Site icon Vistara News

IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್​

IPL 2024

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಮಹೇಂದ್ರ ಸಿಂಗ್​ ಧೋನಿಯ ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಚೆನ್ನೈ ಮತ್ತು ಧೋನಿಯನ್ನು ನೋಡಲು ದೆಹಲಿಯ ವರೆಗೂ ನಡೆದುಕೊಂಡೇ ಹೋಗುವೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ರಾಮದಾಸ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿಯಾಗಿದ್ದು ಇಂದಿಗೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಸಮಯ ತೆಗೆದುಕೊಳ್ಳುತ್ತಾರೆ. ಬ್ರಿಟಿಷ್ ಮಿಲಿಟರಿಯ ಸೈನ್ಯದ ಭಾಗವಾಗಿದ್ದ ರಾಮದಾಸ್ ಕ್ರಿಕೆಟ್ ಆಡಲು ಹೆದರುತ್ತಿದ್ದರಂತೆ. ಆದರೆ ಸಿಎಸ್‌ಕೆ ಜರ್ಸಿ ಧರಿಸಿ ಟಿವಿ ಮುಂದೆ ಕುಳಿತು ಐಪಿಎಲ್ ಆಟವನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಮಗ ತಂದೆಯ ಬಳಿ ನೀವು ಎಂಎಸ್ ಧೋನಿಯನ್ನು ಭೇಟಿಯಾಗಲು ಬಯಸುತ್ತೀರಾ ಎಂದು ಕೇಳಿದಾಗ “ಓಹ್ ಹೌದು” ಎಂದಿದ್ದಾರೆ. ಸೂಪರ್ ಕಿಂಗ್ಸ್ ಒಳಗೊಂಡ ಐಪಿಎಲ್ ಪಂದ್ಯವನ್ನು ಮತ್ತು ಧೋನಿಯನ್ನು ನೋಡಲು ರಾಜಧಾನಿಗೆ ಪ್ರಯಾಣಿಸಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ “ನಾನು ದೆಹಲಿಯವರೆಗೂ ನಡೆದುಕೊಂಡು ಹೋಗುತ್ತೇನೆ” ಎಂದು ರಾಮದಾಸ್ ಹೇಳಿದರು. 103 ವರ್ಷದ ಈ ಅಭಿಮಾನಿಯ ವಿಡಿಯೊ ವೈರಲ್​ ಆಗಿದೆ. ಮುಂದಿನ ಪಂದ್ಯದಲ್ಲಿ ಈ ಶತಾಯುಷಿ ಅಭಿಮಾನಿಗೆ ಚೆನ್ನೈ ಪಂದ್ಯ ವೇಳೆ ಕಾಣಿಸಿಕೊಂಡು ಧೋನಿಯನ್ನು ಭೇಟಿಯಾದರೂ ಅಚ್ಚರಿಯಿಲ್ಲ.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ರುಚಿ ತೋರಿಸಿದ್ದರು. ವಯಸ್ಸು 42 ಆದರೂ, ತಮ್ಮ ಬ್ಯಾಟಿಂಗ್​ ಫಾರ್ಮ್​ ಮಾತ್ರ ಈ ಹಿಂದಿನಂತೆಯೇ ಇದೆ.​

Exit mobile version