Site icon Vistara News

IPL 2023: ತಂದೆಯ ಕ್ರಿಕೆಟ್​ ಪ್ರದರ್ಶನವನ್ನು ಟಿವಿಯಲ್ಲಿ ಕಂಡು ಖುಷಿಪಟ್ಟ ಅಂಬೆಗಾಲಿನ ಮಗು; ವಿಡಿಯೊ ವೈರಲ್​

IPL 2023: Toddler excited to see dad's cricket performance on TV; The video is viral

IPL 2023: Toddler excited to see dad's cricket performance on TV; The video is viral

ಮೊಹಾಲಿ: ರಾಜಸ್ಥಾನ್​ ರಾಯಲ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಬುಧವಾರ ನಡೆದ ಪಂದ್ಯ ಕೊನೆಯ ಓವರ್​ನ ಕೊನೆಯ ಎಸೆತದವರೆಗೂ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿತ್ತು. ಒಂದೆಡೆ ಸಂದೀಪ್‌ ಶರ್ಮಾ ಎಸೆದ ಈ ಓವರ್​ನ ಅಂತಿಮ ಎಸೆತದಲ್ಲಿ ಧೋನಿ ಸಿಕ್ಸರ್​ ಬಾರಿಸಲಿ ಎಂದು ಧೋನಿ ಅಭಿಮಾನಿಗಳು ಕಾದು ಕುಳಿತ್ತಿದ್ದರೆ, ಇನ್ನೊಂದೆಡೆ ತನ್ನ ತಂದೆ ಈ ಎಸೆತದಲ್ಲಿ ಯಶಸ್ಸು ಕಾಣಲಿ ಎಂದು ಅಂಬೆಗಾಲಿಡುವ ಮಗಳು ಟೀವಿ ಮುಂದೆ ಅಮ್ಮನ ಮಡಿಲಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದಳು. ಅಂತಿಮವಾಗಿ ಮಗಳ ಬಯಕೆಯೆಂತೆ ತಂದೆ ಈ ಬೌಲ್​ನಲ್ಲಿ ಯಶಸ್ಸು ಕಂಡು ತಂಡಕ್ಕೆ ಜಯ ತಂದುಕೊಟ್ಟರು. ಈ ಸುಂದರ ಕ್ಷಣದ ಫೋಟೊ ಮತ್ತು ವಿಡಿಯೊವನ್ನು ಕ್ರಿಕ್​ಇನ್ಫೋ ಟ್ವೀಟ್​ ಮೂಲಕ ಪ್ರಕಟಿಸಿದೆ.

ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ರಾಜಸ್ಥಾನ್​ ನಿಗದಿತ 20 ಓವರ್​ಗಲ್ಲಿ 7 ವಿಕೆಟ್​ ನಷ್ಟಕ್ಕೆ 175 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ತನ್ನ ಪಾಲಿನ ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 172 ರನ್​ ಬಾರಿಸಿ ಕೇವಲ ಮೂರು ರನ್​ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಒಂದು ಹಂತದ ವರೆಗೆ ಉತ್ತಮ ಸ್ಥಿತಿಯಲ್ಲಿತ್ತು. ಆ ಬಳಿಕ ನಾಟಕೀಯ ಕುಸಿತ ಕಂಡಿತು. ಈ ವೇಳೆ ನಾಯಕ ಧೋನಿ ಮತ್ತು ಜಡೇಜಾ ಕಡೇಯ ಮೂರು ಓವರ್​ಗಳಲ್ಲಿ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದು ಕೊಡುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಧೋನಿ ಮತ್ತು ಜಡೇಜಾ ರಾಜಸ್ಥಾನ್​ ಬೌಲರ್​ಗಳಿಗೆ ಬೆಂಡೆತ್ತಿದರು. ಅಂತಿಮ 12 ಎಸೆತಗಳಲ್ಲಿ 40 ರನ್​ ಬಾರಿಸುವ ಸಾವಲನ್ನು ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಚೆನ್ನೈ ಮೀರಿ ನಿಲ್ಲುವ ಎಲ್ಲ ಸಾಧ್ಯತೆ ಇತ್ತು.

ಸಂದೀಪ್​ ಶರ್ಮ ಎಸೆದ ಕೊನೆಯ ಓವರ್​ನಲ್ಲಿ ಧೋನಿ ಸತತ ಸಿಕ್ಸರ್​ ಬಾರಿಸಿದಾಗ ಚೆನ್ನೈ ಪಾಳಯದಲ್ಲಿ ಗೆಲುವಿನ ವಿಶ್ವಾಸ ಮೂಡಿತು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಸ್ಟ್ರೈಕ್​ನಲ್ಲಿದ್ದರು. ಧೋನಿ ತಮ್ಮ ಎಂದಿನ ಶೈಲಿಯಂತೆ ಈ ಪಂದ್ಯವನ್ನು ಸಿಕ್ಸರ್​ ಮೂಲಕ ಫಿನಿಶ್ ಮಾಡುತ್ತಾರೆ ಎಂದು ಎಲ್ಲರು ತುದಿಗಾಲಲ್ಲಿ ನಿಂತಿದ್ದರು. ಆದರೆ ಸಂದೀಪ್ ಶರ್ಮ​ ಸ್ಲೋ ಯಾರ್ಕರ್​ ಎಸೆದು ರಾಜಸ್ಥಾನಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಧೋನಿ ಸಿಕ್ಸರ್​ ಬಾರಿಸುವಲ್ಲಿ ವಿಫಲರಾದರು.​ ರಾಜಸ್ಥಾನ್​ ವೀರೋಚಿತ 3 ರನ್​ ಗೆಲುವು ಸಾಧಿಸಿತು.

Exit mobile version