ಹೈದರಾಬಾದ್: ಆರ್‌ಸಿಬಿ ತಂಡ ಇಂದು(ಗುರುವಾರ) ನಡೆಯುವ ಐಪಿಎಲ್ನ(IPL 2023) 65ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟ ನಡೆಸಲಿದೆ. ಪ್ಲೇ ಆಫ್ಗೇರಬೇಕೆಂದರೆ ಆರ್ಸಿಬಿಗೆ ಇದು ಮಸ್ಟ್ ವಿನ್ ಗೇಮ್ ಆಗಿದೆ. ಸದ್ಯ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಬೌಲಿಂಗ್ ನಡೆಸಲಿದ್ದಾರಾ ಎಂಬ ಕುತೂಹಲವೊಂದು ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಕೊಹ್ಲಿ ಅವರು ಬೌಲಿಂಗ್ ಅಭ್ಯಾಸ ನಡೆಸಿದ್ದು.
ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ ಈ ಹಿಂದೆಯೂ ಬೌಲಿಂಗ್ ನಡೆಸಿದ್ದು ನಾಲ್ಕು ವಿಕೆಟ್ ಕೂಡ ಪಡೆದಿದ್ದಾರೆ. 25ರನ್ಗೆ 2 ವಿಕೆಟ್ ಕಬಳಿಸಿದ್ದು ಅವರ ಬೆಸ್ಟ್ ಬೌಲಿಂಗ್ ಸಾಧನೆಯಾಗಿದೆ. 2012ರಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯಂತ ಕಳಪೆ ಮಟ್ಟದ ಬೌಲಿಂಗ್ ನಡೆಸಿದ್ದರು. ಅಂದು ಆಲ್ಬಿ ಮಾರ್ಕೆಲ್ ಅವರು ಕೊಹ್ಲಿಯ ಚಳಿ ಬಿಡಿಸಿದ್ದರು. ಒಂದೇ ಓವರ್ನಲ್ಲಿ 28 ರನ್ ಚಚ್ಚಿದರು. ಸೋಲುವ ಪಂದ್ಯದಲ್ಲಿ ಚೆನ್ನೈ ಗೆದ್ದು ಬೀಗಿತ್ತು. ಕೊಹ್ಲಿ ಆರ್‌ಸಿಬಿ ಪಾಲಿಗೆ ವಿಲನ್ ಆಗಿದ್ದರು.
ಗುರುವಾರ ನಡೆಯುವ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಈ ಫೋಟೊವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನು ಕಂಡ ಅವರ ಆರ್‌ಸಿಬಿ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಕಿಂಗ್ ಕೊಹ್ಲಿ ಬೌಲಿಂಗ್ ನಡೆಸುವುದನ್ನು ನೋಡಲು ಕಾತರವಾಗಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಕೆಲವರು ದಯವಿಟ್ಟು ಕೊಹ್ಲಿ ಬೌಲಿಂಗ್ ನಡೆಸುವುದು ಬೇಡ ಎಂದಿದ್ದಾರೆ. ಇದಕ್ಕೆ ಕಾರಣ ಈ ಪಂದ್ಯ ಆರ್ಸಿಬಿಗೆ ಗೆಲ್ಲಲೇ ಬೇಕು. ಒಂದೊಮ್ಮೆ ಕೊಹ್ಲಿ ಅವರು ಅಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿ ಪರಿಣಮಿಸಿದ ರೀತಿಯಲ್ಲೇ ಈ ಪಂದ್ಯದಲ್ಲಿ ಬೌಲಿಂಗ್ ನಡೆಸಿ ಅದೇ ಪರಿಸ್ಥಿತಿ ಎದುರಾದರೆ ತಂಡಕ್ಕೆ ಸೋಲು ಖಚಿತ ಎನ್ನುವ ಅರ್ಥದಲ್ಲಿ ಹೀಗೆ ಹೇಳಿದ್ದಾರೆ.
ಇದನ್ನೂ ಓದಿ IPL 2023: ಡೆಲ್ಲಿ ವಿರುದ್ಧ ಪಂಜಾಬ್ಗೆ ಸೋಲು; ಅಂಕಪಟ್ಟಿ ಹೇಗಿದೆ?
ಸಂಭಾವ್ಯ ತಂಡಗಳು
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್.
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್ ,ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್, ಉಮ್ರಾನ್ ಮಲಿಕ್.