Site icon Vistara News

IPL 2023: ಲಕ್ನೋ, ಆರ್​ಸಿಬಿ ಮಧ್ಯೆ ಯಾರು ಬಲಿಷ್ಠರು? ಅಂಕಿ-ಅಂಶ ಹೇಗಿದೆ?

IPL 2023: Who is stronger between Lucknow, RCB? How are the statistics?

IPL 2023: Who is stronger between Lucknow, RCB? How are the statistics?

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕನ್ನಡಿಗರನ್ನೇ ನೆಚ್ಚಿಕೊಂಡಿರುವ ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಇಂದು(ಸೋಮವಾರ ಎಪ್ರಿಲ್​ 10) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್​ನ(IPL 2023) 15ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​ ಮತ್ತು ಆಡುವ ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತೆ. ಇದು​ ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿ ಪಿಚ್​ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್​ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಹುದಾಗಿದೆ. ಆದರೆ ಬೌಲರ್​ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿಬಹುದು. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಒಂದೊಮ್ಮೆ ಈ ಪಂದ್ಯಕ್ಕೆ ಮಳೆ ಕಾಟ ಕಾಡಿದರು. ಮೈದಾನದ ನೀರು ಬೇಗನೆ ಇಂಗಿಕೊಳ್ಳುವ ವ್ಯವಸ್ಥೆಯೂ ಈ ಮೈದಾನದಲ್ಲಿ ಇದೆ. ಹೀಗಾಗಿ ಪಂದ್ಯ ವಿಳಂಭವಾಗುವ ಯಾವುದೇ ಸಮಸ್ಯೆ ಇರದು.

ಲಕ್ನೋ ಸೂಪರ್​ ಜೇಂಟ್ಸ್​ ಮತ್ತು ಆರ್​ಸಿಬಿ ತಂಡಗಳು ಇದುವರೆಗೆ 2 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಆರ್​ಸಿಬಿ ಬಲಿಷ್ಠವಾಗಿದೆ. ಆದರೆ ಆರ್​ಸಿಬಿಯ ಮೇಲೆ ಪ್ರತಿ ಪಂದ್ಯದಲ್ಲಿಯೂ ನಿರೀಕ್ಷೆ ಇಡುವುದು ಕಷ್ಟ. ಏಕೆಂದರೆ ಈ ತಂಡದ ಪ್ರದರ್ಶನ ಇತರ ಎಲ್ಲ ತಂಡಗಳಿಗಿಂತಲೂ ಭಿನ್ನವಾಗಿದೆ. ಒಮ್ಮೆ 200 ರನ್​ ಬಾರಿಸಿದರೆ ಮತ್ತೊಮ್ಮೆ ನೂರರ ಒಳಗಡೆ ಗಂಟುಮೂಟೆ ಕಟ್ಟುತ್ತದೆ.

ಇದನ್ನೂ ಓದಿ Highest Chase in IPL Records: ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ 200 ಹಾಗೂ ಅದಕ್ಕಿಂತ ಹೆಚ್ಚು ರನ್​ಗಳನ್ನು ಚೇಸ್​ ಮಾಡಿದ ತಂಡಗಳು

ಸಂಭಾವ್ಯ ತಂಡ

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯೇಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ / ಮೈಕಲ್ ಬ್ರೆಸ್‌ವೆಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್ / ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೊನಿ, ರೊಮಾರಿಯೊ ಶೆಫರ್ಡ್ / ಮಾರ್ಕ್ ವುಡ್, ಯಶ್ ಠಾಕೂರ್, ರವಿ ಬಿಷ್ಣೋಯಿ, ಜಯ್​ದೇವ್​ ಉನಾದ್ಕತ್​.

Exit mobile version