Site icon Vistara News

IPL 2023: ಇದೇ ರೀತಿ ಬೌಲಿಂಗ್​ ನಡೆಸಿದರೆ ನಾಯಕತ್ವಕ್ಕೆ ರಾಜೀನಾಮೆ; ಎಚ್ಚರಿಕೆ ಕೊಟ್ಟ ಧೋನಿ

IPL 2023: Resignation from captaincy if bowled like this; Dhoni warned

IPL 2023: Resignation from captaincy if bowled like this; Dhoni warned

ಚೆನ್ನೈ: ಲಕ್ನೋ ಸೂಪರ್​ಜೈಂಟ್ಸ್​(Lucknow Super Giants) ವಿರುದ್ಧ ಸೋಮವಾರ ನಡೆದ ಐಪಿಎಲ್(IPL 2023)​ ಪಂದ್ಯದಲ್ಲಿ ಚೆನ್ನೈ ಸೂಪರ್​ಕಿಂಗ್ಸ್​(Chennai Super Kings) ತಂಡ 12 ರನ್​ಗಳ ಗೆಲುವು ದಾಖಲಿಸಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(ms dhoni) ಅವರು ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಬೌಲರ್​ಗಳ ಕಳಪೆ ಆಟಕ್ಕೆ ಚಕಾರ ಎತ್ತಿದ್ದಾರೆ.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಧೋನಿ, ಬೌಲರ್‌ಗಳು ನೋ ಬಾಲ್ ಮತ್ತು ವೈಡ್‌ಗಳನ್ನು ಮುಂದಿನ ಪಂದ್ಯದಲ್ಲಿಯೂ ಇದೇ ರೀತಿ ಎಸೆದರೆ ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಸೋಮವಾರದ ಲಕ್ನೋ ವಿರುದ್ಧದ ಪಂದ್ಯದಲ್ಲಿ 3 ನೋ ಬಾಲ್‌ ಮತ್ತು 13 ವೈಡ್‌ಗಳನ್ನು ಎಸೆದಿದ್ದು ಧೋನಿ ಸಿಟ್ಟಿಗೆ ಕಾರಣವಾಗಿದೆ.

“ನಮ್ಮ ತಂಡದ ಬೌಲರ್​ಗಳು ಸುಧಾರಿಸಿಕೊಳ್ಳಬೇಕಿದೆ. ಈ ಬೌಲಿಂಗ್ ಪ್ರದರ್ಶನವನ್ನು ಕಟ್ಟಿಕೊಂಡು ತಂಡ ಗೆಲ್ಲುವುದು ಅಸಾಧ್ಯ. ಬ್ಯಾಟಿಂಗ್​ನಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ. ಆದರೆ ಬೌಲಿಂಗ್​ ತುಂಬಾನೆ ಕಳಪೆ ಮಟ್ಟದಿಂದ ಕೂಡಿದೆ. ಮುಂದಿನ ಪಂದ್ಯದಲ್ಲಿ ಇದು ಆವರ್ತಿಸಬಾರದು. ಒಂದೊಮ್ಮೆ ಇದೇ ಪ್ರದರ್ಶನ ಮುಂದುವರಿದರೆ ತಂಡ ನೂತನ ನಾಯಕನನ್ನು ಕಾಣಲಿದೆ. ನನ್ನ ನಾಯಕತ್ವದಲ್ಲಿ ಈ ರೀತಿಯ ಬೌಲಿಂಗ್​ಗೆ ಅವಕಾಶವಿಲ್ಲ” ಎಂದು ಧೋನಿ ತಂಡದ ಬೌಲರ್​ಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ IPL 2023 : ಆರ್​ಸಿಬಿಗೆ ಆಘಾತ, ತಂಡದ ಸ್ಟಾರ್​ ಬ್ಯಾಟರ್​ ಟೂರ್ನಿಯಿಂದ ಔಟ್​

5 ಸಾವಿರ ರನ್​ ಪೂರೈಸಿದ ಧೋನಿ

ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಟು ರನ್​ ಬಾರಿಸಿದ ತಕ್ಷಣ ಐಪಿಎಲ್​ನಲ್ಲಿ 5000 ರನ್​ಗಳನ್ನು ಬಾರಿಸಿದ ದಾಖಲೆ ಮಾಡಿದರು. ಪಂದ್ಯದಲ್ಲಿ ಅವರು 12 ರನ್​ ಬಾರಿಸಿರುವ ಕಾರಣ ಅವರ ಒಟ್ಟು ಗಳಿಕೆ 5004ಕ್ಕೆ ಏರಿದೆ. ಅವರೀಗ ಈ ಮೈಲುಗಲ್ಲು ಸ್ಥಾಪಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.

ಧೋನಿಗಿಂತ ಮೊದಲು ವಿರಾಟ್​ ಕೊಹ್ಲಿ, ಶಿಖರ್​ ಧವನ್​, ಡೇವಿಡ್​ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಬಿಡಿ ವಿಲಿಯರ್ಸ್​ ಐದು ಸಾವಿರ ರನ್​ಗಳ ದಾಖಲೆ ಮಾಡಿದ್ದರು. ಇದೀಗ ರೋಹಿತ್​ ಶರ್ಮಾ ಶೀ ದಾಖಲೆ ಮಾಡಿದ ಐದನೇ ಭಾರತೀಯ ಬ್ಯಾಟರ್​. ಐಪಿಎಲ್​ನಲ್ಲಿ 5000 ರನ್​ಗಳ ಗಡಿ ದಾಟಿದವರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ ಆಡಿದ್ದು, 5 ಶತಕ ಹಾಗೂ 45 ಅರ್ಧ ಶತಕಗಳ ನೆರವಿನಿಂದ 6706 ರನ್​ ಬಾರಿಸಿದ್ದಾರೆ.

Exit mobile version