Site icon Vistara News

IPL 2023: ಕೊಹ್ಲಿಗೆ ಐಟಂ ಡ್ಯಾನ್ಸ್ ಆಫರ್​ ನೀಡಿದ ‘ದೇಶದ್ರೋಹಿ’ ನಟ ಖಾನ್

IPL 2023: 'Traitor' actor Khan offers Kohli an item dance

IPL 2023: 'Traitor' actor Khan offers Kohli an item dance

ಮುಂಬಯಿ: ಟೀಮ್​ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಡ್ಯಾನ್ ಎಂದರೆ ಅಚ್ಚುಮೆಚ್ಚು. ಹಲವು ಬಾರಿ ಅವರು ಮೈದಾನದಲ್ಲಿಯೇ ನೃತ್ಯಗಳನ್ನು ಮಾಡಿದ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಆದರೆ ಇದೀಗ ಸುದ್ದಿಯಾಗಿರುವುದು ಅವರಿಗೆ ಬಂದ ಐಟಂ ಡ್ಯಾನ್ಸ್​ನ ಆಫರ್​.

ಭೋಜಪುರಿ ನಟ ಕಮಾಲ್​ ಆರ್​. ಖಾನ್​ (Kamaal R Khan) ಅವರು ತಮ್ಮ ಮುಂದಿನ ‘ದೇಶ್​ದ್ರೋಹಿ 2’ (Deshdrohi 2) ಚಿತ್ರದಲ್ಲಿ ವಿರಾಟ್​ ಕೊಹ್ಲಿಗೆ ಐಟಂ ಡ್ಯಾನ್ಸ್​ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದಾರೆ. ವಿರಾಟ್​ ಕೊಹ್ಲಿ ಅವರು ಆರ್​ಸಿಬಿಯ ಜೆರ್ಸಿಯನ್ನು ಹಾಕಿಕೊಂಡು ಮೈದಾನದಲ್ಲಿ ಖುಷಿಯಾಗಿ ಹೆಜ್ಜೆ ಹಾಕಿದ ವಿಡಿಯೊವೊಂದನ್ನು ಟ್ವೀಟ್​ ಮಾಡುವ ಮೂಲಕ ಕಮಾಲ್​ ಆರ್​. ಖಾನ್​ ಅಲಿಯಾಸ್​ ಕೆಆರ್​ಕೆ ಅವರು ಕೊಹ್ಲಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡುವ ಅವಕಾಶ ನೀಡಿದಾಗಿ ಹೇಳಿದ್ದಾರೆ.

“ವಿರಾಟ್​ ಕೊಹ್ಲಿ ಕ್ರಿಕೆಟ್​ನಲ್ಲಿ ತೋರುವ ಕ್ರೇಜ್​ ನೃತ್ಯದಲ್ಲಿಯೂ ತೋರಿಸುತ್ತಾರೆ. ಅವರ ಈ ನೃತ್ಯ ಕಂಡು ನಾನು ಇಂಪ್ರೆಸ್​ ಆಗಿದ್ದೇನೆ. ಹಾಗಾಗಿ ನನ್ನ ‘ದೇಶದ್ರೋಹಿ 2’ ಸಿನಿಮಾದಲ್ಲಿ ಅವರಿಗೆ ಐಟಂ ಡ್ಯಾನ್ಸ್​ ಮಾಡಲು ಅವಕಾಶ ನೀಡುತ್ತೇನೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ. ಇದು ವಿರಾಟ್​ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ.

“ನಿಮ್ಮ ಉದ್ದೇಶ ಒಳ್ಳೆಯದ್ದೇ. ಆದರೆ ನೀವು ಇದನ್ನು ಬಳಸಿಕೊಂಡ ರೀತಿ ಸರಿಯಿಲ್ಲ. ಕೊಹ್ಲಿಗೆ ನಿಮ್ಮ ಚಿತ್ರದಲ್ಲಿ ಅವಕಾಶ ನೀಡುತ್ತೇನೆ ಎಂದರೆ ನಾವು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದೆವು. ಆದರೆ ನೀವು ಅವರನ್ನು ಐಟಂ ಡ್ಯಾನ್ಸ್​ ಮಾಡುವಂತೆ ಹೇಳಿದ್ದು ಸರಿಯಲ್ಲ” ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ IPL 2023: ಚಿನ್ನಸ್ವಾಮಿಯಲ್ಲಿ ನೂತನ ದಾಖಲೆ ಬರೆದ ವಿರಾಟ್​ ಕೊಹ್ಲಿ

“ಒಂದೊಮ್ಮೆ ವಿರಾಟ್​ ಅವರು ನಿಮ್ಮ​ ಸಿನಿಮಾದಲ್ಲಿ ಡ್ಯಾನ್ಸ್ ಮಾಡಲು ಒಪ್ಪಿದರೆ,​ ಅವರಿಗೆ ಸಂಭಾವನೆ ನೀಡಲು ಇಡೀ ನಿಮ್ಮ ಆಸ್ತಿ ಮಾರಿದರೂ ಸಾಧ್ಯವಾಗದು​’ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾನೆ. ಇನ್ನು ಕೆಲವರು ‘ಮೊದಲು ನಿನ್ನ ಯೋಗ್ಯತೆ ನೋಡಿಕೋ’ ಎಂದು ಹೇಳಿದ್ದಾರೆ. ಸದ್ಯ ವಿರಾಟ್​ ಕೊಹ್ಲಿ ಅವರು ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡಿಲ್ಲ.

2008ರಲ್ಲಿ ಕಮಾಲ್​ ಆರ್​. ಖಾನ್ ಅವರ ‘ದೇಶದ್ರೋಹಿ’ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ಅತಿ ಕೆಟ್ಟ ವಿಮರ್ಶೆ ಪಡೆದುಕೊಂಡಿತ್ತು. ಈಗ ಅವರು ‘ದೇಶದ್ರೋಹಿ 2’ ಸಿನಿಮಾದ ಚಿತ್ರಿಕರಣದಲ್ಲಿ ತೊಡಗಿದ್ದಾರೆ. ಸದ್ಯ ಈ ಸಿನಿಮಾ ಅವರ ಕೈ ಹಿಡಿಯಲಿದೆಯಾ ಅಥವಾ ಮೊದಲ ಸಿನಿಮಾದ ಹಾಗೆ ಫ್ಲಾಪ್​ ಆಗಲಿದೆಯಾ ಎಂದು ಕಾದು ನೋಡಬೇಕಿದೆ.

Exit mobile version