Site icon Vistara News

IPL 2023: ಮಗನ ಚೊಚ್ಚಲ ಐಪಿಎಲ್​ ವಿಕೆಟ್​ ಬಗ್ಗೆ ತಂದೆ ಸಚಿನ್​ ತೆಂಡೂಲ್ಕರ್​ ಹೇಳಿದ್ದೇನು?

IPL 2023: What did father Sachin Tendulkar say about his son's first IPL wicket?

IPL 2023: What did father Sachin Tendulkar say about his son's first IPL wicket?

ಮುಂಬಯಿ: ಮಂಗಳವಾರ ನಡೆದ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಐಪಿಎಲ್​(IPL 2023) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ 14 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಮುಂಬೈ ಹ್ಯಾಟ್ರಿಕ್​ ಗೆಲುವು ಕಂಡಿದೆ. ಈ ಪಂದ್ಯದಲ್ಲಿ ಆಡಿದ ಅರ್ಜುನ್​ ತೆಂಡೂಲ್ಕರ್​ ಅವರು ಚೊಚ್ಚಲ ಐಪಿಎಲ್​ ವಿಕೆಟ್​ ಒಂದನ್ನು ಕಿತ್ತರು. ಈ ಸಾಧನೆಗೆ ತಂದೆ ಸಚಿನ್​​ ತೆಂಡೂಲ್ಕರ್​ ಅವರು ಮೆಚ್ಚುಗೆ ವ್ಯಕ್ತಪಡಿಸಿ ಟೀಟ್​ ಒಂದನ್ನು ಮಾಡಿದ್ದಾರೆ.

“ಮುಂಬೈ ಇಂಡಿಯನ್ಸ್ ತಂಡವು ಸೂಪರ್ ಆಲ್‌ರೌಂಡರ್ ಆಟವನ್ನು ಆಡಿತು. ಅದರಲ್ಲೂ ಕ್ಯಾಮರೂನ್​ ಗ್ರೀನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಮಿಂಚಿದರು. ಜತೆಗೆ ಇಶಾನ್ ಕಿಶನ್ ಹಾಗೂ ತಿಲಕ್ ಶರ್ಮಾ ಕೂಡ ಉತ್ತಮ ಬ್ಯಾಟಿಂಗ್​ ತೋರ್ಪಡಿಸಿದ್ದಾರೆ. ದಿನದಿಂದ ದಿನಕ್ಕೆ ಐಪಿಎಲ್​ ಪಂದ್ಯಗಳು ಕುತೂಹಲ ಹೆಚ್ಚಿಸುತ್ತಿದೆ. ಅಂತಿಮವಾಗಿ ಕೊನೆಗೂ ತೆಂಡೂಲ್ಕರ್ ಐಪಿಎಲ್​ ವಿಕೆಟ್ ಪಡೆದರು” ಎಂದು ತಮ್ಮ ಮಗ ವಿಕೆಟ್ ಪಡೆದ ಸಾಧನೆ ಮತ್ತು ತಂಡದ ಪ್ರದರ್ಶನಕ್ಕೆ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ IPL 2022 : ಮುಂಬೈ ಇಂಡಿಯನ್ಸ್​ಗೆ 14 ರನ್​ಗಳಿಂದ ಮಣಿದ ಸನ್​ ರೈಸರ್ಸ್​ ಹೈದರಾಬಾದ್​

ಕಳೆದ ಕೆಕೆಆರ್​ ವಿರುದ್ಧದ ತವರಿನಲ್ಲಿ ನಡೆದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್​ ಅವರು ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ಅರ್ಜುನ್‌ ಆಟವನ್ನು ಕಾಣಲು ಸಚಿನ್‌ಪರಿವಾರವೇ ವಾಂಖೇಡೆಯಲ್ಲಿ ನೆರೆದಿತ್ತು. ಈ ಸಂದರ್ಭದಲ್ಲಿ ಸಚಿನ್‌ ತೆಂಡುಲ್ಕರ್‌ ತಮ್ಮ ಮಗನಿಗೆ ಕೆಲವು ಆತ್ಮೀಯ ಸಲಹೆಗಳನ್ನು ನೀಡಿದ್ದರು. “ಅರ್ಜುನ್‌, ನೀನಿಂದು ಕ್ರಿಕೆಟ್‌ ಪಯಣದಲ್ಲಿ ಮತ್ತೂಂದು ಪ್ರಮುಖ ಹೆಜ್ಜೆ ಇಟ್ಟಿರುವೆ. ನೀನು ಇಲ್ಲಿಯ ತನಕ ಬರಲು ಕಠಿನ ಪರಿಶ್ರಮಪಟ್ಟಿರುವೆ. ಇದನ್ನು ಮುಂದುವರಿಸುವ ನಂಬಿಕೆ ಇದೆ. ನಿನ್ನನ್ನು ತುಂಬಾ ಪ್ರೀತಿಸುವ ಮತ್ತು ಕ್ರಿಕೆಟ್‌ ಬಗ್ಗೆ ಅತ್ಯಂತ ಒಲವನ್ನು ಹೊಂದಿರುವ ನಿನ್ನ ತಂದೆಯ ಹಾಗೆ ನೀನು ಕೂಡ ಕ್ರಿಕೆಟ್‌ಗೆ ಯೋಗ್ಯವಾದ ಗೌರವ ನೀಡುವೆ, ಆಗ ಕ್ರಿಕೆಟ್‌ ಕೂಡ ಅದೇ ಪ್ರೀತಿ, ಗೌರವವನ್ನು ನಿನಗೆ ನೀಡುತ್ತದೆ. ಆಲ್‌ ದಿ ಬೆಸ್ಟ್‌” ಎಂದು ಸಚಿನ್‌ ಟ್ವೀಟ್‌ ಮಾಡಿದ್ದರು.

ತಮ್ಮನ ಈ ಸಾಧನೆಗೆ ಅಕ್ಕ ಸಾರಾ ತೆಂಡೂಲ್ಕರ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ಇದು ನಿನ್ನ ಸಹೋದರಿಯಾಗಿ ನನಗೆ ಅತ್ಯಂತ ಸಂತೋಷದ ಕ್ಷಣ” ಎಂದು ಭಾವನಾತ್ಮಕ ಫೋಸ್ಟ್​ ಹಾಕಿದ್ದರು. ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಪದಾರ್ಪಣೆ ಮಾಡಿದ ತಕ್ಷಣ ಇತಿಹಾಸವೊಂದು ನಿರ್ಮಾಣಗೊಂಡಿತ್ತು. ಐಪಿಎಲ್‌ನಲ್ಲಿ ತಂದೆ-ಮಗ ಆಡಿದ ಮೊದಲ ನಿದರ್ಶನ ಇದಾಗಿತ್ತು. ಸಚಿನ್‌ ತೆಂಡುಲ್ಕರ್‌ 2008ರ ಆರಂಭಿಕ ಪಂದ್ಯಾವಳಿಯಿಂದ 2013ರ ತನಕ 6 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ IPL 2023: ಆರ್​ಸಿಬಿ ತಂಡದ ಆಂತರಿಕ ವಿಚಾರ ಕೇಳಲು ಸಿರಾಜ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ

ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ 2.5 ಓವರ್​ ಎಸೆದ ಅರ್ಜುನ್​ ತೆಂಡೂಲ್ಕರ್​ ಅವರು ಕೇವಲ 18 ರನ್​ ನೀಡಿ 1 ವಿಕೆಟ್​ ಪಡೆದರು. ಕಳೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ 2 ಓವರ್​ ಮಾಡಿ 17 ರನ್​ ಬಿಟ್ಟುಕೊಟ್ಟಿದ್ದರು. ಆದರೆ ವಿಕೆಟ್​ ಪಡೆದಿರಲಿಲ್ಲ. ಇದೀಗ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ವಿಕೆಟ್​ ಕಿತ್ತು ಚೊಚ್ಚಲ ಐಪಿಎಲ್ ವಿಕೆಟ್​ ಪಡೆದ ಸಾಧನೆ ಮಾಡಿದರು.

Exit mobile version