Site icon Vistara News

IPL 2023: ಈ ಬಾರಿ ಆರ್​ಸಿಬಿ ಕಪ್​ ಗೆಲ್ಲಲಿದೆ; ಸಂಜಯ್ ಮಾಂಜ್ರೇಕರ್‌ ವಿಶ್ವಾಸ

IPL 2023: This time RCB will win the cup; Sanjay Manjrekar

IPL 2023: This time RCB will win the cup; Sanjay Manjrekar

ಬೆಂಗಳೂರು: ಆರ್​ಸಿಬಿಯ ಕಳೆದ 15 ವರ್ಷಗಳ ಐಪಿಎಲ್​ ಟ್ರೋಫಿಯ ಕನಸು ಈ ಬಾರಿ ನನಸಾಗಲಿದೆ ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಾಂಜ್ರೇಕರ್‌(sanjay manjrekar) ಭವಿಷ್ಯ ನುಡಿದಿದ್ದಾರೆ. ಆರ್​ಸಿಬಿ ತಂಡವನ್ನು ಈ ಸಲ ವಿರಾಟ್​ ಕೊಹ್ಲಿ ಚಾಂಪಿಯನ್​ ಮಾಡುವುದು ಖಚಿತ ಎಂದು ಅವರು ಹೇಳಿದ್ದಾರೆ.

ಆರ್‌ಸಿಬಿ ತಂಡ ಐಪಿಎಲ್‌ 2023 ಟೂರ್ನಿಗೆ ಸಮರ್ಥ ತಂಡವನ್ನು ಹೊಂದಿದೆ. ಅದರಲ್ಲೂ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಕಳೆದ ಬಾರಿ ಕೊಹ್ಲಿ ಅವರು ಬ್ಯಾಟಿಂಗ್​ ಫಾರ್ಮ್​ನಲ್ಲಿರದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಅವರು ಉತ್ತಮ ಪ್ರದರ್ಶನ ತೋರಲಿದ್ದಾರೆ. ಅವರ ಈ ಬ್ಯಾಟಿಂಗ್​ ಪ್ರದರ್ಶನ ತಂಡವನ್ನು ಚಾಂಪಿಯನ್​ ಮಾಡಲಿದೆ ಎಂದು ಸಂಜಯ್​ ಮಾಂಜ್ರೇಕರ್‌ ವಿಶ್ವಾಸ ವ್ಯಕ್ತಪಡಿಸಿದರು.

2019ರ ಬಳಿಕ ಮೂರು ವರ್ಷಗಳ ಕಾಲ ಹೀನಾಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ವಿರಾಟ್‌ ಕೊಹ್ಲಿ, ಕಳೆದ 10 ತಿಂಗಳಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್, ಏಕದಿನ ಕ್ರಿಕೆಟ್‌ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ಕೊಹ್ಲಿ, 16ನೇ ಆವೃತ್ತಿಯ ಐಪಿಎಲ್​ನಲ್ಲಿಯೂ ಗರ್ಜಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಲು ಕಾತರಗೊಂಡಿದ್ದಾರೆ.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

ಹ್ಯಾಟ್ರಿಕ್​ ಗೋಲ್ಡನ್​ ಡಕ್​ ಸಂಕಟ ಎದುರಿಸಿದ್ದ ಕೊಹ್ಲಿ

15ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಅವರು ಹ್ಯಾಟ್ರಿಕ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿ ಭಾರಿ ಟೀಕೆ ಎದುರಿಸಿದ್ದರು. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌, ಮೊಹಹಮ್ಮದ್‌ ಸಿರಾಜ್‌ ಅವರ ಸಾಹಸದಿಂದ ತಂಡ ಪ್ಲೇ-ಆಪ್​ಗೆ ಲಗ್ಗೆ ಇರಿಸಿತ್ತು. ಈ ಬಾರಿ ಕೊಹ್ಲಿಯೂ ಉತ್ತಮ ಫಾರ್ಮ್​ನಲ್ಲಿರುವುದರಿಂದ ತಂಡ ಎಲ್ಲ ರೀತಿಯಲ್ಲಿ ಬಲಿಷ್ಠವಾಗಿದೆ. ಇವರೆಲ್ಲ ಸೇರಿ ಮ್ಯಾಚ್‌ ವಿನ್ನಿಂಗ್​ ಪ್ರದರ್ಶನ ತೋರುವು ಸಾಧ್ಯತೆ ಇದೆ.

ಇದನ್ನೂ ಓದಿ IPL 2023: ಗುರು ಶಿಷ್ಯರ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಶುಭಾರಂಭ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆರ್‌​ಸಿಬಿ ತವರಿನಲ್ಲಿ ಆಡಬೇಕಿರುವ 7 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಏಪ್ರಿಲ್‌ ತಿಂಗಳಲ್ಲೇ ಆಡಲಿದೆ. ಒಂದು ಪಂದ್ಯ ಮಾತ್ರ ಮೇ 21ರಂದು ಗುಜರಾತ್‌ ವಿರುದ್ಧ ನಡೆಯಲಿದೆ. ಟೂರ್ನಿಯ ಮೊದಲಾರ್ಧದಲ್ಲೇ ತನ್ನ 6 ತವರಿನ ಪಂದ್ಯಗಳನ್ನು ಪೂರೈಸಲಿರುವ ಆರ್‌ಸಿಬಿ ತವರಿನ ಎಲ್ಲ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಬೇಕಿದೆ. ಇಲ್ಲವಾದಲ್ಲಿ ಆ ಬಳಿಕ ತವರಿನಾಚೆ ಆಡುವ ಪಂದ್ಯದಲ್ಲಿ ಸೋಲು ಕಂಡರೆ ಅಂಕಪಟ್ಟಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 2ರಂದು ನಡೆಯುವ ಮುಂಬೈ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ತನ್ನ ಅಭಿಯಾನವನ್ನು ಆರಂಭಿಸಲಿದೆ.​

ಆರ್​ಸಿಬಿ ತಂಡದ ಸದಸ್ಯರು

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಾಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವಾನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರಣ್​ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್​, ಹೇಜಲ್​​ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್.

Exit mobile version