Site icon Vistara News

IPL 2023: ಮಲ್ಲೇಶ್ವರಂನ ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆ ದೋಸೆ ಸವಿದ ವಿರುಷ್ಕಾ ದಂಪತಿ

IPL 2023: Virushka couple enjoy masala dosa at CTR Hotel, Malleswaram

IPL 2023: Virushka couple enjoy masala dosa at CTR Hotel, Malleswaram

ಬೆಂಗಳೂರು: ವಿಶಿಷ್ಟ ಶೈಲಿಯ ಆಹಾರದಿಂದಲೇ ಗಮನ ಸೆಳೆದಿರುವ ಬೆಂಗಳೂರಿನ ಮಲ್ಲೇಶ್ವರಂನ 7ನೇ ಕ್ರಾಸ್​​​ನಲ್ಲಿರುವ ಸೆಂಟ್ರಲ್​ ಟಿಫನ್​ ಸೆಂಟರ್ ಹೋಟೆಲ್​​ ಮಸಾಲೆ ದೋಸೆಗೆ ಹೆಚ್ಚು ಪ್ರಸಿದ್ಧಿ. ಇಲ್ಲಿ ಸಿಗುವ ಅತ್ಯಂತ ರುಚಿಕರ ದೋಸೆ ತಿನ್ನಲು ಹಲವು ಗಣ್ಯ ವ್ಯಕ್ತಿಗಳು ಈ ಹೋಟೆಲ್‌ಗೆ ತಪ್ಪದೇ ಭೇಟಿ ನೀಡುತ್ತಾರೆ. ಇದೀಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಅವರು ಈ ಹೋಟೆಲ್‌ಗೆ ಭೇಟಿ ನೀಡಿ ಮಸಾಲೆ ದೋಸೆ ಸವಿದಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆರ್​ಸಿಬಿ ತಂಡ ಭಾನುವಾರ ನಡೆಯುವ ತವರಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ವಿರಾಟ್​ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜತೆಗೆ ಸಿಟಿಆರ್ ಹೋಟೆಲ್​​​ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ. ಕಳೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್​ ಅವರ ಅನುಪಸ್ಥಿತಿಯಲ್ಲಿ ಕೊಹ್ಲಿ ಅವರು ತಂಡವನ್ನು ಮುನ್ನಡೆಸಿ ಗೆಲುವು ತಂದುಕೊಟ್ಟಿದ್ದರು. ಇದೀಗ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿಯೂ ಅವರೇ ತಂಡದ ನಾಯಕ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಡು ಪ್ಲೆಸಿಸ್​ ಅವರು ಸ್ನಾಯು ಸೆಳೆತದ ನೋವಿನಿಂದ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಒಂದೊಮ್ಮೆ ಅವರು ಕಳೆದ ಪಂದ್ಯದಂತೆ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2023: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಕಿಟ್​ ಬ್ಯಾಗ್ ಕಳವು ಪ್ರಕರಣ; ಇಬ್ಬರ ಬಂಧನ

ಇತ್ತೀಚೆಗೆ ಆರ್​ಸಿಬಿಯ ಸಂದರ್ಶನವೊಂದರಲ್ಲಿ ಎಬಿ ಡಿ ವಿಲಿಯರ್ಸ್​ ಅವರು ಮಲ್ಲೇಶ್ವರಂನ ಸಿಟಿಆರ್​ ಹೋಟೆಲ್​​​ನ ಮಸಾಲೆ ದೋಸೆ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ​​ಸಿಟಿಆರ್​​ನಲ್ಲಿ ಮಸಾಲೆ ದೋಸೆ (CTR Masala Dosa) ಅಂದರೆ ಎಲ್ಲಿಲ್ಲದ ಪ್ರೀತಿ. ಆದರೆ ನಾನು ಇದೀಗ ಈ ದೋಸೆಯಿಂದ ದೂರವಾಗಿದ್ದೇನೆ. ಆರ್​ಸಿಬಿ ತಂಡದ ಪರ ಆಡುವ ವೇಳೆ ನಾನು ಹೆಚ್ಚಾಗಿ ಈ ಹೋಟೆಲ್​ಗೆ ಭೇಟಿ ನೀಡಿ ದೋಸೆ ತಿನ್ನುತ್ತಿದ್ದೆ ಎಂದು ಹೇಳಿದ್ದರು.

ವಿರಾಟ್​ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ​​ ಮಸಾಲೆ ದೋಸೆ ಸವಿದ ಬಳಿಕ ಹೊಟೇಲ್​ನ ಸಿಬ್ಬಂದಿಗಳ ಜತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಜತೆಗಿರುವ ಫೋಟೋವನ್ನು ಹಲವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

Exit mobile version