Site icon Vistara News

IPL 2023: ಗೆಳೆಯ ಕೊಹ್ಲಿಗೆ ಖಡಕ್ ಎಚ್ಚರಿಕೆ ನೀಡಿದ ‘ಯುನಿವರ್ಸ್​ ಬಾಸ್’​ ಗೇಲ್​; ಏನದು?

virat kohli and chris gayle

#image_title

ಮುಂಬಯಿ: ವಿರಾಟ್​ ಕೊಹ್ಲಿಯ ಪ್ರೀತಿಯ ಗೆಳೆಯ, ಆರ್​ಸಿಬಿ ತಂಡದ ಮಾಜಿ ಜತೆಗಾರ ಕ್ರಿಸ್​ ಗೇಲ್​ ಅವರು ತಮ್ಮ ಗೆಳೆಯನಿಗೊಂದು ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ. ಆದರೆ ಇದು ಯಾವುದೇ ದ್ವೇಷದ ಮತ್ತು ಕೋಪದ ಸಂದೇಶವಲ್ಲ. ಬದಲಾಗಿ ವಿರಾಟ್​ ಕೊಹ್ಲಿ ಅವರು ಐಪಿಎಲ್​ ನಿರ್ಮಿಸಿದ ದಾಖಲೆಯನ್ನು ಮುರಿಯಲು ಮತ್ತೆ ಐಪಿಎಲ್​ಗೆ ಮರಳುವೆ ಎಂದು ಗೇಲ್​ ಹೇಳಿದ್ದಾರೆ.

ಗುಜರಾತ್​ ಟೈಟನ್ಸ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಶತಕ ಬಾರಿಸುವ ಮೂಲಕ ಕ್ರಿಸ್​ ಗೇಲ್​ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಗೇಲ್​ ಅವರು ಮುಂದಿನ ಆವೃತ್ತಿಯಲ್ಲಿ ಮತ್ತೆ ಐಪಿಎಲ್​ ಆಡುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಕೊಹ್ಲಿ ದಾಖಲೆಯನ್ನು ಮುರಿಯುವುದಾಗಿ ವಿಶ್ವಾಸವ್ಯಕ್ತಪಡಿಸಿದ್ದಾರೆ. ಸದ್ಯ ಕೊಹ್ಲಿ 7 ಐಪಿಎಲ್​ ಶತಕ ಬಾರಿಸಿದ್ದಾರೆ. ಗೇಲ್​ 6 ಶತಕ ಬಾರಿಸಿದ್ದಾರೆ.

ಇದನ್ನೂ ಓದಿ IPL 2023: ನಿಷ್ಠಾವಂತ ಅಭಿಮಾನಿಗಳಿಗಾಗಿ ತಲೆ ಎತ್ತಿ ನಡೆಯುತ್ತೇವೆ; ಕೊಹ್ಲಿ ಭಾವನಾತ್ಮಕ ಪೋಸ್ಟ್​

ವಿರಾಟ್​ ಕೊಹ್ಲಿಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗೇಲ್​ “ಇದೊಂದು ಅದ್ಭುತ ಇನಿಂಗ್ಸ್‌, ಯುನಿವರ್ಸ್‌ ಬಾಸ್‌ನ ದಾಖಲೆಯನ್ನು ಮೀರಿ ನಿಂತಿದ್ದಾರೆ. ಇರಲಿ, ನಾನು ನಿವೃತ್ತಿಯನ್ನು ಹಿಂಪಡೆದು ಐಪಿಎಲ್‌ಗೆ ಮರಳುತ್ತೇನೆ. ಮುಂದಿನ ವರ್ಷ ನಿಮ್ಮನ್ನು ನೋಡಿಕೊಳ್ಳುತ್ತೇನೆ, ನಿಮ್ಮ ದಾಖಲೆಯನ್ನು ಮುರಿಯುತ್ತೇನೆ ನೋಡಿ ವಿರಾಟ್” ಎಂಬುದಾಗಿ ಗೇಲ್​ ನಗುತ್ತಲೇ ಹೇಳಿದರು. ಗೇಲ್​ ಅವರು ಈ ಬಾರಿಯ ಐಪಿಎಲ್​ ಟೂರ್ನಿ ಆರಂಭಕ್ಕೂ ಮುನ್ನ ಐಪಿಎಲ್ಗೆ ವಿದಾಯ ಹೇಳಿದ್ದರು. ಸದ್ಯ ಅವರು ಐಪಿಎಲ್​ನ ಕಾಮೆಂಟ್ರಿ ಪ್ಯಾನಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಗೇಲ್​ ಅವರು ಅವರು ವಿದಾಯ ಹೇಳಿ ಮುಂದಿನ ಐಪಿಎಲ್​ಗೆ ಹೆಸರು ನೊಂದಾಯಿಸಿದರೂ ಅವರನ್ನು ಯಾವ ತಂಡಗಳು ಖರೀದಿ ಮಾಡುವುದು ಅನುಮಾನ ಎನ್ನಲಾಗಿದೆ. ಗೇಲ್​ ಅವರಿಗೆ ಈಗಾಗಲೇ 43 ವಯಸ್ಸಾಗಿದೆ, ಜತೆಗೆ ಅವರ ಬ್ಯಾಟಿಂಗ್​ ಫಾರ್ಮ್​ ಕೂಡ ಇಲ್ಲವಾಗಿದೆ ಹೀಗಾಗಿ ಅವರು ಐಪಿಎಲ್​ನತ್ತ ಮುಖಮಾಡಿದರೂ ಅವರ ಖರೀದಿಗೆ ತಂಡಗಳು ಮನಸ್ಸು ಮಾಡುವುದು ಕಷ್ಟ.

Exit mobile version