Site icon Vistara News

IPL 2023| ಆರ್‌ಸಿಬಿ ಬಳಗ ಸೇರಲಿದ್ದಾರೆ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌, ಯಾರವರು?

t20

ಮುಂಬಯಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023)ಗೆ ಈಗಾಗಲೇ ತಯಾರಿ ಪ್ರಕ್ರಿಯೆಗಳು ಆರಂಭವಾಗಿದೆ. ಅದರಂತೆ ಡಿಸೆಂಬರ್​ 16ಕ್ಕೆ ಆಟಗಾರರ ಹರಾಜು ನಡೆಸಲು ಬಿಸಿಸಿಐ ಸಿದ್ಧತೆಯೂ ನಡೆಸಿದೆ. ಇದಕ್ಕೂ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರ ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಐಪಿಎಲ್​ನ ಹತ್ತು ಫ್ರಾಂಚೈಸಿಗಳು ಮುಂದಿನ ಟೂರ್ನಿಗೆ ತಂಡದಿಂದ ಕೈಬಿಡಲು ಇಚ್ಚಿಸುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ. ಅಲ್ಲದೆ ಆಟಗಾರರ ಟ್ರೇಡಿಂಗ್​ಗೆ ಸಂಬಂಧಿಸಿದಂತೆ ಫ್ರಾಂಚೈಸಿಗಳ ನಡುವೆ ಚರ್ಚೆಯೂ ಆರಂಭವಾಗಿದೆ. ಅದರಂತೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಟ್ರೇಡಿಂಗ್ ಒಪ್ಪಂದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಂಪರ್ಕಿಸಿದೆ ಎಂಬ ಸುದ್ದಿ ಬಂದಿದೆ.

ಆರ್‌ಸಿಬಿಯು ಯಾವ ಆಟಗಾರನನ್ನು ತಂಡದಿಂದ ಕೈಬಿಡಲು ಮತ್ತು ತಂಡಕ್ಕೆ ಕರೆತರಲು ಯೋಚಿಸಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ರವೀಂದ್ರ ಜಡೇಜಾ ಅವರು ಆರ್​ಸಿಬಿಗೆ ಬರಲಿದ್ದಾರೆ. ಅದರಂತೆ ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿಸ್​ ಅವರನ್ನು ಚೆನ್ನೈ ತಂಡಕ್ಕೆ ಬಿಟ್ಟುಕೊಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಟ್ವಿಟರ್​ನಲ್ಲಿ ಜಡೇಜಾ ಮತ್ತು ಡು ಪ್ಲೆಸಿಸ್​ ಫೋಟೊ ಎಲ್ಲಡೆ ಹರಿದಾಡುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ ಸೀಸನ್​ನಲ್ಲಿ ಆರಂಭದಲ್ಲಿ ಜಡೇಜಾ ಅವರನ್ನು ಸಿಎಸ್​ಕೆ ತಂಡದ ನಾಯಕರಾಗಿ ನೇಮಕ ಮಾಡಲಾಗಿತ್ತು. ಆದರೆ ತಂಡ ಸತತ ಸೋಲು ಕಂಡ ಕಾರಣ ಧೋನಿ ಅವರು ಮತ್ತೆ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡರು. ಇದರಿಂದ ಜಡೇಜಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಸಿಎಸ್‌ಕೆ ಫ್ರಾಂಚೈಸಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಜಡೇಜಾ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ | T20 World Cup | ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಹುಲ್​ ಬದಲು ಪಂತ್​ಗೆ ಅವಕಾಶ?

Exit mobile version