ಬೆಂಗಳೂರು: ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಆರ್ಸಿಬಿ ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಇದು ಆರ್ಸಿಬಿಗೆ ತವರಿನ ಪಂದ್ಯ ಮತ್ತು ಸೇಡಿನ ಪಂದ್ಯವೂ ಆಗಿದೆ. ಏಕೆಂದರೆ ಕೋಲ್ಕತ್ತಾದಲ್ಲಿ ಡು ಪ್ಲೆಸಿಸ್ ಪಡೆ ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗ್ ಅಬ್ಬರದ ಮುಂದೆ ಮುಗ್ಗರಿಸಿತ್ತು. ಇದೀಗ ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸೀತೇ ಎನ್ನುವುದು ಈ ಪಂದ್ಯದ ಕೌತುಕ.
ಆರ್ಸಿಬಿ ಕೇವಲ 4 ಮಂದಿ ಆಟಗಾರರನ್ನು ಮಾತ್ರ ನೆಚ್ಚಿಕೊಂಡಿದೆ. ಉಳಿದ ಎಲ್ಲ ಆಟಗಾರರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ, ಡು ಪ್ಲೆಸಿಸ್, ಮಾಕ್ಸ್ವೆಲ್ ಮತ್ತು ಸಿರಾಜ್ ಅವರು ಈ ಪಂದ್ಯದಲ್ಲಿ ಕೈ ಕೊಟ್ಟರೆ ತಂಡದ ಮತ್ತೊಮ್ಮೆ ಹೀನಾಯ ಸೋಲು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಸೋಲು, ಗೆಲುವಿನ ಭವಿಷ್ಯ ಈ ನಾಲ್ಕು ಆಟಗಾರರ ಪ್ರದರ್ಶನದ ಮೇಲೆ ನಿಂತಿದೆ.
ಇದನ್ನೂ ಓದಿ IPL 2023: ಹಾಲಿ ಚಾಂಪಿಯನ್ ಗುಜರಾತ್ಗೆ ಭರ್ಜರಿ ಜಯ; ಐಪಿಎಲ್ ಅಂಕಪಟ್ಟಿ ಹೇಗಿದೆ?
ಕೆಕೆಆರ್ ಪಡೆ ಬಲಿಷ್ಠವಾಗಿದ್ದರೂ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಈಗಾಗಲೇ ಆಡಿದ 7 ಪಂದ್ಯಗಳಲ್ಲಿ ಎರಡನ್ನೂ ಮಾತ್ರ ಗೆದ್ದಿದೆ. ಇದರಲ್ಲಿ ಒಂದು ಪಂದ್ಯ ಆರ್ಸಿಬಿ ವಿರುದ್ಧವೇ ಒಲಿದಿದೆ. ಸುನೀಲ್ ನಾರಾಯಣ್, ಆ್ಯಂಡ್ರೆ ರಸೆಲ್ ಇದುವರೆಗೂ ನಿರೀಕ್ಷತ ಮಟ್ಟದ ಪ್ರದರ್ಶನ ತೋರಿಲ್ಲ. ಸದ್ಯ ರಿಂಕು ಸಿಂಗ್ ಮತ್ತು ಜಾಸನ್ ರಾಯ್ ಮತ್ತು ವೆಂಕಟೆಶ್ವರ್ ಅಯ್ಯರ್ ಹೊರತುಪಡಿಸಿ ಉಳಿದ ಬ್ಯಾಟರ್ಗಳ ಬ್ಯಾಟ್ ಸದ್ದು ಮಾಡುತ್ತಿಲ್ಲ. ಒಟ್ಟಾರೆ ಅಸ್ಥಿರ ಪ್ರದರ್ಶನವೇ ತಂಡಕ್ಕೆ ಮುಳುವಾಗಿದೆ.
ಸಂಭಾವ್ಯ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ(ನಾಯಕ), ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್ವುಡ್, ಸಿದ್ಧಾರ್ಥ್ ಕೌಲ್, ಆಕಾಶದೀಪ್, ಹಿಮಾಂಶು ಶರ್ಮಾ, ಮಿಚೆಲ್ ಬ್ರೇಸ್ವೆಲ್, ವೈಶಾಖ್ ವಿಜಯ್ ಕುಮಾರ್.
ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫರ್ಗ್ಯುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.