Site icon Vistara News

IPL 2023: ಟೂರ್ನಿಯಿಂದ ಹೊರಬಿದ್ದರೂ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡ ಆರ್​ಸಿಬಿ ನಾಯಕ

faf du plessis rcb captain

ಅಹಮದಾಬಾದ್​: ಈ ಬಾರಿ ಐಪಿಎಲ್​ ಟೂರ್ನಿಯಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಲೀಗ್​ ಹಂತದಲ್ಲಿಯೇ ಸೋತು ಟೂರ್ನಿಯಿಂದ ಹೊರಬಿದ್ದಿದೆ. ತಂಡದ ನಾಯಕ ಫಾಫ್​ ಡು ಪ್ಲೆಸಿಸ್​ ಮತ್ತು ವಿರಾಟ್​ ಕೊಹ್ಲಿ ಅವರು ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಸೋಲು ಕಂಡು ಹೊರ ಬಿದ್ದ ಬಳಿಕ ತಂಡದ ಆಟಗಾರರೆಲ್ಲ ತಮ್ಮ ತವರಿಗೆ ಮರಳಿದ್ದಾರೆ. ಆದರೆ ಫಾಫ್​ ಡು ಪ್ಲೆಸಿಸ್ ಮಾತ್ರ ಹೊಸ ಕರ್ತವ್ಯದೊಂದಿಗೆ ಟೂರ್ನಿಯಲ್ಲಿ ಮುಂದುವರಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಮತ್ತು ಫೈನಲ್​ ಪಂದ್ಯದಲ್ಲಿ ಡು ಪ್ಲೆಸಿಸ್ ಅವರು ಟಿವಿ ಪ್ರಸಾರಕರ ತಜ್ಞರ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇಲ್ಲಿ ಕ್ರಿಕೆಟ್ ಮತ್ತು ಆಟಗಾರರ ಕುರಿತಾದ ಮಹತ್ವದ ಮಾಹಿತಿಗಳನ್ನು ವಿಶ್ಲೇಷಣೆ ಮಾಡಲಿದ್ದಾರೆ. ಈ ವಿಚಾರವನ್ನು ಡು ಪ್ಲೆಸಿಸ್​ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ.

ಇದನ್ನೂ ಓದಿ IPL 2023: ಫೈನಲ್ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ; ಯಾರೆಲ್ಲ ಭಾಗಿ?

ಡು ಪ್ಲೆಸಿಸ್​ ಹಿಂದಿಕ್ಕುವರೇ ಗಿಲ್​?

ಸದ್ಯ ಆರ್​ಸಿಬಿ ತಂಡದ ಫಾಪ್​ ಡು ಪ್ಲೆಸಿಸ್​ ​ಅವರು ಅತಿ ಹೆಚ್ಚು ರನ್​ ಗಳಿಸಿ ಆರೆಂಜ್​ ಕ್ಯಾಪ್ ಪಡೆದಿದ್ದಾರೆ. ಅವರು 14 ಪಂದ್ಯಗಳನ್ನು ಆಡಿ 730 ರನ್​ ಬಾರಿಸಿದ್ದಾರೆ. ಇವರನ್ನು ಹಿಂದಿಕ್ಕುವ ಅವಕಾಶ ಗುಜರಾತ್​ ಟೈಟನ್ಸ್​ ತಂಡದ ಆಟಗಾರ ಶುಭಮನ್​ ಗಿಲ್​ಗೆ ಇದೆ. ಗಿಲ್​ ಅವರು 15 ಪಂದ್ಯಗಳಿಂದ 722 ರನ್​ ಗಳಿಸಿದ್ದಾರೆ. ಮುಂಬೈ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಗಿಲ್​ 8 ರನ್​ ಬಾರಿಸಿದರೆ ಅಗ್ರಸ್ಥಾನಕ್ಕೇರಲಿದ್ದಾರೆ. ಈಗಾಗಲೇ ಆರ್​ಸಿಬಿ ಸೋತು ಟೂರ್ನಿಯಿಂದ ಹೊರಬಿದ್ದ ಕಾರಣ ಡು ಪ್ಲೆಸಿಸ್​ಗೆ ಗಿಲ್​ ದಾಖಲೆ ಮುರಿಯುವ ಅವಕಾಶವಿಲ್ಲ. ಮೂರನೇ ಸ್ಥಾನದಲ್ಲಿರುವ ಕೊಹ್ಲಿಗೂ ಅಸಾಧ್ಯ. ಹೀಗಾಗಿ ಈ ಬಾರಿ ಗಿಲ್ ಅವರು ಆರೆಂಜ್​ ಕ್ಯಾಪ್​ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಅಧಿಕ.

Exit mobile version