Site icon Vistara News

IPL 2023: ಸೋತವರ ಮಧ್ಯೆ ಗೆಲುವಿಗಾಗಿ ಹೋರಾಟ

IPL 2023: Struggle for victory among losers

IPL 2023: Struggle for victory among losers

ನವದೆಹಲಿ: ಹ್ಯಾಟ್ರಿಕ್‌ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಸತತ ಎರಡು ಸೋಲು ಅನುಭವಿಸಿದ ಮುಂಬೈ ಇಂಡಿಯನ್ಸ್​ ಮಂಗಳವಾರ ಐಪಿಎಲ್​ನ 16ನೇ ಪಂದ್ಯದಲ್ಲಿ ಕಣ್ಣಕಿಳಿಯಲಿದೆ. ಇಲ್ಲಿ ಒಂದು ತಂಡ ಶುಭಾರಂಭ ಕಂಡರೆ, ಮತ್ತೊಂದು ತಂಡ ಸೋಲಿನ ಸರಣಿಯನ್ನು ಮತ್ತೆ ಮುಂದುವರಿಸಲಿದೆ. ಈ ತಂಡ ಯಾವುದು ಎಂಬುದು ಈ ಪಂದ್ಯದ ಕುತೂಹಲ.

ಪ್ರದರ್ಶನದ ವಿಚಾರದಲ್ಲಿ ಮುಂಬೈ ಮತ್ತು ಡೆಲ್ಲಿ ಒಂದೇ ದೋಣಿಯ ಎರಡು ಪಯಣಿಗರು. ಉಭಯ ತಂಡಗಳಲ್ಲಿಯೂ ಹಲವು ಸಮಸ್ಯೆಗಳಿವೆ. ಬ್ಯಾಟಿಂಗ್​, ಬೌಲಿಂಗ್​ ನಿರ್ವಹಣೆ ಹೇಳಿಕೊಳ್ಳುವಷ್ಟು ಬಲಿಷ್ಠವಾಗಿಲ್ಲ. ಡೆಲ್ಲಿಗೆ ನಾಯಕ ವಾರ್ನರ್​ ಬಲವಾದರೆ ಮುಂಬೈಗೆ ತಿಲಕ್​ ವರ್ಮ ಆಸರೆಯಾಗಿದ್ದಾರೆ. ಇವರನ್ನು ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಿಲ್ಲ.

ಪಾಂಡ್ಯ ಸಹೋದರರು, ಪೊಲಾರ್ಡ್​ ತಂಡದಿಂದ ಬೇರ್ಪಟ ಬಳಿಕ ಮುಂಬೈ ತಂಡ ದುರ್ಬಲವಾಗಿದೆ. ತಂಡದ ಕೀ ಬೌಲರ್​ ಜಸ್​ಪ್ರೀತ್​ ಬುಮ್ರಾ ಕೂಡ ಬೆನ್ನುನೋವಿನಿಂದ ಹೊರಗುಳಿದಿದ್ದಾರೆ. ಇವರ ಅನುಪಸ್ಥಿತಿ ಪ್ರತಿ ಪಂದ್ಯದಲ್ಲಿಯೂ ಎದ್ದು ಕಾಣುತ್ತಿದೆ. ಇನ್ನೊಂದೆಡೆ ಡೆಲ್ಲಿ ಕೂಡ ಈ ವಿಷಯದಲ್ಲಿ ಹೊರತಾಗಿಲ್ಲ. ರಿಷಭ್​ ಪಂತ್​ ಅವರು ಇಲ್ಲದೆ ತಂಡ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷರ ಪ್ರದರ್ಶ ತೋರುತಿಲ್ಲ. ವಾರ್ನರ್​ ಅವರು ಪ್ರತಿ ಪಂದ್ಯದಲ್ಲಿಯೂ ಏಕಾಂಗಿ ಹೋರಾಟ ನಡೆಸಿದರೂ ಅವರಿಗೆ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ.

ರೋಹಿತ್​ ಶರ್ಮ,ಸೂರ್ಯಕುಮಾರ್​ ಯಾದವ್​ ಮತ್ತು ಕೋಟಿ ವೀರ ಕ್ಯಾಮರೂನ್​ ಗ್ರೀನ್​ ಬ್ಯಾಟಿಂಗ್​ ಮರೆತವರಂತೆ ಆಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಜೋಫ್ರಾ ಆರ್ಚರ್​ ಇದ್ದರೂ ಅವರು ಕೂಡ ದುಬಾರಿಯಾಗುತ್ತಿದ್ದಾರೆ. ಇಶಾನ್​ ಕಿಶನ್​ ಒಂದೆರಡು ಬೌಂಡರಿಗೆ ಮಾತ್ರ ಸೀಮಿತರಾಗುತ್ತಿದ್ದಾರೆ. ಇವರೆಲ್ಲ ಈ ಪಂದ್ಯದಲ್ಲಿ ಸುಧಾರಣೆ ಕಂಡರೆ ಮುಂಬೈಗೆ ಗೆಲುವು ಸಾಧ್ಯ.

ಕನ್ನಡಿಗ ಮನೀಷ್​ ಪಾಂಡೆ ಕಳೆದ ಪಂದ್ಯದಲ್ಲಿ ಗೋಲ್ಡನ್ ಡಕ್​ ಆಗಿದ್ದರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ ಕೂಡ ಶೂನ್ಯ ಸುತ್ತಿ ಯಾವುದೇ ಇಂಪ್ಯಾಕ್ಟ್​ ಬೀರಲಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಅವರಿಗೆ ಆಡುವ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಇನ್ನೊಂದೆಡೆ ತಂಡದ ಕಳಪೆ ಪ್ರದರ್ಶನಕ್ಕೆ ತಂಡದ ಮಾಲಿಕನೇ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡೆಲ್ಲಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ.

ಸಂಭಾವ್ಯ ತಂಡಗಳು

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ರಿಲೀ ರೊಸೊ, ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅನ್ರಿಚ್​ ನೋರ್ಜೆ, ಖಲೀಲ್ ಅಹ್ಮದ್, ಕುಲ್ದೀ​ಪ್ ಯಾದವ್, ಮುಖೇಶ್ ಕುಮಾರ್.

Exit mobile version