Site icon Vistara News

IPL 2023: ಗೆಲುವಿನ ಹುಡುಕಾಟದಲ್ಲಿ ಸನ್​ರೈಸರ್ಸ್ ಹೈದರಾಬಾದ್‌

IPL 2023: Sunrisers Hyderabad in search of victory

IPL 2023: Sunrisers Hyderabad in search of victory

ಹೈದರಾಬಾದ್​: ಸತತ ಸೋಲಿನಿಂದ ಕಂಗೆಟ್ಟಿರುವ ಸನ್​ರೈಸರ್ಸ್ ಹೈದರಾಬಾದ್‌(Sunrisers Hyderabad) ಗೆಲುವಿನ ಹುಡುಕಾಟದಲ್ಲಿ ಇಂದು(ಭಾನುವಾರ ಏಪ್ರಿಲ್​ 9) ರಾತ್ರಿ ನಡೆಯುವ ಐಪಿಎಲ್​ನ 14ನೇ(IPL 2023) ಪಂದ್ಯದಲ್ಲಿ ಬಲಿಷ್ಠ ಪಂಜಾಬ್​ ಕಿಂಗ್ಸ್​(Punjab Kings) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಾದರೂ ಗೆಲುವಿನ ಸನ್​ರೈಸರ್ಸ್​ ಆದೀತೇ ಎಂಬುದು ಈ ಪಂದ್ಯದ ಕೂತೂಹಲ.

ದ್ವಿತೀಯ ಪಂದ್ಯದಲ್ಲಿ ಐಡನ್‌ ಮಾರ್ಕ್‌ರಮ್‌ ತಂಡದ ನಾಯಕತ್ವ ವಹಿಸಿಕೊಂಡರು. ಹೈದರಾಬಾದ್​ಗೆ ಯಾವುದೇ ಲಾಭವಾಗಿಲ್ಲ. ಅವರು ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದರು. ಕನ್ನಡಿಗ ಮಾಯಾಂಕ್‌ ಅಗರ್ವಾಲ್‌, ಅಭಿಷೇಕ್‌ ಶರ್ಮ, ಅನ್ಮೋಲ್‌ಪ್ರೀತ್‌ ಸಿಂಗ್‌, ರಾಹುಲ್‌ ತ್ರಿಪಾಠಿ, ಹ್ಯಾರಿ ಬ್ರೂಕ್‌, ವಾಷಿಂಗ್ಟನ್‌ ಸುಂದರ್‌, ಗ್ಲೆನ್‌ ಫಿಲಿಪ್ಸ್‌, ಅಬ್ದುಲ್‌ ಸಮದ್‌ ಹೀಗೆ ಹಲವು ಡೇಂಜರಸ್​ ಬ್ಯಾಟರ್​ಗಳನ್ನು ಒಳಗೊಂಡಿದ್ದರೂ ತಂಡದ ಪ್ರದರ್ಶನ ಮಾತ್ರ ತೀರ ಕಳಪೆ ಮಟ್ಟದಾಗಿದೆ. ಬೌಲಿಂಗ್​ನಲ್ಲಿಯೂ ಭುವನೇಶ್ವರ್​ ಕುಮಾರ್​, ಉಮ್ರಾನ್​ ಮಲಿಕ್​ ಸುಧಾರಣೆ ಕಾಣಬೇಕಿದೆ. ಸ್ಪಿನ್ನರ್‌ ಆದಿಲ್‌ ರಶೀದ್‌ ಮಾತ್ರವೇ ಗಮನ ಸೆಳೆದಿದ್ದಾರೆ. ಕಳೆದ ಆವೃತ್ತಿಯಂತೇ ಈ ಆವೃತ್ತಿಯಲ್ಲಿ ಸರಣಿ ಸೋಲಿನ ಸರದಿಯನ್ನು ಮುಂದುವರಿಸುತ್ತಲೇ ಇದೆ. ಸದ್ಯ ಈ ಪಂದ್ಯದಲ್ಲಾದರೂ ಸೋಲಿನ ಕೊಂಡಿ ಕಳೆದುಕೊಂಡಿತೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IPL 2023: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​

ಪಂಜಾಬ್​ ಬಲಿಷ್ಠ

ಪಂಜಾಬ್​ ತಂಡ ಬಲಿಷ್ಠವಾಗಿದೆ. ಜತೆಗೆ ಅದೃಷ್ಟವೂ ಈ ತಂಡದ ಪರವಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿಯೂ ಇನ್ನೇನು ಸೋತೆ ಬಿಟ್ಟಿತು ಎನ್ನುವಷ್ಟರಲ್ಲಿ ಅಲ್ಪ ಅಂತರದಲ್ಲಿ ಪಂಜಾಬ್​ ಗೆಲುವು ಸಾಧಿಸಿತ್ತು, ಹೀಗಾಗಿ ಶಿಖರ್​ ಧವನ್​ಗೆ ಕಪ್​ ಎತ್ತುವ ಅದೃಷ್ಟವೊಂದಿದೆ ಎಂಬ ಮಾತುಗಳು ಈಗಾಗಲೇ ಕೇಳಿಬಂದಿದೆ. ಶಿಖರ್‌ ಧವನ್‌ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ ಇವರಿಗೆ ಪ್ರಭ್‌ಸಿಮ್ರಾನ್‌ ಉತ್ತಮ ಸಾಥ್​ ನೀಡುತಿದ್ದಾರೆ. ಈ ಜೋಡಿ ಆರಂಭದಲ್ಲೇ ಎದುರಾಳಿ ಬೌಲರ್​ಗಳ ಮೇಲೆ ಸವಾರಿ ಮಾಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಸಮರ್ಥರಿದ್ದಾರೆ. ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್​ ವೇಗಿ ಕಗಿಸೊ ರಬಾಡ ಆಡಲಿದ್ದಾರೆ ಹೀಗಾಗಿ ಬೌಲಿಂಗ್​ ವಿಭಾ್=ಗ ಮತ್ತಷ್ಟು ಬಲಿಷ್ಠಗೊಂಡಿದೆ. ಅರ್ಶ್​ದೀಪ್‌, ನಥಾನ್ ಎಲ್ಲಿಸ್​ ಅವರ ಘಾತಕ ಸ್ಪೆಲ್‌ ಪಂಜಾಬ್‌ಗ ಹೆಚ್ಚಿನ ಬಲ ತಂದಿತ್ತಿದೆ. ಕಳೆದ ಪಂದ್ಯದಲ್ಲಿ ಕೈಗೆ ಯಾಗವಾಗಿದ್ದ ರಾಜಪಕ್ಸ ಅವರು ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಸಂಭಾವ್ಯ ತಂಡ

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್/ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಿಕಂದರ್ ರಜಾ, ಶಾರುಖ್ ಖಾನ್, ಸ್ಯಾಮ್ ಕರನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ನಥಾನ್ ಎಲ್ಲಿಸ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ.

Exit mobile version