Site icon Vistara News

IPL 2023: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್​

Sawai Mansingh Stadium At Jaipur

ಜೈಪುರ: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್‌ ಟೈಟನ್ಸ್‌ ತಂಡವು 16ನೇ ಆವೃತ್ತಿಯ ಐಪಿಎಲ್​ನ 48ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​​ ವಿರುದ್ಧ ಟಾಸ್​ ಸೋತು ಬೌಲಿಂಗ್​ ಆಹ್ವಾನ ಪಡೆದಿದೆ. ರಾಜಸ್ಥಾನ್​ ಬ್ಯಾಟಿಂಗ್​ ಆಯ್ಕೆ ಮಾಡಿದೆ.

ಬಲಾಬಲ ಹೇಗಿದೆ?

ರಾಜಸ್ಥಾನ್​​ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಜಾಸ್​ ಬಟ್ಲರ್ ಆಧಾರ. ಭರ್ಜರಿ ಬ್ಯಾಟಿಂಗ್ ಮೂಲಕ ಅವರು ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತಿದ್ದಾರೆ. ಅದರಲ್ಲೂ ಜೈಸ್ವಾಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದೆ. ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಿಗದೆ ದೇವದತ್ತ ಪಡಿಕ್ಕಲ್ ರನ್​ ಗಳಿಸಲು ಪೇಚಾಡುತ್ತಿದ್ದಾರೆ. ಧ್ರುವ್ ಜುರೆಲ್ ಮತ್ತು ಜೇಸನ್ ಹೋಲ್ಡರ್ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ. ಬೌಲಿಂಗ್​ನಲ್ಲಿ ​ ಸ್ಪಿನ್ನರ್​ಗಳಾದ ಯಜುವೇಂದ್ರ ಚಹಲ್, ಅಶ್ವಿನ್ ಮತ್ತು ಆ್ಯಡಂ ಜಂಪಾ ಎದುರಾಳಿ ತಂಡಕ್ಕೆ ಆಘಾತ ನೀಡುತ್ತಿದ್ದಾರೆ. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡನ್, ಕುಲ್ದೀಪ್ ಸೇನ್ ವೇಗದ ಬೌಲಿಂಗ್ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ.

ಗುಜರಾತ್​ ತಂಡದ ಪರ ಪ್ರತಿಯೊಬ್ಬ ಆಟಗಾರನೂ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ತಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್ ಹಿಂದಿನ ಪಂದ್ಯದಲ್ಲಿ ಫೇಲ್​. ಉಳಿದಂತೆ ಅವರು ತಂಡಕ್ಕೆ ಆಧಾರವಾಗಿದ್ದಾರೆ.

ಇದನ್ನೂ ಓದಿ Batsmen with the most runs in the death overs in IPL 2023: 2023ನೇ ಆವೃತ್ತಿಯ ಐಪಿಎಲ್​​ನಲ್ಲಿ ಇದುವರೆಗೆ ಡೆತ್​ ಓವರ್​ಗಳಲ್ಲಿ ಹೆಚ್ಚು ರನ್​ ಬಾರಿಸಿದ ಬ್ಯಾಟರ್​​ಗಳು

ಸಂಭಾವ್ಯ ಆಡುವ ಬಳಗ

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜಾಸ್​ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ನ್ ಹೆಟ್ಮಾಯೆರ್‌, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

ಗುಜರಾತ್ ಟೈಟನ್ಸ್​: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್

Exit mobile version