Site icon Vistara News

IPL 2023: ಆರ್​ಸಿಬಿಗೆ ಗಾಯದ ಚಿಂತೆ; ಸ್ಟಾರ್​ ಆಟಗಾರರು ಟೂರ್ನಿಯಿಂದ ಔಟ್​?

ipl-2023-rcbs-injury-worries-star-players-out-of-the-tournament

ipl-2023-rcbs-injury-worries-star-players-out-of-the-tournament

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 2023ರ(IPL 2023) ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. 16ನೇ ಆವೃತ್ತಿಯ ಈ ಟೂರ್ನಿ ಮಾರ್ಚ್ 31 ರಂದು ಆರಂಭಗೊಳ್ಳಲಿದೆ. ಎಪ್ರಿಲ್ 2 ಭಾನುವಾರ ಆರ್​ಸಿಬಿ(RCB) ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್​ ಮುಂಬಯಿ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಆರ್​ಸಿಬಿ ತಂಡಕ್ಕೆ ಗಾಯದ ಚಿಂತೆ ಕಾಡಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಗ್ಲೆನ್​ ಮ್ಯಾಕ್ಸ್​ವೆಲ್(glenn maxwell)​ ಮತ್ತು ವೇಗಿ ಜೋಶ್​ ಹ್ಯಾಜಲ್​ವುಡ್(josh hazlewood)​ ಗಾಯಕ್ಕೀಡಾಗಿದ್ದು ಐಪಿಎಲ್​ ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಹ್ಯಾಜಲ್​ವುಡ್​ ಸ್ನಾಯು ನೋವಿನ ಕಾರಣದಿಂದಾಗಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು ಚಿಕಿತ್ಸೆ ಪಡೆಯಲು ಆಸ್ಟ್ರೇಲಿಯಾಗೆ ಮರಳಿದ್ದಾರೆ. ಹೀಗಾಗಿ ಅವರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ IND VS AUS: ಮ್ಯಾಕ್ಸ್​ವೆಲ್​ಗೆ ಮತ್ತೆ ಗಾಯ ಭಾರತ ವಿರುದ್ಧದ ಏಕದಿನ ಸರಣಿಗೆ ಅನುಮಾನ

ಇನ್ನೊಂಡೆದೆ ತಂಡದ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ವಿಕ್ಟೋರಿಯಾ ತಂಡದ ಪರ ಆಡುತ್ತಿದ್ದ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದು ಪಂದ್ಯದಿಂದ ಹೊರಬಿದ್ದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅವರು ಭಾರತ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಅವರ ಗಾಯ ಗಂಭೀರ ಪ್ರಮಾಣದಿಂದ ಕೂಡಿದ್ದರೆ ಅವರು ಐಪಿಎಲ್ ಆಡುವುದು ಕೂಡ ಅನುಮಾನ ಎನ್ನಲಾಗಿದೆ. ಹೀಗಾಗಿ ಆರ್​ಸಿಬಿಗೆ ದೊಡ್ಡ ಚಿಂತೆಯೊಂದು ಕಾಡಲಾರಂಭಿಸಿದೆ.

Exit mobile version