ಹೈದರಾಬಾದ್: ಅಂತಿಮ ಹಂತದಲ್ಲಿ ಕ್ಲಾಸೆನ್(74) ಮತ್ತು ಸಮದ್(30*) ಅವರು ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ನಾಟಕೀಯ ಕುಸಿತದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ 183 ರನ್ ಬಾರಿಸಬೇಕಿದೆ.
ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಆರಂಭದಲ್ಲೇ ಅಭಿಷೇಕ್ ಶರ್ಮ(7) ರನ್ಗೆ ವಿಕೆಟ್ ಒಪ್ಪಿಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ವಿಕೆಟ್ ಯದುವೀರ್ ಸಿಂಗ್ ಚರಕ್ ಪಾಲಾಯಿತು. ಆ ಬಳಿಕ ಆಡಲಿಳಿದ ರಾಹುಲ್ ತಿಪಾರಿ ಅವರು ಆವೇಶ್ ಖಾನ್ ಅವರ ಓವರ್ನಲ್ಲಿ ಸತತ ಬೌಂಡರಿ ಬಾರಿಸಿದರು. ಆದರೆ ಅವರಿಗೆ ಈ ವೇಗವನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಅವರು 20 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಅವೇಶ್ ಖಾನ್ ಅವರ ಈ ಓವರ್ನಲ್ಲಿ 17 ರನ್ ಸೋರಿಕೆಯಾಯಿತು.
ಉತ್ತಮವಾಗಿ ಆಡುತ್ತಿದ್ದ ಅನ್ಮೋಲ್ಪ್ರೀತ್ ಸಿಂಗ್(30) ಕೂಡ ತ್ರಿಪಾಠಿ ವಿಕೆಟ್ ಪತನದ ಬೆನ್ನಲ್ಲೇ ಪೆವಿಲಿಯನ್ ಸೇರಿದರು. ಈ ವಿಕೆಟ್ ಕಳೆದುಕೊಂಡ ಬಳಿಕ ಹೈದರಾಬಾದ್ ರನ್ ವೇಗ ಕುಸಿತ ಕಂಡಿತು. ತಂಡದ ಮೊತ್ತ 115 ಆಗುವ ವೇಳೆ ಪ್ರಮುಖ 5 ವಿಕೆಟ್ಗಳು ಉರುಳಿ ಹೋಗಿತ್ತು. ಇನ್ನೇನು 130ರ ಒಳಗೆ ಗಂಟುಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ ಸಿಡಿದು ನಿಂತ ಹೆನ್ರಿಚ್ ಕ್ಲಾಸೆನ್ ಅವರು ಲಕ್ನೋ ಬೌಲರ್ಗಳನ್ನು ಕಾಡಲಾರಂಭಿಸಿದರು.
ಉತ್ತಮ ಹಿಡಿತ ಸಾಧಿಸಿದ್ದ ಲಕ್ನೋ ಬೌಲರ್ಗಳಿಗೆ ಕ್ಲಾಸೆನ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡರು. ಇವರಿಗೆ 7ನೇ ಕ್ರಮಾಂಕದಲ್ಲಿ ಆಡಲಿಳಿದ ಅಬ್ದುಲ್ ಸಮದ್ ಉತ್ತಮ ಸಾಥ್ ನೀಡಿದರು. ಅವರು ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಭಯ ಆಟಗಾರರ ಈ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಂಡ ಬೃಹತ್ ಮೊತ್ತ ಪೇರಿಸಿತು.
ಇದನ್ನೂ ಓದಿ IPL 2023: ಸ್ಟೇಡಿಯಂನಲ್ಲಿ ಮೊಬೈಲ್ ಮೂಲಕ ಪಂದ್ಯ ವೀಕ್ಷಿಸಿದ ಭೂಪ; ವಿಡಿಯೊ ವೈರಲ್
47 ರನ್ಗಳಿಸಿದ್ದ ವೇಳೆ ಕ್ಲಾಸೆನ್ ಅವರು ವಿಕೆಟ್ ಕೈ ಚೆಲ್ಲಿದರು. 29 ಎಸೆತ ಎದುರಿಸಿದ ಅವರು ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 47 ರನ್ ಗಳಿಸಿದರು. ಕ್ಲಾಸೆನ್ ಮತ್ತು ಸಮದ್ ಅವರು 7ನೇ ವಿಕೆಟ್ಗೆ 58 ರನ್ ಜತೆಯಾಟ ನಡೆಸಿದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕ್ಲಾಸೆನ್ಗೆ ಲಕ್ನೋ ಅಭಿಮಾನಿಗಳಿಂದ ಕಿರಿಕಿರಿಯಾದ ಕಾರಣ ಕೊಂಚ ಕಾಲ ಆಟ ಸ್ಥಗಿತಗೊಂಡಿತು. ಲಕ್ನೋ ಪರ ನಾಯಕ ಕೃಣಾಲ್ ಪಾಂಡ್ಯ 2 ವಿಕೆಟ್ ಕಿತ್ತು ಮಿಂಚಿದರು. ಸಮದ್ ಅವರು 37 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅವರು ನಾಲ್ಕು ಸಿಕ್ಸರ್ ಬಾರಿಸಿದರು. ಅವೇಶ್ ಖಾನ್ ಅವರು 2 ಓವರನಲ್ಲಿ 30 ರನ್ ಬಿಟ್ಟು ದುಬಾರಿಯಾಗಿ ಪರಿಣಮಿಸಿದರು.