Site icon Vistara News

IPL 2024 Auction : ಮಿನಿ ಹರಾಜು ಮುಗಿದ ಬಳಿಕ ಐಪಿಎಲ್ ತಂಡಗಳ ಪೂರ್ಣ ಪಟ್ಟಿ ಇಲ್ಲಿದೆ

Pat cummins

ದುಬೈ: ಡಿಸೆಂಬರ್ 19 ರ ಮಂಗಳವಾರ ಐಪಿಎಲ್ 2024 ಆವೃತ್ತಿಗಾಗಿನ ಆಟಗಾರರ ಮಿನಿ ಹರಾಜು ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆಯಿತು. ಶ್ರೀಮಂತ ಕ್ರೀಡಾ ಲೀಗ್​ನ ಹತ್ತು ಫ್ರಾಂಚೈಸಿಗಳು ತಮ್ಮ ಉಳಿದ ಬಜೆಟ್ ಅನ್ನು ಅತ್ಯುತ್ತಮ ಆಟಗಾರರನ್ನು ಖರೀದಿಸಲು ಹಾಗೂ ಮುಂದಿನ ಆವೃತ್ತಿಗೆ ತಂಡದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಳಸಿಕೊಂಡಿತು. ಹರಾಜು ಪ್ರಕ್ರಿಯೆ ವೇಳೆ ಕೆಲವು ಅನಿರೀಕ್ಷಿತ ಆಯ್ಕೆಗಳು ಕಂಡು ಬಂದರೆ, ಖ್ಯಾತನಾಮ ಆಟಗಾರರು ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ವಿಫಲಗೊಂಡರು. ಒಟ್ಟಿನಲ್ಲಿ ರೋಚಕವಾಗಿ ನಡೆದ ಐಪಿಎಲ್​ ಹರಾಜಿನಲ್ಲಿ 72 ಆಟಗಾರರು ನಾನಅ ತಂಡಗಳನ್ನು ಸೇರಿಕೊಂಡರು. ಐಪಿಎಲ್ 2024 ರ ಹರಾಜು ಮುಗಿದಿರುವುದರಿಂದ, ಎರಡನೇ ವ್ಯಾಪಾರ ವಿಂಡೋ ತೆರೆಯುವ ಮೊದಲು ಎಲ್ಲಾ ತಂಡಗಳ ಅಂತಿಮ ರೂಪ ಈ ರೀತಿ ಇದೆ.

ಈ ಬಾರಿಯ ವಿಶೇಷತೆ ಏನು?

ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಇಬ್ಬರು ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ 20 ಕೋಟಿ ರೂ.ಗಳ ಗಡಿ ದಾಟಿದ್ದಾರೆ. ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿತು, ಈ ದಾಖಲೆಯು ಕೇವಲ 30 ನಿಮಿಷಗಳ ಕಾಲ ಉಳಿಯಿತು, ಕೋಲ್ಕತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್​ಗೆ 24.75 ಕೋಟಿ ರೂ.ಗಳನ್ನು ಪಾವತಿಸಿತು. ಇದೇ ವೇಳೆ ಅನ್​ಕ್ಯಾಪ್ಡ್​ ಭಾರತೀಯರಾದ ಶುಭಂ ದುಬೆ ಮತ್ತು ಸಮೀರ್ ರಿಜ್ವಿ ಕೂಡ ಗಮನ ಸೆಳೆದರು.

ಎಷ್ಟು ಆಟಗಾರರ ಹರಾಜು?

30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರನ್ನು ಒಟ್ಟು 230.45 ಕೋಟಿ ರೂ.ಗೆ 10 ಫ್ರಾಂಚೈಸಿಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕಂಡವು.

ರಾಯಲ್ ಚಾಲೆಂರ್ಸ್​ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 19 ಆಟಗಾರರಿದ್ದರು. ಹರಾಜಿನಲ್ಲಿ 23.25 ಕೋಟಿ ರೂ. ಪರ್ಸ್​ನಲ್ಲಿತ್ತು. ಆರು ಸ್ಲಾಟ್​ಗಳನ್ನು ಭರ್ತಿ ಮಾಡಬೇಕಾಗಿತ್ತು. 3 ವಿದೇಶಿ ಸೇರಿದಂತೆ ಎಲ್ಲ ಸ್ಲಾಟ್​ಗಳನ್ನು ಭರ್ತಿ ಮಾಡಿದೆ.

ಆರ್​ಸಿಬಿ ಖರೀದಿಸಿದ ಆಟಗಾರರು: ಅಲ್ಜಾರಿ ಜೋಸೆಫ್ (11.5 ಕೋಟಿ), ಯಶ್ ದಯಾಳ್ (5 ಕೋಟಿ), ಟಾಮ್ ಕರ್ರನ್ (1.5 ಕೋಟಿ), ಲಾಕಿ ಫರ್ಗುಸನ್ (2 ಕೋಟಿ), ಸ್ವಪ್ನಿಲ್ ಸಿಂಗ್ (0.2 ಕೋಟಿ), ಸೌರವ್ ಚೌಹಾಣ್ (0.2 ಕೋಟಿ).

ಪೂರ್ಣ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

ಮುಂಬೈ ಇಂಡಿಯನ್ಸ್​ ತಂಡ ಹರಾಜು ನೋಟ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಹರಾಜಿಗೆ ಮೊದಲು 17 ಆಟಗಾರರಿದ್ದರು. 17.75 ಕೋಟಿ ರೂ. ಪರ್ಸ್​ನಲ್ಲಿತ್ತು. ತಂಡವನ್ನು ಭರ್ತಿ ಮಾಡಲು 8 ಸ್ಲಾಟ್​ಗಳನ್ನು ಹೊಂದಿತ್ತು. (4 ವಿದೇಶಿ ಆಟಗಾರರು ಸೇರಿದಂತೆ) ಪೂರ್ಣ ಸಂಖ್ಯೆಯ ಆಟಗಾರರನ್ನು ಖರೀದಿಸಿದರು.

ಖರೀದಿಸಿದ ಆಟಗಾರರು: ಜೆರಾಲ್ಡ್ ಕೊಟ್ಜೆ (5 ಕೋಟಿ), ದಿಲ್ಶಾನ್ ಮಧುಶಂಕಾ (4.6 ಕೋಟಿ), ಶ್ರೇಯಸ್ ಗೋಪಾಲ್ (0.2 ಕೋಟಿ), ನುವಾನ್ ತುಷಾರ (4.8 ಕೋಟಿ), ಅನ್ಶುಲ್ ಕಾಂಬೋಜ್ (0.2 ಕೋಟಿ), ನಮನ್ ಧೀರ್ (0.2 ಕೋಟಿ), ಮೊಹಮ್ಮದ್ ನಬಿ (1.5 ಕೋಟಿ), ಶಿವಾಲಿಕ್ ಶರ್ಮಾ (0.2 ಕೋಟಿ).

ಪೂರ್ಣಗೊಂಡ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೀವಾಲ್ಡ್​ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ರೊಮಾರಿಯೊ ಶೆಫೆರ್ಡ್​​, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೇಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆನ್ಡಾರ್ಫ್, ಜೆರಾಲ್ಡ್ ಕೊಟ್ಜೆ, ದಿಲ್ಶಾನ್ ಮಧುಶಂಕಾ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ಅನ್ಶುಲ್ ಕಾಂಬೋಜ್, ನಮನ್ ಧೀರ್.

ಚೆನ್ನೈ ಸೂಪರ್​ ಕಿಂಗ್ಸ್​

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 19 ಆಟಗಾರರಿದ್ದರು. ಹರಾಜಿನಲ್ಲಿ ಹೂಡಿಕೆ ಮಾಡಲು 31.4 ಕೋಟಿ ರೂಪಾಯಿ ಹೊಂದಿದ್ದರು. 3 ವಿದೇಶಿ ಸೇರಿ ಆರು ಸ್ಲಾಟ್ಗಳನ್ನು ಭರ್ತಿ ಮಾಡಬೇಕಾಗಿತ್ತು.

ಚೆನ್ನೈ ತಂಡ ಖರೀದಿಸಿದ ಆಟಗಾರರು: ಶಾರ್ದೂಲ್ ಠಾಕೂರ್ (4 ಕೋಟಿ), ರಚಿನ್ ರವೀಂದ್ರ (1.8 ಕೋಟಿ), ಡ್ಯಾರಿಲ್ ಮಿಚೆಲ್ (14 ಕೋಟಿ), ಸಮೀರ್ ರಿಜ್ವಿ (8.4 ಕೋಟಿ), ಮುಸ್ತಾಫಿಜುರ್ ರೆಹಮಾನ್ (2 ಕೋಟಿ), ಅವನೀಶ್ ರಾವ್ ಅರವೇಲಿ (0.2 ಕೋಟಿ).

ಪೂರ್ಣಗೊಂಡ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.

ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಕಟ

ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ 13 ಆಟಗಾರರಿದ್ದರು. ಹರಾಜಿನಲ್ಲಿ 32.7 ಕೋಟಿ ರೂಪಾಯಿ ಹೂಡಲು ಅವಕಾಶ ಇತ್ತು. ಹನ್ನೆರಡು ಸ್ಲಾಟ್​ಗಳನ್ನು ಹೊಂದಿತ್ತು. ಅದರಲ್ಲಿ 4 ವಿದೇಶಿ ಆಟಗಾರರು. ಹರಾಜಿನಲ್ಲಿ 10 ಆಟಗಾರರನ್ನು ಖರೀದಿ ಮಾಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿದ ಆಟಗಾರರು: ಕೆಎಸ್ ಭರತ್ (0.5 ಕೋಟಿ), ಚೇತನ್ ಸಕಾರಿಯಾ (0.5 ಕೋಟಿ), ಮಿಚೆಲ್ ಸ್ಟಾರ್ಕ್ (24.75 ಕೋಟಿ), ಆಂಗ್ರಿಶ್ ರಘುವಂಶಿ (0.2 ಕೋಟಿ), ರಮಣ್ ದೀಪ್ ಸಿಂಗ್ (0.2 ಕೋಟಿ), ಶೆರ್ಫೇನ್ ರುದರ್ ಫೋರ್ಡ್ (1.5 ಕೋಟಿ), ಮನೀಶ್ ಪಾಂಡೆ (0.5 ಕೋಟಿ), ಮುಜೀಬ್ ಉರ್ ರಹಮಾನ್ (2 ಕೋಟಿ), ಗುಸ್ ಅಟ್ಕಿನ್ಸನ್ (1 ಕೋಟಿ), ಸಾಕಿಬ್ ಹುಸೇನ್ (0.2 ಕೋಟಿ).

ಕೋಲ್ಕತಾ ನೈಟ್ ರೈಡರ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ಸುಯಾಶ್ ಶರ್ಮಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಕೆಎಸ್ ಭರತ್, ಚೇತನ್ ಸಕಾರಿಯಾ, ಮಿಚೆಲ್ ಸ್ಟಾರ್ಕ್, ಆಂಗ್ಕ್ರಿಶ್ ರಘುವಂಶಿ, ರಮಣ್ದೀಪ್ ಸಿಂಗ್, ಶೆರ್ಫೇನ್ ರುದರ್ಫೋರ್ಡ್, ಮನೀಶ್ ಪಾಂಡೆ, ಗುಸ್ ಅಟ್ಕಿನ್ಸನ್, ಮುಜೀಬ್ ಉರ್ ರಹಮಾನ್.

ರಾಜಸ್ಥಾನ್ ರಾಯಲ್ಸ್ ತಂಡ

ಹರಾಜಿಗೆ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ 17 ಆಟಗಾರರಿದ್ದರು. 14.5 ಕೋಟಿ ರೂ. ಉಳಿದಿತ್ತು. ಎಂಟು ಸ್ಲಾಟ್ಗಳನ್ನು (3 ವಿದೇಶಿ ಸೇರಿದಂತೆ) ಭರ್ತಿ ಮಾಡಬೇಕಾಗಿತ್ತು. ಆದರೆ, ಐದೇ ಆಟಗಾರರನ್ನು ಖರೀದಿಸಿದೆ.

ರಾಜಸ್ಥಾನ್ ರಾಯಲ್ಸ್ ಖರೀದಿಸಿದ ಆಟಗಾರರು: ರೋವ್ಮನ್ ಪೊವೆಲ್ (7.40 ಕೋಟಿ), ಶುಭಂ ದುಬೆ (5.8 ಕೋಟಿ), ಟಾಮ್ ಕೊಹ್ಲರ್-ಕ್ಯಾಡ್ಮೋರ್ (0.4 ಕೋಟಿ), ಅಬಿದ್ ಮುಷ್ತಾಕ್ (0.2 ಕೋಟಿ), ನಾಂಡ್ರೆ ಬರ್ಗರ್ (0.5 ಕೋಟಿ)

ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೇರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ಆರ್ ಅಶ್ವಿನ್, ಅವೇಶ್ ಖಾನ್, ಕುಲದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್, ಆಡಮ್ ಜಂಪಾ, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಅಬಿದ್ ಮುಷ್ತಾಕ್, ನಾಂಡ್ರೆ ಬರ್ಗರ್.

ಐಪಿಎಲ್ 2024: ಗುಜರಾತ್ ಟೈಟಾನ್ಸ್ ತಂಡ

ಗುಜರಾತ್ ಟೈಟಾನ್ಸ್ ತಂಡದಲ್ಲಿ 17 ಆಟಗಾರರಿದ್ದರು. ಹರಾಜಿನಲ್ಲಿ 38.15 ಕೋಟಿ ರೂ. ಉಳಿದಿತ್ತು. ಭರ್ತಿ ಮಾಡಲು ಎಂಟು ಆಟಗಾರರು ಬೇಕಾಗಿದ್ದವು. ಇಬ್ಬರು ವಿದೇಶಿ ಅಟಗಾರರು ಬೇಕಾಗಿತ್ತು

ಗುಜರಾತ್ ಟೈಟಾನ್ಸ್ ಖರೀದಿಸಿದ ಆಟಗಾರರು: ಅಜ್ಮತುಲ್ಲಾ ಒಮರ್ಜೈ (0.5 ಕೋಟಿ), ಉಮೇಶ್ ಯಾದವ್ (5.8 ಕೋಟಿ), ಶಾರುಖ್ ಖಾನ್ (7.4 ಕೋಟಿ), ಸುಶಾಂತ್ ಮಿಶ್ರಾ (2.2 ಕೋಟಿ), ಕಾರ್ತಿಕ್ ತ್ಯಾಗಿ (0.6 ಕೋಟಿ), ಸ್ಪೆನ್ಸರ್ ಜಾನ್ಸನ್ (10 ಕೋಟಿ), ರಾಬಿನ್ ಮಿಂಜ್ (3.6 ಕೋಟಿ), ಮಾನವ್ ಸುತಾರ್ (0.2 ಕೋಟಿ).

ಗುಜರಾತ್ ಟೈಟಾನ್ಸ್ ತಂಡ: ಶುಬ್ಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜೈ, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್, ಮಾನವ್ ಸುತಾರ್.

ಐಪಿಎಲ್ 2024: ಸನ್ರೈಸರ್ಸ್ ಹೈದರಾಬಾದ್ ತಂಡ

ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ 19 ಆಟಗಾರರಿದ್ದರು. ಹರಾಜು ಪ್ರಕ್ರಿಯೆಗಾಗಿ 34 ಕೋಟಿ ರೂ. ಹೊಂದಿತ್ತು. 3 ವಿದೇಶಿ ಸೇರಿ ಆರು ಸ್ಲಾಟ್​ಗಳನ್ನು ಭರ್ತಿ ಮಾಡಬೇಕಾಗಿತ್ತು. ಹರಾಜಿನಲ್ಲಿ ಆರು ಆಟಗಾರರನ್ನು ಖರೀದಿಸಲಾಗಿದೆ.

ಸನ್ರೈಸರ್ಸ್ ಹೈದರಾಬಾದ್ ಖರೀದಿಸಿದ ಆಟಗಾರರು: ಟ್ರಾವಿಸ್ ಹೆಡ್ (6.8 ಕೋಟಿ), ವನಿಂದು ಹಸರಂಗ (1.5 ಕೋಟಿ), ಪ್ಯಾಟ್ ಕಮಿನ್ಸ್ (20.50 ಕೋಟಿ), ಜಯದೇವ್ ಉನಾದ್ಕಟ್ (1.6 ಕೋಟಿ), ಆಕಾಶ್ ಸಿಂಗ್ (0.2 ಕೋಟಿ), ಜೆ ಸುಬ್ರಮಣ್ಯನ್ (0.2 ಕೋಟಿ).

ಇದನ್ನೂ ಓದಿ : IPL 2024 Auction : ಹರಾಜಿನಲ್ಲಿ 7.5 ಕೋಟಿ ಪಡೆದ 19 ವರ್ಷದ ಕುಶಾಗ್ರ ಯಾರು?

ಸನ್ರೈಸರ್ಸ್ ಹೈದರಾಬಾದ್ ತಂಡ: ಐಡೆನ್ ಮಾರ್ಕ್ರಮ್ (ನಾಯಕ), ಅಬ್ದುಲ್ ಸಮದ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಹೆನ್ರಿಕ್ ಕ್ಲಾಸೆನ್, ಮಯಾಂಕ್ ಅಗರ್ವಾಲ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವೀರ್ ಸಿಂಗ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಫಜಲ್ಹಕ್ ಫಾರೂಕಿ, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮಿನ್ಸ್, ಜಯದೇವ್ ಉನಾದ್ಕತ್, ಆಕಾಶ್ ಸಿಂಗ್.

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ರಕಟ

ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ 19 ಆಟಗಾರರಿದ್ದರು. ಹರಾಜಿನಲ್ಲಿ 13.15 ಕೋಟಿ ರೂ. ಹೂಡಿಕೆ ಮಾಡಬಹುದಾಗಿತ್ತು. ಆರು ಸ್ಲಾಟ್​ಗಳನ್ನು ಹೊಂದಿತ್ತು. ಎರಡು ವಿದೇಶಿಯರು ಬೇಕಾಗಿದ್ದರು.

ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದ ಆಟಗಾರರು: ಶಿವಂ ಮಾವಿ (6.4 ಕೋಟಿ), ಅರ್ಶಿನ್ ಕುಲಕರ್ಣಿ (0.2 ಕೋಟಿ), ಎಂ.ಸಿದ್ಧಾರ್ಥ್ (2.4 ಕೋಟಿ), ಆಷ್ಟನ್ ಟರ್ನರ್ (1 ಕೋಟಿ), ಡೇವಿಡ್ ವಿಲ್ಲಿ (2 ಕೋಟಿ), ಅರ್ಷದ್ ಖಾನ್ (0.2 ಕೋಟಿ)

ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆ), ನಿಕೋಲಸ್ ಪೂರನ್, ದೇವದತ್ ಪಡಿಕ್ಕಲ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೃಷ್ಣಪ್ಪ ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ ಸಿದ್ಧಾರ್ಥ್, ಆಷ್ಟನ್ ಟರ್ನರ್, ಡೇವಿಡ್ ವಿಲ್ಲಿ, ಅರ್ಷದ್ ಖಾನ್.

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಕಟ

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 16 ಆಟಗಾರರಿದ್ದರು. ಹರಾಜಿನಲ್ಲಿ 28.95 ಕೋಟಿ ರೂ. ಹೊಂದಿತ್ತು. 4 ವಿದೇಶಿ ಸೇರಿ 9 ಆಟಗಾರರನ್ನು ಭರ್ತಿ ಮಾಡಬೇಕಾಗಿತ್ತು. ಎಲ್ಲ ಆಟಗಾರರನ್ನು ಖರೀದಿ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಆಟಗಾರರು: ಹ್ಯಾರಿ ಬ್ರೂಕ್ (4 ಕೋಟಿ), ಟ್ರಿಸ್ಟಾನ್ ಸ್ಟಬ್ಸ್ (0.5 ಕೋಟಿ), ರಿಕಿ ಭುಯಿ (0.2 ಕೋಟಿ), ಕುಮಾರ್ ಕುಶಾಗ್ರ (7.2 ಕೋಟಿ), ರಸಿಕ್ ದಾರ್ (0.2 ಕೋಟಿ), ಜೇ ರಿಚರ್ಡ್ಸನ್ (5 ಕೋಟಿ), ಸುಮಿತ್ ಕುಮಾರ್ (1 ಕೋಟಿ), ಶಾಯ್ ಹೋಪ್ (0.75 ಕೋಟಿ), ಸ್ವಸ್ತಿಕ್ ಚಿಕಾರಾ (0.2 ಕೋಟಿ).

ಡೆಲ್ಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಮಿಚೆಲ್ ಮಾರ್ಷ್, ಯಶ್ ಧುಲ್, ಪ್ರವೀಣ್ ದುಬೆ, ವಿಕ್ಕಿ ಓಸ್ವಾಲ್, ಅನ್ರಿಕ್ ನಾರ್ಟ್ಜೆ, ಕುಲದೀಪ್ ಯಾದವ್, ಲುಂಗಿ ಎನ್ಗಿಡಿ, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಹ್ಯಾರಿ ಬ್ರೂಕ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರ, ರಸಿಕ್ ದಾರ್, ಜೇ ರಿಚರ್ಡ್ಸನ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ.

ಐಪಿಎಲ್ 2024: ಪಂಜಾಬ್ ಕಿಂಗ್ಸ್ ತಂಡ ಪ್ರಕಟ

ಪಂಜಾಬ್ ಕಿಂಗ್ಸ್ ತಂಡದಲ್ಲಿ 17 ಆಟಗಾರರಿದ್ದರು. ಹರಾಜಿನಲ್ಲಿ 29.1 ಕೋಟಿ ರೂ. ಅವರು ಭರ್ತಿ ಮಾಡಲು ಎಂಟು ಸ್ಲಾಟ್​​ಗಳನ್ನು ಹೊಂದಿದ್ದರು (2 ವಿದೇಶಿ ಸೇರಿದಂತೆ) ಮತ್ತು ಅವುಗಳನ್ನು ಇಂದಿನ ಹರಾಜಿನಲ್ಲಿ ಖರೀದಿಸಿದರು.

ಪಂಜಾಬ್ ಕಿಂಗ್ಸ್ ಖರೀದಿಸಿದ ಆಟಗಾರರು: ಹರ್ಷಲ್ ಪಟೇಲ್ (11.75 ಕೋಟಿ), ಕ್ರಿಸ್ ವೋಕ್ಸ್ (4.2 ಕೋಟಿ), ಅಶುತೋಷ್ ಶರ್ಮಾ (0.2 ಕೋಟಿ), ವಿಶ್ವನಾಥ್ ಪ್ರತಾಪ್ ಸಿಂಗ್ (0.2 ಕೋಟಿ), ಶಶಾಂಕ್ ಸಿಂಗ್ (0.2 ಕೋಟಿ), ತನಯ್ ತ್ಯಾಗರಾಜನ್ (0.2 ಕೋಟಿ), ಪ್ರಿನ್ಸ್ ಚೌಧರಿ (0.2 ಕೋಟಿ), ರಿಲೀ ರೊಸ್ಸೌ (8 ಕೋಟಿ).

ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಜಿತೇಶ್ ಶರ್ಮಾ, ಪ್ರಭ್ಸಿಮ್ರನ್ ಸಿಂಗ್, ಹರ್ಪ್ರೀತ್ ಭಾಟಿಯಾ, ಅಥರ್ವ ತೈಡೆ, ರಿಷಿ ಧವನ್, ಸ್ಯಾಮ್ ಕರ್ರನ್, ಸಿಕಂದರ್ ರಾಜಾ, ಲಿಯಾಮ್ ಲಿವಿಂಗ್ಸ್ಟೋನ್, ಶಿವಂ ಸಿಂಗ್, ರಾಹುಲ್ ಚಹರ್, ಅರ್ಷ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ವಿದ್ವತ್ ಕಾವೇರಪ್ಪ, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ಶಶಾಂಕ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ.

Exit mobile version