ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿದೆ. ಆರ್‌ಸಿಬಿ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಕಳೆದ ಬಾರಿಯಂತೆಯೇ ಫಾಫ್ ಡು ಪ್ಲೆಸಿಸ್ ಅವರು ಇಂಪ್ಯಾಕ್ಟ್ ಪ್ಲೇಯರ್ ಆದ ಕಾರಣ ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿಯೇ ಆರ್‌ಸಿಬಿ ತಂಡವನ್ನು ಮುನ್ನಡೆಸಿದರು. ಟಾಸ್ ವೇಳೆ ಉಭಯ ತಂಡಗಳ ಆಟಗಾರರು ಗೋ ಗ್ರೀನ್’ ಅಭಿಯಾನದ ಅಂಗವಾಗಿ ಗಿಡಗಳನ್ನು ಪರಸ್ಪರ ಹಂಚಿಕೊಂಡರು.
‘ಗೋ ಗ್ರೀನ್’ ಅಭಿಯಾನದ ಅಂಗವಾಗಿ ಆರ್‌ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಆಡಲಿಳಿದಿದೆ. ಈ ಉಡುಗೆ ಆರ್‌ಸಿಬಿ ಪಾಲಿಗೆ ಅದೃಷ್ಟ ತಂದೀತೇ ಎಂಬುದು ಎಲ್ಲರ ನಿರೀಕ್ಷೆ. ಏಕೆಂದರೆ ಆರ್‌ಸಿಬಿ ಈ ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಐಪಿಎಲ್‌ನಲ್ಲಿ ಹಸಿರು ಜೆರ್ಸಿಯಲ್ಲಿ ಇದುವರೆಗೆ ಒಟ್ಟು 11 ಪಂದ್ಯಗಳನ್ನು ಆಡಿದೆ. ಈ ಹನ್ನೊಂದು ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದೀಗ ಈ ಪಂದ್ಯದಲ್ಲಿ ಗೆಲವು ಸಾಧಿಸೀತೇ ಎಂದು ಕಾದು ನೋಡಬೇಕಿದೆ.
ರಾಜಸ್ಥಾನ್ ತಂಡ ಅತ್ಯಂತ ಬಲಿಷ್ಠವಾಗಿದ್ದು ಈಗಾಗಲೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬ್ಯಾಟಿಂಗ್, ಬೌಲಿಂಗ್ ಎಲ್ಲ ವಿಭಾಗದಲ್ಲಿಯೂ ತಂಡ ಹೆಚ್ಚು ಸಮತೋಲಿತವಾಗಿದೆ. ಆದರೆ ಆರ್‌ಸಿಬಿ ತಂಡ ಭವಿಷ್ಯ ಕೇವಲ ನಾಲ್ಕು ಆಟಗಾರರ ಪ್ರದರ್ಶನ ಮೇಲೆ ನಿಂತಿದೆ. ಒಂದೊಮ್ಮೆ ಇವರೆಲ್ಲ ಕೈ ಕೊಟ್ಟರೆ ತಮಡದಕ್ಕೆ ಆಸರೆಯಾಗಬಲ್ಲ ಆಟಗಾರರು ತಂಡದಲ್ಲಿಲ್ಲ. ಅದರಲ್ಲೂ ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಹೆಟ್ಮೈರ್ ಅವರಂತಹ ಹೊಡಿ ಬಡಿ ಆಟಗಾರರಿಗೆ ಬ್ಯಾಟಿಂಗ್ ಟ್ರ್ಯಾಕ್ ಚಿನ್ನಸ್ವಾಮಿ ಸ್ಟೇಡಿಯಂ ಹೇಳಿ ಮಾಡಿಸಿದಂತಿದೆ. ಹೀಗಾಗಿ ಈ ಪಂದ್ಯದಲ್ಲಿ ಹೈ ಸ್ಕೋರ್ ನಿರೀಕ್ಷೆ ಮಾಡಬಹುದು.
ಇದನ್ನೂ ಓದಿ IPL 2023: ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್
ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೇರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ಯಜುವೇಂದ್ರ ಚಹಾಲ್. ಇಂಪ್ಯಾಕ್ಟ್ ಪ್ಲೇಯರ್ಸ್: ದೇವದತ್ತ ಪಡಿಕ್ಕಲ್, ಮುರುಗನ್ ಅಶ್ವಿನ್, ಡೊನಾವೊನ್ ಫೆರೇರಾ, ನವದೀಪ್ ಸೈನಿ, ಜೋ ರೂಟ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ(ನಾಯಕ), ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶದೀಪ್, ಹಿಮಾಂಶು ಶರ್ಮಾ, ಮಿಚೆಲ್ ಬ್ರೇಸ್‌ವೆಲ್, ವೈಶಾಖ್ ವಿಜಯ್ ಕುಮಾರ್.