್ರ ಚಹಲ್.
ಪಂಜಾಬ್ ಕಿಂಗ್ಸ್ : ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಸಿಕಂದರ್ ರಜಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್, ಅರ್ಶ್ದೀಪ್ ಸಿಂಗ್, ಕಗಿಸೊ ರಬಾಡ.