Site icon Vistara News

IPL 2023: ಶೀಘ್ರದಲ್ಲೇ ರಿಂಕು ಸಿಂಗ್​ ಟೀಮ್​ ಇಂಡಿಯಾ ಸೇರಲಿದ್ದಾರೆ; ಹರ್ಭಜನ್​ ವಿಶ್ವಾಸ

rinku singh

#image_title

ಮುಂಬಯಿ: ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಯುವ ಆಟಗಾರ ರಿಂಕು ಸಿಂಗ್​ ಅವರು ಶೀಘ್ರದಲ್ಲೇ ಟೀಮ್​ ಇಂಡಿಯಾ ಪರ ಆಡಲಿದ್ದಾರೆ ಎಂದು ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಿಂಕು ಸಿಂಗ್​ ಅವರು ಈ ಬಾರಿಯ ಐಪಿಎಲ್​ನಲ್ಲಿ ಗುಜರಾತ್​ ವಿರುದ್ಧ ಅಂತಿಮ ಓವರ್​ನಲ್ಲಿ 5 ಸಿಕ್ಸರ್​ ಬಾರಿಸುವ ಮೂಲಕ ಎಲ್ಲಡೆ ಸುದ್ದಿಯಾಗಿದ್ದರು.

ಶನಿವಾರದ ದ್ವಿತೀಯ ಪಂದ್ಯದಲ್ಲಿ ಲಕ್ನೋ ಮತ್ತು ಕೆಕೆಆರ್​ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಹರ್ಭಜನ್​ ಸಿಂಗ್​ ಅವರು ರಿಂಕು ಸಿಂಗ್​ ಕ್ರಿಕೆಟ್​ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯದಲ್ಲೇ ಅವರು ಭಾರತ ತಂಡದ ಪರ ಆಡಲಿದ್ದಾರೆ ಎಂದು ಹೇಳಿದ್ದಾರೆ.

ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು. 2017ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್‌ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್‌ ಆಗಿದ್ದಾರೆ.

ಇದನ್ನೂ ಓದಿ IPL 2023: ಡೆಲ್ಲಿ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಧೋನಿ

ನಿಷೇಧ ಶಿಕ್ಷೆಯೂ ಎದುರಾಗಿತ್ತು

2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧದ ಬಳಿಕ ರಿಂಕು ಅವರಲ್ಲಿ ಇನ್ನಷ್ಟು ಹಠ ಮನೆಮಾಡಿಕೊಂಡಿತು. ಇದು ಈ ಆವೃತ್ತಿಯ ಐಪಿಎಲ್​ನಲ್ಲಿ ಸ್ಫೋಟಗೊಂಡಿತು. ಈವರೆಗೆ 30 ಐಪಿಎಲ್‌ ಪಂದ್ಯಗಳಿಂದ 32.9ರ ಸರಾಸರಿಯಲ್ಲಿ 447 ರನ್‌ ಗಳಿಸಿದ್ದಾರೆ.

Exit mobile version