Site icon Vistara News

IPL 2023: ಪತ್ನಿಯೊಂದಿಗೆ ಮಸ್ತ್ ಸ್ಟೆಪ್ಸ್‌​ ಹಾಕಿ ಗಾಯಗೊಂಡ ವಿರಾಟ್​ ಕೊಹ್ಲಿ; ಆರ್​ಸಿಬಿ ಗತಿಯೇನು?

IPL 2023: Virat Kohli injured while doing mast steps with wife; What is the pace of RCB?

IPL 2023: Virat Kohli injured while doing mast steps with wife; What is the pace of RCB?

ಮುಂಬಯಿ: ಟೀಮ್​ ಇಂಡಿಯಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಮತ್ತು ಅವರ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ(anushka sharma) ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕಳೆದ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅವರು ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಮೈದಾನದಿಂದಲೇ ಮಡದಿಗೆ ಫ್ಲೈಯಿಂಗ್ ಕಿಸ್ ಕೊಟ್ಟು ಸುದ್ದಿಯಾಗಿದ್ದರು. ಇದೀಗ ಈ ಜೋಡಿ ಜತೆಯಾಗಿ ಡ್ಯಾನ್ಸ್​ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಅನುಷ್ಕಾ ಶರ್ಮಾ ತನ್ನ ಗಂಡ ಕಿಂಗ್​ ಕೊಹ್ಲಿಯೊಂದಿಗೆ ಪಂಜಾಬಿ ಹಾಡಿಗೆ ಸಖತ್​ ಸ್ಟೆಪ್ಸ್​ ಹಾಕಿದ್ದಾರೆ. ಈ ವಿಡಿಯೊವನ್ನು ಅನುಷ್ಕಾ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ‘ಡ್ಯಾನ್ಸ್ ಪೇ ಚಾನ್ಸ್​’ ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೊ ಕಂಡ ಕೊಹ್ಲಿ ಮತ್ತು ಅನುಷ್ಕಾ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ತಮಾಷೆಯೆಯಾಗಿ ಕೊಹ್ಲಿಗಿಂತ ಅತ್ತಿಗೆ ಅನುಷ್ಕಾ ಅವರೇ ಚೆನ್ನಾಗಿ ನೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2023: ಮುಂದಿನ ಬಾರಿ ಈಡನ್​ನಲ್ಲಿ ಕೆಕೆಆರ್​ ಜೆರ್ಸಿ ರಾರಾಜಿಸಲಿದೆ; ನಿವೃತ್ತಿಯ ಸುಳಿವು ನೀಡಿದ ಧೋನಿ

ಗಾಯಗೊಂಡ ಕೊಹ್ಲಿ

ಅನುಷ್ಕಾ ಅವರು ಫುಲ್​ ಜೋಶ್​ನಿಂದ ನೃತ್ಯ ಮಾಡುತ್ತಿರುವಾಗ ಅವರ ಕಾಲು ಕೊಹ್ಲಿಯ ಕಾಲಿಗೆ ತಾಗಿದೆ. ಇದೇ ವೇಳೆ ಕೊಹ್ಲಿ ನೋವಿನಿಂದ ಬೊಬ್ಬೆ ಹಾಕಿ ಪಕ್ಕಕ್ಕೆ ಸರಿದಿದ್ದಾರೆ. ಇದನ್ನು ಕಂಡ ಆರ್​ಸಿಬಿ ಅಭಿಮಾನಿಗಳು ದಯವಿಟ್ಟು ಅನುಷ್ಕಾ ಅವರೇ ಐಪಿಎಲ್​ ಮುಗಿದ ಬಳಿಕ ನೀವು ಎಷ್ಟು ಬೇಕಾದರು ಗಂಡನೊಂದಿಗೆ ನೃತ್ಯಮಾಡಿ. ಏಕೆಂದರೆ ಕೊಹ್ಲಿ ಅವರ ಉಪಸ್ಥಿತಿಯಲ್ಲೇ ನಾವು ಈ ಬಾರಿ ಕಪ್​ ಗೆಲ್ಲುವ ನಂಬಿಕೆಯಲ್ಲಿದ್ದೇವೆ. ಸದ್ಯ ಆರ್​ಸಿಬಿ ಸತತ ಗೆಲುವು ದಾಖಲಿಸಿ ಉತ್ತಮ ಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ಕೊಹ್ಲಿಗೇನಾದರು ಗಾಯವಾದರೆ ಕಷ್ಟ. ನಿಮ್ಮ ಮೇಲೆ ನಮಗೆ ಅಪಾರ ಅಭಿಮಾನವಿದೆ” ಎಂದು ಕಮೆಂಟ್​ ಮಾಡಿದ್ದಾರೆ.

Exit mobile version