Site icon Vistara News

IPL 2023: ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಯಜುವೇಂದ್ರ ಚಹಲ್

ipl-2023-yajuvendra-chahal-has-written-a-new-record-in-ipl

ipl-2023-yajuvendra-chahal-has-written-a-new-record-in-ipl

ಗುವಾಹಾಟಿ: ರಾಜಸ್ಥಾನ್​ ರಾಯಲ್ಸ್​ ತಂಡದ ಯಜುವೇಂದ್ರ ಚಹಲ್(Yuzvendra Chahal)​ ಅವರು ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಬುಧವಾರದ ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಚಹಲ್​ ಅವರು ಒಂದು ವಿಕೆಟ್​ ಪಡೆಯುವ ಮೂಲಕ ಹೊಸ ಇತಿಹಾಸ ಬರೆದರು.

ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಚಹಲ್ ಅವರು ಮುಂಬೈ ಇಂಡಿಯನ್ಸ್​ ತಂಡದ ಮಾಜಿ ವೇಗಿ ಲಸಿತ್​ ಮಾಲಿಂಗ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಸದ್ಯ ಚಹಲ್​ 171 ವಿಕೆಟ್ ಕಬಳಿಸಿದ್ದಾರೆ. ಡ್ವೇನ್ ಬ್ರಾವೊ ಒಟ್ಟು 183 ವಿಕೆಟ್ ಕಬಳಿಸಿ ಅಗ್ರ ಸ್ಥಾನ ಪಡೆದಿದ್ದಾರೆ. ಈ ದಾಖಲೆಯನ್ನು ಮುರಿಯುವ ಅವಕಾಶ ಚಹಲ್ ಅವರಿಗೆ ಇದೆ. ಈ ಆವೃತ್ತಿಯಲ್ಲಿ 13 ವಿಕೆಟ್​ ಕಿತ್ತರೆ ಅವರು ಡ್ವೇನ್ ಬ್ರಾವೊ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯಲಿದ್ದಾರೆ.

5 ರನ್​ ಸೋಲು ಕಂಡ ರಾಜಸ್ಥಾನ್​

ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಪಂಜಾಬ್​ ಕಿಂಗ್ಸ್(Punjab Kings) ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 197 ರನ್​ ಗಳಿಸಿತು. ಜವಾಬಿತ್ತ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್​ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್​ ಗಳ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಗುರಿ ಬೆನ್ನಟ್ಟುವ ವೇಳೆ ಆರ್​. ಅಶ್ವಿನ್​ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಪ್ರಯೋಗ ನಡೆಸಿದ ರಾಜಸ್ಥಾನ್​ ಕೈ ಸುಟ್ಟುಕೊಂಡಿತು. ಅಶ್ವಿನ್​ ನಾಲ್ಕು ಎಸೆತ ಎದುರಿಸಿ ಶೂನ್ಯ ಸುತ್ತಿದರು. ವನ್​ಡೌನ್​ನಲ್ಲಿ ಕ್ರೀಸ್​ಗಿಳಿದ ಜಾಸ್​ ಬಟ್ಲರ್​ ಕೂಡ 19 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್(11)​ ಕೂಡ ವಿಕೆಟ್​ ಕೈಚೆಲ್ಲಿದರು. ಅರ್ಶ್​ದೀಪ್​ ಸಿಂಗ್​ ಆರಂಭಿಕರಿಬ್ಬರ ವಿಕೆಟ್​ ಕಿತ್ತರೆ ನಥಾನ್​ ಎಲ್ಲಿಸಿ ಬಟ್ಲರ್​ ವಿಕೆಟ್​ ಉಡಾಯಿಸಿದರು. ಇಲ್ಲಿಂದ ರಾಜಸ್ಥಾನ್​ ಕುಸಿತವು ಆರಂಭಗೊಂಡಿತು.

ಇದನ್ನೂ ಓದಿ IPL 2023: ವಿರಾಟ್​ ಕೊಹ್ಲಿಯ ದಾಖಲೆ ಸರಿಗಟ್ಟಿದ ಶಿಖರ್​ ಧವನ್​

ತಂಡದ ವಿಕೆಟ್​ ಉರುಳುತ್ತಿದ್ದರು ಮತ್ತೊಂದು ಬದಿಯಲ್ಲಿ ನಾಯಕ ಸಂಜು ಸ್ಯಾಮ್ಸನ್​ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ ಅವರ ಆಟವೂ 42 ರನ್​ಗೆ ಅಂತ್ಯ ಕಂಡಿತು. ಸಂಜು ಬಳಿಕ ತಂಡವನ್ನು ಆಧರಿಸಿದವರೆಂದರೆ ದೇವದತ್ತ ಪಡಿಕ್ಕಲ್​ ಮತ್ತು ರಿಯಾನ್​ ಪರಾಗ್​ ಸೇರಿಕೊಂಡು ಆಕ್ರಮಣದ ಸೂಚನೆ ನೀಡಿದರೂ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಪರಾಗ್​ ಗಳಿಕೆ 12 ಎಸೆತಗಳಿಂದ 20 ರನ್‌ (2 ಸಿಕ್ಸರ್‌, ಒಂದು ಬೌಂಡರಿ). ಪಡಿಕ್ಕಲ್​ 21 ರನ್‌ ಮಾಡಿದರೂ ಇದಕ್ಕೆ 26 ಎಸೆತ ತೆಗೆದುಕೊಂಡರು. ಹೊಡೆದದ್ದು ಒಂದೇ ಬೌಂಡರಿ. ಅಂತಿಮ ಹಂತದಲ್ಲಿ ಹೆಟ್​ಮೈರ್(35)​ ಮತ್ತು ಧ್ರುವ್ ಜುರೆಲ್(ಅಜೇಯ 32) ಸಿಡಿದು ನಿಂತರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್​ನಲ್ಲಿ ಗೆಲುವಿಗೆ 16 ರನ್​ ತೆಗೆಯುವ ಸವಾಲಿನಲ್ಲಿ ಹೆಟ್​ಮೈರ್​ ರನೌಟ್​ ಆದರು. ಪಂಜಾಬ್​ ಪರ ಬೌಲಿಂಗ್​ನಲ್ಲಿ ನಥಾನ್​ ಎಲ್ಲಿಸ್​ 30 ರನ್​ಗೆ 4 ವಿಕೆಟ್​ ಕಿತ್ತು ಮಿಂಚಿದರು. ಅರ್ಶ್​ದೀಪ್​ ಸಿಂಗ್ 2 ವಿಕೆಟ್​ ಪಡೆದರು.​

Exit mobile version