Site icon Vistara News

IPL 2023: ಫೀಲ್ಡಿಂಗ್​ನಲ್ಲಿ ದಾಖಲೆ; ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ; ಇಲ್ಲಿದೆ ವಿಡಿಯೊ

IPL 2023: Record in fielding; Kohli gave his wife a flying kiss; Here is the video

IPL 2023: Record in fielding; Kohli gave his wife a flying kiss; Here is the video

ಬೆಂಗಳೂರು: ಭಾನುವಾರದ ಐಪಿಎಲ್​ನ ರಾಯಲ್ಸ್​ಗಳ ಮಧ್ಯದ ರೋಚಕ ಹೋರಾಟದಲ್ಲಿ ಆರ್​ಸಿಬಿ ತಂಡ 7 ರನ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ 7 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕ ಸಂಪಾದಿಸಿದೆ. ಈ ಪಂದ್ಯದಲ್ಲಿ ಗೋಲ್ಡನ್​ ಡಕ್​ ಅವಮಾನ ಎದುರಿಸಿದ ವಿರಾಟ್​ ಕೊಹ್ಲಿ(Virat Kohli) ಫೀಲ್ಡಿಂಗ್​ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಜತೆಗೆ ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮಾಗೆ(Anushka Sharma) ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಗ್ಲೆನ್​ ಮ್ಯಾಕ್ಸ್​ವೆಲ್(77) ಮತ್ತು ಫಾಫ್​ ಡು ಪ್ಲೆಸಿಸ್(62) ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.

ಈ ಪಂದ್ಯದಲ್ಲಿ 2 ಕ್ಯಾಚ್​ ಹಿಡಿದ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಐಪಿಎಲ್​ ಇತಿಹಾಸದಲ್ಲಿ ನೂರು ಕ್ಯಾಚ್​ಗಳನ್ನು ಹಿಡಿದ ಮೂರನೇ ಆಟಗಾರ ಎಂದ ಹಿರಿಮೆಗೆ ಪಾತ್ರರಾದರು. ಜತೆಗೆ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ದಾಖಲೆ ಸುರೇಶ್​ ರೈನಾ ಹೆಸರಲ್ಲಿದೆ. ಅವರು 109 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಪೊಲಾರ್ಡ್ ಇದ್ದಾರೆ. ಅವರು 103 ಕ್ಯಾಚ್​ ಪಡೆದಿದ್ದಾರೆ. ಸದ್ಯ ವಿರಾಟ್​ 101 ಕ್ಯಾಚ್​ ಪಡೆದಿದ್ದು ಮುಂದಿನ ಪಂದ್ಯಗಳಲ್ಲಿ 9 ಕ್ಯಾಚ್​ ಪಡೆದರೆ ಅಗ್ರಸ್ಥಾನ ಪಡೆಯಲಿದ್ದಾರೆ.

ಇದನ್ನೂ ಓದಿ IPL 2023: ಅಜಿಂಕ್ಯ ರಹಾನೆ ಬ್ಯಾಟಿಂಗ್​ ಆರ್ಭಟಕ್ಕೆ ಕಂಗಾಲಾದ ಕೆಕೆಆರ್​

ಉತ್ತಮವಾಗಿ ಆಡುತ್ತಿದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರ ಯಶಸ್ವಿ ಜೈಸ್ವಾಲ್​​ ಅವರು ಹೊಡೆದ ಚೆಂಡನ್ನು ಬೌಂಡರಿ ಲೈನ್​ನಲ್ಲಿ ಕ್ಯಾಚ್​ ಹಿಡಿದ ಕೊಹ್ಲಿ ಇದೇ ಖುಷಿಯಲ್ಲಿ ತಮ್ಮ ಪತ್ನಿ ಅನುಷ್ಕಾಗೆ ​ಸ್ವೀಟ್​ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಫಾಫ್​ ಡು ಪ್ಲೆಸಿಸ್​ ಅವರ ಅನುಪಸ್ಥಿತಿಯಲ್ಲಿ ಕೊಹ್ಲಿ ಅವರು ತಂಡವನ್ನು ಮುನ್ನಡೆಸಿ ಗೆಲುವು ತಂದು ಕೊಟ್ಟರು.

Exit mobile version