ಹೈದರಾಬಾದ್: ಟೀಮ್ ಇಂಡಿಯಾದ ಕೆಲ ಮಾಜಿ ಕ್ರಿಕೆಟಿಗರು ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ಪಟ್ಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಅಂಬಾಟಿ ರಾಯುಡು ಕೂಡ ಸೇರುವ ಸಾಧ್ಯತೆ ಇದೆ. ಅವರ ಟ್ವೀಟ್ ಒಂದನ್ನು ಗಮನಿಸುವಾಗ ಅವರು ರಾಜಕೀಯಕ್ಕೆ ಎಂಟ್ರಿ ಕೊಟುವ ಎಲ್ಲ ಸೂಚನೆಗಳು ಲಭ್ಯವಾಗಿದೆ.
ಕೆಲ ದಿನಗಳ ಹಿಂದಷ್ಟೇ ರಾಯುಡು ಅವರು ತಾವು ಸಮಾಜಕ್ಕಾಗಿ ಸೇವೆ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ತಾವು ಜನರ ಸೇವೆ ಮಾಡಲು ಬಯಸುವುದಾಗಿ ತಿಳಿಸಿದ್ದರು. ಜತೆಗೆ ರಾಜಕೀಯ ಪಕ್ಷದಲ್ಲಿ ಅವಕಾಶ ಸಿಕ್ಕರೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದ್ದರು. ಇದೀಗ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಭಾಷಣದ ಟ್ವೀಟ್ವೊಂದನ್ನು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನಮ್ಮ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ(YS Jagan Mohan Reddy) ಅವರ ಮಾತುಗಳನ್ನು ಕೇಳುವಾಗ ಅದ್ಭುತವಾಗುತ್ತದೆ. ರಾಜ್ಯದ ಪ್ರತಿಯೊಬ್ಬರು ನಿಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆಯಿಟ್ಟಿದ್ದಾರೆ ಸರ್. ನಿಮ್ಮ ಅಭಿವೃದ್ಧಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ” ಎಂದು ರಾಯುಡು ಟ್ವೀಟ್ ಮಾಡಿ ಸಿಎಂ ಅವರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ ವಿಐಪಿ ಬಾಕ್ಸ್ಗೆ ಬೀಗ; ಕಾರಣ ಏನು?
ಇದನ್ನೂ ಓದಿ IPL 2023: ಚೆನ್ನೈ ವಿರುದ್ಧ ಗೆಲುವಿನ ಎಕ್ಸ್ಪ್ರೆಸ್ ಏರೀತೇ ಹೈದರಾಬಾದ್?
ರಾಯುಡು ಅವರ ಈ ಟ್ವೀಟ್ ಗಮನಿಸುವಾಗ ಅವರು ಈ ಬಾರಿಯ ಐಪಿಎಲ್ ಬಳಿಕ ರಾಜಕೀಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ಅವರು ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸಿಪಿ(YSRCP) ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ರಾಯುಡು ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಸದ್ಯ ರಾಯುಡು ಅವರು 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.