ಬೆಂಗಳೂರು: ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ರೋಚಕ ಐಪಿಎಲ್(IPL 2023) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಹರ್ಷಲ್ ಪಟೇಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ರವಿ ಬಿಷ್ಣೋಯಿ ಅವರನ್ನು ಮಂಕಡಿಂಗ್ ಮಾಡುವ ಯತ್ನದಲ್ಲಿ ವಿಫಲವಾದರು. ಇದೇ ವಿಚಾರವಾಗಿ ಇದೀಗ ಬೆನ್ ಸ್ಟೋಕ್ಸ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೊನೆಯ 6 ಎಸೆತದಲ್ಲಿ ಲಕ್ನೋಗೆ ಗೆಲ್ಲಲು 5 ರನ್ ತೆಗೆಯುವ ಸವಾಲು ಎದುರಾಯಿತು. ಮೊದಲ ಎಸೆತದಲ್ಲಿ ಉನಾದ್ಕತ್ 1 ರನ್ ಗಳಿಸಿದರು. 2ನೇ ಎಸೆತದಲ್ಲಿ ವುಡ್ ಬೌಲ್ಡ್ ಆದರು. 3ನೇ ಎಸೆತದಲ್ಲಿ ರವಿ ಬಿಷ್ಣೋಯಿ 2 ರನ್ ಕದ್ದರು. 4ನೇ ಎಸೆತದಲ್ಲಿ 1 ರನ್ ಪಡೆದ ಬಿಷ್ಣೋಯಿ ಸ್ಕೋರ್ ಸಮಗೊಳ್ಳುವಂತೆ ಮಾಡಿದರು. 5ನೇ ಎಸೆತದಲ್ಲಿ ಉನಾದ್ಕತ್ ಅವರು ಡು ಪ್ಲೆಸಿಸ್ಗೆ ಕ್ಯಾಚ್ ನೀಡಿ ಔಟಾದರು. ಅಂತಿಮ ಎಸೆತವನ್ನು ಬೌಲ್ ಮಾಡುವಾಗ ಹರ್ಷಲ್ ಮೊದಲು ಮಂಕಡಿಂಗ್ ಯತ್ನದಲ್ಲಿ ಎಡವಿದರು. ಆದರೆ ಮುಂದಿನ ಎಸೆತವನ್ನು ಡಾಟ್ ಮಾಡಿದರು ಬೈಸ್ ಮೂಲಕ ಒಂದು ರನ್ ಕದ್ದ ಲಕ್ನೋ ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು.
ಇದನ್ನೂ ಓದಿ IPL 2023: ಸೋತವರ ಮಧ್ಯೆ ಗೆಲುವಿಗಾಗಿ ಹೋರಾಟ
ಒಂದೆಮ್ಮೆ ಹರ್ಷಲ್ ಪಟೇಲ್ ಅವರು ಮಂಕಡಿಂಗ್ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರೆ. ಪಂದ್ಯ ಡ್ರಾಗೊಂಡು ಸೂಪರ್ ಓಪರ್ ಆಗುತ್ತಿತ್ತು. ಆದರೆ ಇಲ್ಲಿ ಎಡವಿದ ಕಾರಣ ಲಕ್ನೋ ಒಂದು ವಿಕೆಟ್‌ನ ರೋಚಕ ಜಯ ಸಾಧಿಸಿತು. ಇದೇ ವಿಚಾರವಾಗಿ ಮಾತನಾಡಿದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಕ್ರೀಸ್‌ನಿಂದ ಬೇಗನೆ ಓಡಿ ಅನ್ಯಾಯದ ರನ್ ಗಳಿಸಲು ಯತ್ನಿಸುವ ಬ್ಯಾಟರ್‌ಗೆ ದಂಡ ವಿಧಿಸಲು ವಿಶಿಷ್ಟವಾದ ನಿಯಮವನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2023 : ವಿಂಡೀಸ್ ಸ್ಫೋಟಕ ಬ್ಯಾಟರ್ ಕೀರನ್ ಪೊಲಾರ್ಡ್ ಸಾಧನೆ ಹಿಂದಿಕ್ಕಿದ ವಿರಾಟ್ ಕೊಹ್ಲಿ
ಪಂದ್ಯದ ಬಳಿಕ ಟ್ವೀಟ್ ಮಾಡಿದ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, “ರವಿ ಬಿಷ್ಣೋಯಿ ಕ್ರೀಸ್ ಬೇಗನೆ ಬಿಡಿದ್ದಾರೆ. ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಇದ್ದಾರ?” ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿದರ ಬೆನ್ ಸ್ಟೋಕ್ಸ್ “ಇದು ಅಂಪೈರ್ಗಳ ನಿರ್ಧಾರಕ್ಕೆ ಬಿಟ್ಟದ್ದು, ಬೇಗನೆ ಕ್ರೀಸ್ ಬಿಟ್ಟು ಅನ್ಯಾಯದ ಲಾಭ ಪಡೆಯಲು ಪ್ರಯತ್ನಿಸಿದರೆ 6 ಪೆನಾಲ್ಟಿ ರನ್‌ಗಳನ್ನು ನೀಡಿದರೆ ಹೇಗೆ? ಇದರಿಂದ ಯಾವುದೇ ವಿವಾದಗಳು ಸೃಷ್ಟಿಯಾಗದು ಎಂಬುದು ನನ್ನ ನಂಬಿಕೆ” ಎಂದು ಸ್ಟೋಕ್ಸ್ ಸಲಹೆ ನೀಡಿದ್ದಾರೆ.