ಮುಂಬಯಿ: ಆರ್ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ(Virat Kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ(Anushka Sharma) ಅವರು ಆರ್ಸಿಬಿ ತಂಡದ ಎಲ್ಲ ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ, ಮುಂಬೈಯ ಸ್ಟಾರ್ ಹೋಟೆಲ್ನಲ್ಲಿ ಅದ್ಧೂರಿ ಔತಣಕೂಟ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಬಳಿಕ ಪ್ಲೇ ಆಫ್ ಆಸೆ ಜೀವಂತವಿರಿಸಿದ ಆರ್ಸಿಬಿಗೆ ಪಂದ್ಯ ಮುಗಿದ ಬಳಿಕ ಈ ಔತಣಕೂಟ ಏರ್ಪಡಿಸಲಾಗಿತ್ತು.
ಭಾನುವಾರ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ರಾಜಸ್ಥಾನ್ ಮತ್ತು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಐದು ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ರಾಯಲ್ಸ್ ಕೇವಲ 10.3 ಓವರ್ಗಳಲ್ಲಿ ಕೇವಲ 59ರನ್ಗೆ ಆಲೌಟಾಗುವ ಮೂಲಕ 112 ರನ್ ಅಂತರದ ಸೋಲ ಕಂಡಿತ್ತು. ಗೆದ್ದ ಆರ್ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಿಸಿತು.
ಇದನ್ನೂ ಓದಿ IPL 2023 : ಕ್ರಿಕೆಟ್ ಕಲಿಯಲು ಪ್ರಾರಂಭಿಸಿದಾಗಿನಿಂದ ವಿರಾಟ್ ಕೊಹ್ಲಿ ನನ್ನ ಆರಾಧ್ಯ ದೈವ: ಶುಭ್ಮನ್ ಗಿಲ್
ಕಳೆದ 16 ಆವೃತ್ತಿಗಳಿಂದ ಆರ್ಸಿಬಿ ತಂಡದ ಪರವೇ ಆಡುತ್ತಿರುವ ಕೊಹ್ಲಿ ತಮ್ಮ ತಂಡದ ಎಲ್ಲರಿಗೂ ಮುಂಬಯಿಯ ಸ್ಟಾರ್ ಹೋಟೆಲ್ನಲ್ಲಿ ಭರ್ಜರಿಯಾದ ಔತಣಕೂಟವೊಂದನ್ನು ನೀಡಿದ್ದಾರೆ. ಇದಕ್ಕೆ ಅವರ ಪತ್ನಿ ಅನುಷ್ಕಾ ಶರ್ಮ ಕೂಡ ಸಾಥ್ ನೀಡಿದರು. ಅದ್ಧೂರಿಯಾ ಏರ್ಪಡಿಸಲಾಗಿದ್ದ ಈ ಔತಣಕೂಟದಲ್ಲಿ ಮೋಜು, ಮಸ್ತಿ ಎಲ್ಲ ಕೂಡಿದ್ದವು. ಹಲವು ಆಟಗಾರರು ಡಿಜೆ ಹಾಡಿಗೆ ನೃತ್ಯಮಾಡಿ ಸಂಭ್ರಮಿಸಿದರು. ಈ ವಿಡಿಯೊವನ್ನು ಆರ್ಸಿಬಿ ಫ್ರಾಂಚೈಸಿ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಜತೆಗೆ ಔತಣಕೂಟ ನೀಡಿದ ಕೊಹ್ಲಿ ಮತ್ತು ಅನುಷ್ಕಾ ಅವರಿಗೆ ಧನ್ಯವಾದ ತಿಳಿಸಿದೆ.
ಪ್ಲೇ ಆಫ್ ರೇಸ್ನಲ್ಲಿ ಆರ್ಸಿಬಿ ಗತಿಯೇನು?
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 2023ರ ಐಪಿಎಲ್‌ನಲ್ಲಿ(IPL 2023) ಪ್ಲೇ ಆಫ್ ತಲುಪಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಉಳಿದ ಮೂರು ಸ್ಥಾನಗಳಿಗಾಗಿ 7 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಆರ್ಸಿಬಿ ಪರಿಸ್ಥಿತಿ ಹೇಗಿದೆ ಎಂದರೆ, ಆರ್ಸಿಬಿ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಗೆದ್ದ ಕಾರಣ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ಆರ್ಸಿಬಿ 12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಡು ಪ್ಲೆಸಿಸ್ ಪಡೆಗೆ ಇನ್ನು ಎರಡು ಲೀಗ್ ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಒಂದು ಪಂದ್ಯ ತವರಿನಲ್ಲಿ ಕೆಕೆಆರ್ ವಿರುದ್ಧ ಆಡಲಿದೆ. ಆರ್ಸಿಬಿಗೆ ಈ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಒಂದು ಪಂದ್ಯ ಸೋತರೂ ಪ್ಲೇ ಆಫ್ ರೇಸ್ನಿಂದ ಹೊರಬೀಳಲಿದೆ. ಇನ್ನೊಂದು ಲೆಕ್ಕಾಚಾರದಲ್ಲಿ ಆರ್ಸಿಬಿ ಒಂದು ಪಂದ್ಯ ಗೆದ್ದರೆ ಆಗ ರನ್ ರೇಟ್ ಜತೆಗೆ, ಲಕ್ನೋ ಎದುರು ಮುಂಬೈ ಸೋಲಬೇಕು. ಹೈದರಾಬಾದ್ ವಿರುದ್ಧವೂ ಮುಂಬೈ ಸೋಲು ಕಾಣಬೇಕು.