Site icon Vistara News

IPL 2023: ರಾಯಲ್ಸ್​ ಬ್ಯಾಟಲ್ಸ್​ನಲ್ಲಿ ಯಾರಿಗೆ ಗೆಲುವು; ಆರ್​ಸಿಬಿ-ರಾಜಸ್ಥಾನ್​ ಮುಖಾಮುಖಿ

Rajasthan Royals vs Royal Challengers Bangalore

ಜೈಪುರ: ಭಾನುವಾರ ನಡೆಯುವ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯವನ್ನು “ರಾಯಲ್ಸ್​ ಬ್ಯಾಟಲ್ಸ್​”​ ಎಂದೇ ಕರೆಯಲ್ಪಟ್ಟಿದೆ. ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುವ ಈ ಮುಖಾಮುಖಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಕಾದಾಟ ನಡೆಯಲಿದೆ. ಇಲ್ಲಿ ಗೆದ್ದರಷ್ಟೇ ಉಭಯ ತಂಡಗಳಿಗೂ ಪ್ಲೇ ಆಫ್​ ರೇಸ್​ನಲ್ಲಿ ಉಳಿಗಾಲ. ಹೀಗಾಗಿ ಈ ಪಂದ್ಯವನ್ನು ಹೈ ವೋಲ್ಟೆಜ್​ ಎಂದು ನಿರೀಕ್ಷೆ ಮಾಡಬಹುದು.

ಆರ್​ಸಿಬಿ ತಂಡದಲ್ಲಿ ಎಷ್ಟೇ ಕಳಪೆ ಪ್ರದರ್ಶನ ತೋರಿದರೂ ಆಡಿಸಿದವರನ್ನೇ ಆಡಿಸುವುದು, ಕೆಲವು ಪ್ರತಿಭಾನ್ವಿತರನ್ನು ಇನ್ನೂ ಬೆಂಚ್‌ ಮೇಲೆಯೇ ಕೂರಿಸುತ್ತಿರುವುದು ತಂಡದ ವೈಫ‌ಲ್ಯಕ್ಕೆ ಪ್ರಮುಖ ಕಾರಣ. ಹಿಮಾಂಶು ಶರ್ಮ, ಅವಿನಾಶ್‌ ಸಿಂಗ್‌, ಮನೋಜ್‌ ಭಾಂಡಗೆ, ಫಿನ್‌ ಅಲೆನ್‌, ಸಿದ್ಧಾರ್ಥ್ ಕೌಲ್‌ ಮೊದಲಾದ ಪ್ರತಿಭಾನ್ವಿತರಿಗೆ ಆರ್‌ಸಿಬಿ ಇನ್ನೂ ಆಡುವ ಅವಕಾಶ ನೀಡಿಲ್ಲ. ದಿನೇಶ್‌ ಕಾರ್ತಿಕ್‌, ಶಾಬಾಜ್‌ ಅಹ್ಮದ್‌, ಅನುಜ್‌ ರಾವತ್‌ ಎಲ್ಲ ಪಂದ್ಯಗಳಲ್ಲಿ ಆಡಿದರೂ ಅವರ ಸಾಧನೆ ಮಾತ್ರ ಶೂನ್ಯ. ಈ ಪಂದ್ಯದಲ್ಲಿಯೂ ಇವರಿಗೆ ಅವಕಾಶ ನೀಡಿದರೆ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆರಂಭಿಕ ಪಂದ್ಯದಲ್ಲಿ ಘಾತಕ ಬೌಲಿಂಗ್​ ದಾಳಿ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಮೊಹಮ್ಮದ್​ ಸಿರಾಜ್​ ಅವರು ಇತ್ತೀಚಿನ ಪಂದ್ಯಗಳಲ್ಲಿ ತೀರಾ ಕಳಪೆ ಮಟ್ಟದ ಬೌಲಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ವಿಕೆಟ್​ ಕೀಳುವ ಬದಲು ಎದುರಾಳಿ ಬ್ಯಾಟರ್​ಗಳನ್ನು ಕೆಣಕುವುದರಲ್ಲಿ ಮಾತ್ರ ಸೈ ಎನಿಸಿಕೊಂಡಿದ್ದಾರೆ. ಸಿರಾಜ್​ ಬೌಲಿಂಗ್​ ಬಗ್ಗೆ ಸ್ವತಃ ತಂಡದ ನಾಯಕ ಫಾಪ್​ ಡು ಪ್ಲೆಸಿಸ್​​ ಅವರೇ ಕಳೆದ ಪಂದ್ಯದಲ್ಲಿ ಬಹಿರಂಗವಾಗಿ ಬೇಸರ ಹೊರಕಾಕಿದ್ದರು.

ಬಲಿಷ್ಠ ರಾಜಸ್ಥಾನ್​

ರಾಜಸ್ಥಾನ್​ ತಂಡ ಆರ್​ಸಿಬಿಗೆ ಹೋಲಿಸಿದರೆ ಅತ್ಯಂತ ಬಲಿಷ್ಠವಾಗಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಸಮರ್ಥವಾಗಿದೆ. ಅದರಲ್ಲೂ ಕಳೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ತೋರಿದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಅವರ ಬ್ಯಾಟಿಂಗ್​ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಉಳಿದಂತೆ ನಾಯಕ ಸಂಜು ಸ್ಯಾಮ್ಸನ್​, ಜಾಸ್​ ಬಟ್ಲರ್​ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​ನಲ್ಲಿ ಟ್ರೆಂಟ್​ ಬೌಲ್ಟ್​​, ಯಜುವೇಂದ್ರ ಚಹಲ್​ ಕೂಡ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಇದನ್ನೂ ಓದಿ IPL 2023: ಸಿಕ್ಸರ್​ ಮೂಲಕ ಎಬಿಡಿ ದಾಖಲೆ ಮುರಿದ ರೋಹಿತ್​ ಶರ್ಮ

​ಸಂಭಾವ್ಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್​ ಡು ಪ್ಲೆಸಿಸ್​, ವಿರಾಟ್ ಕೊಹ್ಲಿ(ನಾಯಕ), ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್​, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್​ ಶರ್ಮಾ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶದೀಪ್, ಹಿಮಾಂಶು ಶರ್ಮಾ, ಮಿಚೆಲ್ ಬ್ರೇಸ್‌ವೆಲ್, ವೈಶಾಖ್​ ವಿಜಯ್​ ಕುಮಾರ್​.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೈಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಲ್.

Exit mobile version