Site icon Vistara News

IPL 2023: ಚಹರ್​ ಮಂಕಡಿಂಗ್ ಪ್ರಯತ್ನ​ ಕಂಡ ಬಳಿಕ ಧೋನಿಯ ರಿಯಾಕ್ಷನ್​ ಹೇಗಿತ್ತು?

Deepak Chahar Attempts To Run Out

#image_title

ಚೆನ್ನೈ: ಮಂಗಳವಾರ ನಡೆದ ಐಪಿಎಲ್(IPL 2023)​ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್​ ವಿರುದ್ಧ 15 ರನ್​ಗಳಿಂದ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್​ ಪ್ರವೇಶ ಪಡೆಯಿತು. ಇದೇ ಪಂದ್ಯದಲ್ಲಿ ದೀಪಕ್​ ಚಹರ್​ ಅವರ ಮಂಕಡಿಂಗ್​ ರನೌಟ್​ ಪ್ರಯತ್ನ ಕಂಡು ಧೋನಿ ಅವರು ನೀಡಿದ ರಿಯ್ಯಾಕ್ಷನ್ ಇದೀಗ ಎಲ್ಲಡೆ ವೈರಲ್​ ಆಗಿದೆ.

ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ ಈ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ಬೌಲಿಂಗ್ ಟ್ರ್ಯಾಕ್​ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಿತು. ಜವಾಬಿತ್ತ ಗುಜರಾತ್​ ತಂಡ ತನ್ನ ಪಾಲಿನ ಆಟದಲ್ಲಿ 157 ರನ್​ಗಳಿಗೆ ಸರ್ವಪತನ ಕಂಡಿತು.​

ಗುಜರಾತ್​ ತಂಡದ ಚೇಸಿಂಗ್​ನ 13ನೇ ಓವರ್​ನಲ್ಲಿ ಬೌಲಿಂಗ್​ ನಡೆಸುತ್ತಿದ್ದ ಚೆನ್ನೈ ತಂಡದ ಬೌಲರ್​ ದೀಪಕ್ ಚಹರ್​ ಅವರು ನಾನ್‌ಸ್ಟ್ರೈಕರ್‌ನಲ್ಲಿದ್ದ ವಿಜಯ್ ಶಂಕರ್ ಅವರನ್ನು ಮಂಕಡಿಂಗ್ ಔಟ್ ಮಾಡಲು ಪ್ರಯತ್ನಿಸಿದರು. ಆದರೆ ಅವರು ತಮ್ಮ ಈ ನಡೆಯಲ್ಲಿ ವಿಫಲರಾದರು. ವಿಜಯ್ ಶಂಕರ್ ಅವರ ಬ್ಯಾಟ್ ಕ್ರೀಸ್ ಒಳಗೆ ಇತ್ತು, ಇದರಿಂದಾಗಿ ದೀಪಕ್ ಚಹರ್ ಅವರ ಟ್ರಿಕ್‌ ವಿಫಲವಾಯಿತು. ಇದನ್ನು ಕಂಡ ಧೋನಿ ಅವರು ಮುಗುಳ್ನಗುತ್ತಾಲೇ ತಲೆ ಅಲ್ಲಾಡಿಸಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಈ ರೀತಿಯ ಆಟ ಬೇಡ ಎಂಬ ಅರ್ಧದಲ್ಲಿ ಅವರು ರಿಯ್ಯಾಕ್ಷನ್ ನೀಡಿದರು. ತಕ್ಷಣ ಚಹರ್​ ಕೂಡ ಅಂಪೈರ್​ಗೆ ತಮ್ಮ ಮಂಕಡಿಂಗ್​ ಮೂರನೇ ಅಂಪೈರ್​ಗೆ ಪುರಸ್ಕರಿಸದಂತೆ ಸನ್ನೆ ಮಾಡುತ್ತಾ ಹೋದರು. ಸದ್ಯ ಈ ವಿಡಿಯೊ ವೈರಲ್​ ಆಗಿದೆ.

ಇದ್ನನೂ ಓದಿ IPL 2023: ಸಮಯ ಕಳೆಯಲು ಅಂಪೈರ್ ಜತೆ ಧೋನಿ ಮಾತುಕತೆ; ಗವಾಸ್ಕರ್ ಸೇರಿ ನೆಟ್ಟಿಗರ ಆಕ್ರೋಶ

ಈ ವಿಡಿಯೊ ಕಂಡ ಕೆಲವರು ಒಂದೊಂಮ್ಮೆ ಇದು ವಿಜಯ್​ ಶಂಕರ್​ ಅವರು ಕ್ರೀಸ್​ ಬಿಟ್ಟು ಮುಂದೆ ಹೋಗಿದ್ದರೆ ಧೋನಿ ಅವರು ಇದನ್ನು ಔಟ್​ ಎಂದು ಒಪ್ಪಿಕೊಳ್ಳುತ್ತಿದ್ದರೇ ಅಥವಾ ಕ್ರೀಡಾಸ್ಫೂರ್ತಿ ತೋರುವ ಮೂಲಕ ಇದನ್ನು ನಿರಾಕರಿಸುತ್ತಿದ್ದರೇ ಎಂಬ ಚರ್ಚೆಗಳು ನಡೆದಿವೆ. ಬಹುಪಾಲು ಮಂದಿ ಧೋನಿ ಅವರು ಕ್ರೀಡಾಸ್ಫೂರ್ತಿ ಮೆರೆಯುತ್ತಿದ್ದರೂ ಇದೇ ಕಾರಣಕ್ಕೆ ಅವರು ಈ ರೀತಿಯ ರಿಯ್ಯಾಕ್ಷನ್ ನೀಡಿದ್ದಾರೆ ಎಂದು ಧೋನಿಯನ್ನು ಹೊಗಳಿದ್ದಾರೆ.

Exit mobile version