Site icon Vistara News

IPL 2023: ರೋಹಿತ್​ ಇನ್ನು ಮುಂದೆ ನೋ ಹಿಟ್​ ಮ್ಯಾನ್​; ಲೇವಡಿ ಮಾಡಿದ ಶ್ರೀಕಾಂತ್

rohit sharma

#image_title

ಮುಂಬಯಿ: ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದ ಬಳಲುತ್ತಿರುವ ರೋಹಿತ್​ ಶರ್ಮ ಅವರನ್ನು ಟೀಮ್​ ಇಂಡಿಯಾದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ. ರೋಹಿತ್ ಶರ್ಮ ಬದಲಿಗೆ “ನೋ ಹಿಟ್ ಶರ್ಮಾ” ಎಂದು ಹೆಸರು ಬದಲಾಯಿಸುವಂತೆ ಲೇವಡಿ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ಆರಂಭಿಕನಾಗಿ ಕಣಕ್ಕಿಳಿಯುವ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆದರೆ ರೋಹಿತ್ ಇಲ್ಲಿಯೂ ಘೋರ ಬ್ಯಾಟಿಂಗ್​ ವೈಫಲ್ಯ ಮುಂದುವರಿಸಿ ಶೂನ್ಯ ಸಂಕಟಕ್ಕೆ ಸಿಲುಕಿದರು.

ರೋಹಿತ್​ ಶರ್ಮ ಅವರ ವಿಕೆಟ್​ ಬೀಳುತ್ತಿದ್ದಂತೆ ಕಾಮೆಂಟ್ರಿ ಮಾಡುತ್ತಿದ್ದ ಶ್ರೀಕಾಂತ್ ಅವರು ರೋಹಿತ್ ಶರ್ಮ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು. ಅವರು ಈ ಹಿಂದಿನಂತೆ ಬ್ಯಾಟಿಂಗ್​ ನಡೆಸುತ್ತಿಲ್ಲ. ಆದ್ದರಿಂದ ಅವರಿಗೆ ನೀಡಿದ ಹಿಟ್​ ಮ್ಯಾನ್ ಹೆಸರನ್ನು ಬದಲಾಯಿಸುವ ಸಮಯ ಬಂದಿದೆ. ಇನ್ನು ಮುಂದೆ ಅವರನ್ನು ನೋ ಹಿಟ್​​ ಮ್ಯಾನ್​ ಎಂದು ಕರೆಯಬೇಕು ಎಂದು ಹೇಳಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ IPL 2023 : ದುರ್ಬಲರ ನಡುವಿನ ಕದನದಲ್ಲಿ ಗೆಲುವಿನ ಚಾನ್ಸ್ ಯಾರಿಗೆ?

“ನಾನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಇರುತ್ತಿದ್ದರೆ ರೋಹಿತ್​ಗೆ ಆಡುವ 11ರ ಬಳಗದಲ್ಲಿ ಖಂಡಿತ ಅವಕಾಶ ನೀಡುತ್ತಿರಲಿಲ್ಲ. ಸದ್ಯ ಅವರ ಬ್ಯಾಟಿಂಗ್​ ಗಮನಿಸುವಾಗ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತಕ್ಕೆ ಹಿನ್ನಡೆಯಾಗುವ ಎಲ್ಲ ಲಕ್ಷಣ ತೋರುತ್ತಿದೆ. ಆದ್ದರಿಂದ ಅವರನ್ನು ಈ ಮಹತ್ವದ ಪಂದ್ಯದಿಂದ ಹೊರಗಿಟ್ಟರೆ ಒಳಿತು” ಎಂದು ಸಲಹೆ ನೀಡಿದ್ದಾರೆ.

ಶೂನ್ಯ ಸುತ್ತಿ ದಾಖಲೆ ಬರೆದ ರೋಹಿತ್​

ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ರೋಹಿತ್​ ಶರ್ಮ ಅವರು ದೀಪಕ್​ ಚಹರ್​ ಎಸೆತದಲ್ಲಿ ರಿವರ್ಸ್​ ಸ್ವೀಪ್​ ಮಾಡುವ ಪ್ರಯತ್ನದಲ್ಲಿ ಜಡೇಜಾಗೆ ಕ್ಯಾಚ್​ ನೀಡಿ ಔಟಾದರು. ಮೂರು ಎಸೆತ ಎದುರಿಸಿದ ಅವರು ಶೂನ್ಯ ಸುತ್ತಿ ಪೆವಿಲಿಯನ್​ ಸೇರಿದರು. ಇದೇ ವೇಳೆ ಅವರು ಐಪಿಎಲ್​ನಲ್ಲಿ 16ನೇ ಬಾರಿ ಡಕೌಟ್​ ಆದ ಕೆಟ್ಟ ದಾಖಲೆ ಬರೆದರು. ಈ ಹಿಂದೆ ಸುನೀಲ್​ ನಾರಾಯಣ್​ ಅವರು 15 ಬಾರಿ ಶೂನ್ಯ ಸುತ್ತಿದ್ದರು. ಇದೀಗ ಅವರನ್ನು ಹಿಂದಿಕ್ಕಿ ರೋಹಿತ್​ ಅಗ್ರಸ್ಥಾನ ಪಡೆದಿದ್ದಾರೆ.

Exit mobile version