ನವದೆಹಲಿ: 16ನೇ ಆವೃತ್ತಿಯ ಐಪಿಎಲ್ನ(IPL 2023) 7ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್(delhi capitals) ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ರಿಷಭ್ ಪಂತ್(rishabh pant) ಅವರು ಸಾಕ್ಷಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಪಂತ್ ಪಂದ್ಯ ವೀಕ್ಷಿಸಲು ಬಿಸಿಸಿಐಯಿಂದ ಫ್ರಾಂಚೈಸಿ ಅನುಮತಿ ಪಡೆದಿದ್ದು, ಪಂತ್ ಡಗ್ಔಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಸದ್ಯ ಅವರು ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಗಾಯಗೊಂಡ ಕಾರಣದಿಂದ ಅವರು ಈ ಬಾರಿಯ ಐಪಿಎಲ್ನಿಂದ ಹೊರಬಿದ್ದಿದ್ದರು. ಅವರ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದೀಗ ಪಂತ್ ಅವರು ತನ್ನ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ಪಂದ್ಯ ವೀಕ್ಷಿಸಲು ಬರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2023 : ಆಡಿದ ಮೂರು ಎಸೆತಗಳಲ್ಲಿ ಐಪಿಎಲ್ ಸಾಧನೆ ಮಾಡಿದ ಮಹೇಂದ್ರ ಸಿಂಗ್ ಧೋನಿ; ಏನದು ದಾಖಲೆ?
ಮೊದಲ ಪಂದ್ಯದಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪಂತ್ ಅವರ ಉಪಸ್ಥಿತಿ ಆತ್ಮವಿಶ್ವಾಸ ತುಂಬಲಿದೆ. ದೆಹಲಿಯ ಅರುಣ್ ಜೇಟ್ಲಿಯಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಸಹ ಆಟಗಾರರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದು ಚೇತರಿಕೆ ಕಾಣುವ ಪಂತ್ ಅವರಿಗೂ ಒಂದು ರೀತಿಯ ಸ್ಫೂರ್ತಿಯಾಗಲಿದೆ.
ಇದನ್ನೂ ಓದಿ IPL 2023 : ಲಕ್ನೊ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 12 ರನ್ ಜಯ
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿತ್ತು. ಆದರೆ ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದೀಗ ಎರಡನೇ ಪಂದ್ಯವನ್ನು ತವರಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂತ್ ಅವರ ಜೆರ್ಸಿಯನ್ನು ತಮ್ಮ ಡಗೌಟ್ನಲ್ಲಿ ನೇತು ಹಾಕಿ ಪಂತ್ರನ್ನು ನೆನಪಿಸಿಕೊಂಡಿತ್ತು. ಆದರೆ ಈ ನಡೆಗೆ ಬಿಸಿಸಿಐ ಗರಂ ಆಗಿದೆ. ಯಾವುದಾದರು ಒಂದು ದುರ್ಘಟನೆ ಅಥವಾ ನಿವೃತ್ತಿಯ ಬಳಿಕ ಈ ರೀತಿ ಗೌರವ ಸೂಚಿಸಲಾಗುತ್ತದೆ. ಆದರೆ ಪಂತ್ ವಿಚಾರದಲ್ಲಿ ಇದು ಎರಡೂ ನಡೆದಿಲ್ಲ ಹೀಗಿರುವಾಗ ಈ ರೀತಿ ಮಾಡಿದರೆ ಇದು ಬೇರೆಯೇ ಅರ್ಥಕೊಡುತ್ತದೆ ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಇದು ಕಾಣಿಸಬಾರದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಫ್ರಾಂಚೈಸಿಗೆ ಎಚ್ಚರಿಕೆ ನೀಡಿದ್ದಾರೆ.