ಹೈದರಾಬಾದ್: ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್ ಸೇರಿ ಹಲವು ತಂಡಗಳು 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೊಸ ಜೆರ್ಸಿಯನ್ನು ಬಿಡುಗಡೆಗೊಳಿಸಿದೆ. ಇದೀಗ ಈ ಸಾಲಿಗೆ ಸನ್‌ರೈಸರ್ಸ್ ಹೈದರಾಬಾದ್(sunrisers hyderabad) ಕೂಡ ಸೇರಿದೆ.
ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮುಂದಿನ ಆವೃತ್ತಿಗಾಗಿ ಗುರುವಾರ(ಮಾರ್ಚ್ 16) ತಂಡದ ನೂತನ ಜೆರ್ಸಿಯನ್ನು ಅನಾವರಣ ಮಾಡುದ ವಿಡಿಯೊವನ್ನು ಹಂಚಿಕೊಂಡಿದೆ. ಈವಿಡಿಯೊದಲ್ಲಿ ತಂಡದ ಪ್ರಮುಖ ಆಟಗಾರರಾದ ಮಯಾಂಕ್ ಅಗರ್ವಾಲ್(mayank agarwal), ಉಮ್ರಾನ್ ಮಲಿಕ್(umran malik) ಮತ್ತು ವಾಷಿಂಗ್ಟನ್ ಸುಂದರ್(Washington Sundar) ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ IPL 2023 : ಮೈಕೆಲ್ ಬ್ರೇಸ್ವೆಲ್ ಜತೆ ಮಾತುಕತೆ ನಡೆಸಿದ ಆರ್ಸಿಬಿ
ಹೊಸ ಜೆರ್ಸಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಲೋಗೋ ಮತ್ತು ಟಾಟಾ ಐಪಿಎಲ್ ಲೋಗೋ ಒಳಗೊಂಡಿದೆ. “2023ರ ಐಪಿಎಲ್‌ಗಾಗಿ ಆರೆಂಜ್ ಆರ್ಮಿಯ ಹೊಸ ಜೆರ್ಸಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ.” ಎಂದು ಶೀರ್ಷಿಕೆ ನೀಡಿ ಫ್ರಾಂಚೈಸಿ ವಿಡಿಯೊವನ್ನು ಹಂಚಿಕೊಂಡಿದೆ. ಈ ಬಾರಿ ತಂಡವನ್ನು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಏಡೆನ್ ಮಾರ್ಕ್ರಮ್(Aiden Markram) ಮುನ್ನಡೆಸಲಿದ್ದಾರೆ. ಯುವ ಆಟಗಾರರನ್ನು ನೆಚ್ಚಿಕೊಂಡಿರುವ ಹೈದರಾಬಾದ್ ಈ ಬಾರಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ.