Site icon Vistara News

IPL 2023: ರೀಸ್‌ ಟಾಪ್ಲಿಗೆ ಶಸ್ತ್ರಚಿಕಿತ್ಸೆ; ಚೇತರಿಕೆಗೆ ಹಾರೈಸಿದ ಆರ್​ಸಿಬಿ

IPL 2023: Reece Topley undergoes surgery; RCB wished for recovery

IPL 2023: Reece Topley undergoes surgery; RCB wished for recovery

ಲಂಡನ್​: ಮುಂಬೈ ಇಂಡಿಯನ್ಸ್​ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಆರ್​ಸಿಬಿ ತಂಡದ ವೇಗಿ ರೀಸ್‌ ಟಾಪ್ಲಿ(Reece Topley) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಭುಜದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ಫೋಟೊವನ್ನು ಟಾಪ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್​ ವಿರುದ್ಧ ಏಪ್ರಿಲ್​ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಫೀಲ್ಡಿಂಗ್​ ನಡೆಸುತ್ತಿದ್ದ ಟಾಪ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಎರಡು ಓವರ್​ ಮಾಡಿದ್ದ ಅವರು ಆ ಬಳಿಕ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ ಟೂರ್ನಿಯಿಂದಲೇ ಹೊರವಿದ್ದಿದ್ದರು. ಅವರ ಬದಲು ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್​ ಪರ್ನೆಲ್​ ಅವರನ್ನು ತಂಡಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಟಾಪ್ಲಿ ಅವರು ತನ್ನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಇದನ್ನೂ ಓದಿ IPL 2023 : ಸಿಎಸ್​ಕೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಸಂಜು ಸ್ಯಾಮ್ಸನ್​ಗೆ 12 ಲಕ್ಷ ರೂಪಾಯಿ ದಂಡ

ಸದ್ಯ ಅವರ ಚೇತರಿಕೆಗೆ ಕನಿಷ್ಠ 5 ತಿಂಗಳು ಕಾಲಾವಕಾಶ ಬೇಕೆಂದು ತಿಳಿದುಬಂದಿದೆ. ಹೀಗಾಗಿ ಅವರು ಜೂನ್​ನಲ್ಲಿ ಆರಂಭವಾಗಲಿರುವ ಆ್ಯಶಸ್​ ಟೆಸ್ಟ್​ ಸರಣಿ ಸೇರಿ ಪ್ರಮುಖ ಸರಣಿಯಿಂದ ಹೊರಗುಳಿಯಲಿದ್ದಾರೆ. ಟಾಪ್ಲಿ ಚೇತರಿಕೆಗೆ ಆರ್​ಸಿಬಿ ತಂಡ ಹಾರೈಸಿದೆ. ಶೀಘ್ರದಲ್ಲೇ ಗುಣಮುಖರಾಗಿ, ಮುಂದಿನ ಬಾರಿಯ ಐಪಿಎಲ್​ನಲ್ಲಿ ಸಿಗೋಣ’ ಎಂದು ಪ್ರಾಂಚೈಸಿ ತಿಳಿಸಿದೆ. ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ರೀಸ್ ಟಾಪ್ಲಿ ಅವರನ್ನು ಬರೋಬ್ಬರಿ 1.9 ಕೋಟಿಗೆ ಖರೀದಿಸಿತ್ತು. ಮುಂಬೈ ವಿರುದ್ಧ ಅವರು ಆಡಿದ ಚೊಚ್ಚಲ ಐಪಿಎಲ್​ ಪಂದ್ಯವಾಗಿತ್ತು. ಆದರೆ ದುರಾದೃಷ್ಟವಶಾತ್‌ ಅವರಿಗೆ ಈ ಪಂದ್ಯವೇ ಕೊನೆಯ ಪಂದ್ಯವಾಗಿತ್ತು. ಸದ್ಯ ಮುಂದಿನ ಬಾರಿಯ ಐಪಿಎಲ್​ನಲ್ಲಿ ಅವರು ಆಡುವ ಸಾಧ್ಯತೆ ಇದೆ.​

ಆರ್​ಸಿಬಿ ತಂಡ: ಫಾಪ್​ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಜ್​ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್​ವೆಲ್.,ವೈಶಾಖ್ ವಿಜಯಕುಮಾರ್, ವೇಯ್ನ್​ ಪಾರ್ನೆಲ್.

Exit mobile version