Site icon Vistara News

ಇಲ್ಲಿದೆ ಸಂಪೂರ್ಣ ಆಟಗಾರರ ಪಟ್ಟಿ; 2 ಕೋಟಿ ಮೂಲಬೆಲೆ ಪಡೆದ ಭಾರತೀಯ ಆಟಗಾರರೆಷ್ಟು?

IPL 2024 Auction

ಮುಂಬಯಿ: ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್(IPL 2024 Auction)​ ಟೂರ್ನಿಯ ಆಗಾರರ ಮಿನಿ ಹರಾಜು ಪ್ರಕ್ರಿಯೆಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು ಕಾರ್ಯ ನಡೆಯಲಿದೆ. ವಿದೇಶದಲ್ಲಿ ಆಟಗಾರರ ಹರಾಜು ನಡೆಯುತ್ತಿರುವುದು ಇದೇ ಮೊದಲು.

214 ಭಾರತೀಯ ಆಟಗಾರರು

ಎಲ್ಲ ಪ್ರಾಂಚೈಸಿಗಳು ಬಿಡ್ಡಿಂಗ್​ನಲ್ಲಿ ಆಟಗಾರರನ್ನು ಖರೀದಿಸಲು ಸಕಲ ಸಿದ್ಧತೆ ನಡೆಸಿವೆ. ಇದೀಗ ಐಪಿಎಲ್ ಮಂಡಳಿಯು ಹರಾಜಿಗೆ ಒಳಗಾಗಲಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ.

23 ಆಟಗಾರರಿಗೆ 2 ಕೋಟಿ ರೂ ಮೂಲಬೆಲೆ

ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್​ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್​ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್​ನ ಸ್ಟೀವನ್​ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

ರಚಿನ್​ಗೆ 50 ಲಕ್ಷ ಮೂಲಬೆಲೆ

ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್​ನ ಯುವ ಬ್ಯಾಟರ್​ ರಚಿನ್​ ರವೀಂದ್ರ ಮತ್ತು ಅಫಘಾನಿಸ್ತಾನ ಅಜ್ಮತುಲ್ಲಾ ಓಮರ್ ಝೈ ಅವರಿಗೆ 50 ಲಕ್ಷ ರೂ ಮೂಲ ಬೆಲೆ ನಿಗದಿ ಮಾಡಿದ್ದಾರೆ. ಆದರೆ ಉಭಯ ಆಟಗಾರರು ಕೋಟಿ ಮೊತ್ತಕ್ಕೆ ಸೇಲ್​ ಆಗುವ ನಿರೀಕ್ಷೆ ಇದೆ. ಏಕೆಂದರೆ ಈಗಾಗಲೇ ಕೆಲ ಫ್ರಾಂಚೈಸಿಗಳು ಉಭಯ ಆಟಗಾರರ ಖರೀದಿಯ ಕುರಿತು ಅಭಿಪ್ರಾಯ ಕೂಡ ವ್ಯಕ್ತಪಡಿಸಿತ್ತು.

2 ಕೋಟಿ ರೂ ಮೂಲಬೆಲೆಯ ಆಟಗಾರರು

ಶಾರ್ದೂಲ್​ ಠಾಕೂರ್​-ಭಾರತಉಮೇಶ್ ಯಾದವ್​-ಭಾರತಹರ್ಷಲ್ ಪಟೇಲ್-ಭಾರತ
ಹ್ಯಾರಿ ಬ್ರೂಕ್ – ಇಂಗ್ಲೆಂಡ್ಟ್ರಾವಿಸ್ ಹೆಡ್ –ಆಸ್ಟ್ರೇಲಿಯಾರೈಲಿ ರೊಸೊ– ದಕ್ಷಿಣ ಆಫ್ರಿಕಾ
ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾಜೆರಾಲ್ಡ್ ಕೋಟ್ಜಿ – ದಕ್ಷಿಣ ಆಫ್ರಿಕಾಪ್ಯಾಟ್ ಕಮ್ಮಿನ್ಸ್– ಆಸೀಸ್​
ಕ್ರಿಸ್ ವೋಕ್ಸ್ – ಇಂಗ್ಲೆಂಡ್ಜೋಶ್ ಇಂಗ್ಲಿಸ್ – ಆಸ್ಟ್ರೇಲಿಯಾ​ಲಾಕಿ ಫರ್ಗುಸನ್ – ನ್ಯೂಜಿಲ್ಯಾಂಡ್​​
ಜೋಶ್ ಹ್ಯಾಜಲ್‌ವುಡ್ – ಆಸ್ಟ್ರೇಲಿಯಾಮಿಚೆಲ್ ಸ್ಟಾರ್ಕ್ – ಆಸ್ಟ್ರೇಲಿಯಾಮುಜೀಬ್ ಉರ್ ರೆಹಮಾನ್ – ಅಫ್ಘಾನಿಸ್ತಾನ
ಜೇಮೀ ಓವರ್ಟನ್ – ಇಂಗ್ಲೆಂಡ್ಡೇವಿಡ್ ವಿಲ್ಲಿ – ಇಂಗ್ಲೆಂಡ್ಬೆನ್ ಡಕೆಟ್ – ಇಂಗ್ಲೆಂಡ್
ಮುಸ್ತಾಫಿಜುರ್ ರೆಹಮಾನ್ – ಬಾಂಗ್ಲಾದೇಶಆದಿಲ್ ರಶೀದ್ – ಇಂಗ್ಲೆಂಡ್ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ – ದಕ್ಷಿಣ ಆಫ್ರಿಕಾ
ಜೇಮ್ಸ್ ವಿನ್ಸ್ – ಇಂಗ್ಲೆಂಡ್ಸೀನ್ ಅಬಾಟ್ – ಆಸ್ಟ್ರೇಲಿಯಾ

1.5 ಕೋಟಿ ಮೂಲಬೆಲೆ

ವನಿಂದು ಹಸರಂಗ – ಶ್ರೀಲಂಕಾಫಿಲಿಪ್ ಸಾಲ್ಟ್ – ಇಂಗ್ಲೆಂಡ್
ಕಾಲಿನ್ ಮುನ್ರೊ – ನ್ಯೂಜಿಲೆಂಡ್ಶೆರ್ಫೇನ್ ರುದರ್ಫೋರ್ಡ್ – ವೆಸ್ಟ್ ಇಂಡೀಸ್
ಟಾಮ್ ಕರ್ರನ್ – ಇಂಗ್ಲೆಂಡ್ಜೇಸನ್ ಹೋಲ್ಡರ್ – ವೆಸ್ಟ್ ಇಂಡೀಸ್
ಕ್ರಿಸ್ ಜೋರ್ಡಾನ್ – ಇಂಗ್ಲೆಂಡ್ಡೇನಿಯಲ್ ಸ್ಯಾಮ್ಸ್ – ಆಸ್ಟ್ರೇಲಿಯಾ
ಮೊಹಮ್ಮದ್ ನಬಿ – ಅಫ್ಘಾನಿಸ್ತಾನತೈಮಲ್ ಮಿಲ್ಸ್ – ಇಂಗ್ಲೆಂಡ್
ಜೇಮ್ಸ್ ನೀಶಮ್ – ನ್ಯೂಜಿಲೆಂಡ್ಟಿಮ್ ಸೌಥಿ – ನ್ಯೂಜಿಲೆಂಡ್
ಜೇ ರಿಚರ್ಡ್ಸನ್ – ಆಸ್ಟ್ರೇಲಿಯಾ

1 ಕೋಟಿ ಮೂಲ ಬೆಲೆಯ ಆಟಗಾರರು

ರೋವ್ಮನ್ ಪೊವೆಲ್ – ವೆಸ್ಟ್ ಇಂಡೀಸ್, ಡ್ಯಾರೆಲ್ ಮಿಚೆಲ್ – ನ್ಯೂಜಿಲ್ಯಾಂಡ್​, ಅಲ್ಜಾರಿ ಜೋಸೆಫ್ – ವೆಸ್ಟ್ ಇಂಡೀಸ್, ಆಸ್ಟನ್ ಟರ್ನರ್ – ಆಸ್ಟ್ರೇಲಿಯಾ ,ಮಿಚೆಲ್ ಬ್ರೇಸ್ವೆಲ್ – ನ್ಯೂಜಿಲ್ಯಾಂಡ್​, ಡ್ವೈನ್ ಪ್ರಿಟೋರಿಯಸ್ – ದಕ್ಷಿಣ ಆಫ್ರಿಕಾ, ಸ್ಯಾಮ್ ಬಿಲ್ಲಿಂಗ್ಸ್ – ಇಂಗ್ಲೆಂಡ್, ಗಸ್ ಅಟ್ಕಿನ್ಸನ್ – ಇಂಗ್ಲೆಂಡ್,ಕೈಲ್ ಜೇಮಿಸನ್ – ನ್ಯೂಜಿಲ್ಯಾಂಡ್​, ರಿಲೆ ಮೆರೆಡಿತ್ – ಆಸ್ಟ್ರೇಲಿಯಾ, ಆಡಮ್ ಮಿಲ್ನೆ – ನ್ಯೂಜಿಲ್ಯಾಂಡ್​, ವೇಯ್ನ್ ಪಾರ್ನೆಲ್ – ದಕ್ಷಿಣ ಆಫ್ರಿಕಾ, ಡೇವಿಡ್ ವೀಸೆ – ನೆದರ್ಲ್ಯಾಂಡ್ಸ್.

75 ಲಕ್ಷ ಮೂಲಬೆಲೆ

ಇಶ್ ಸೋಧಿ – ನ್ಯೂಜಿಲ್ಯಾಂಡ್​, ಫಿನ್ ಅಲೆನ್ – ನ್ಯೂಜಿಲ್ಯಾಂಡ್​, ಫ್ಯಾಬಿಯನ್ ಅಲೆನ್ – ವೆಸ್ಟ್ ಇಂಡೀಸ್, ಕೀಮೋ ಪಾಲ್ – ವೆಸ್ಟ್ ಇಂಡೀಸ್, ಶಾಯ್ ಹೋಪ್ – ವೆಸ್ಟ್ ಇಂಡೀಸ್, ತಸ್ಕಿನ್ ಅಹ್ಮದ್ – ಬಾಂಗ್ಲಾದೇಶ, ಮ್ಯಾಟ್ ಹೆನ್ರಿ – ನ್ಯೂಜಿಲ್ಯಾಂಡ್​, ಲ್ಯಾನ್ಸ್ ಮೋರಿಸ್ – ಆಸ್ಟ್ರೇಲಿಯಾ, ಆಲಿ ರಾಬಿನ್ಸನ್ – ಇಂಗ್ಲೆಂಡ್, ಬಿಲ್ಲಿ ಸ್ಟಾನ್ಲೇಕ್ – ಆಸ್ಟ್ರೇಲಿಯಾ, ಆಲಿ ಸ್ಟೋನ್ – ಇಂಗ್ಲೆಂಡ್.

50 ಲಕ್ಷ ಮೂಲಬೆಲೆ

ಮನೀಶ್ ಪಾಂಡೆ-ಭಾರತ, ಕರುಣ್ ನಾಯರ್-ಭಾರತ, ಜಯದೇವ್ ಉನದ್ಕತ್-ಭಾರತ, ಚೇತನ್ ಸಕರಿಯಾ-ಭಾರತ, ಶಿವಂ ಮಾವಿ-ಭಾರತ, ಕೆಎಸ್ ಭರತ್-ಭಾರತ, ಸಂದೀಪ್ ವಾರಿಯರ್- ಭಾರತ, ಬರೀಂದರ್ ಸ್ರಾನ್-ಭಾರತ, ಸಿದ್ಧಾರ್ಥ್ ಕೌಲ್-ಭಾರತ, ವರುಣ್ ಆರನ್-ಭಾರತ, ಹನುಮ ವಿಹಾರಿ-ಭಾರತ, ರಚಿನ್ ರವೀಂದ್ರ – ನ್ಯೂಜಿಲ್ಯಾಂಡ್​, ಅಜ್ಮತುಲ್ಲಾ ಓಮರ್ ಝೈ – ಅಫಘಾನಿಸ್ತಾನ, ಲ್ಯೂಕ್ ವುಡ್ – ಇಂಗ್ಲೆಂಡ್, ಲಿಜಾಡ್ ವಿಲಿಯಮ್ಸ್ – ದಕ್ಷಿಣ ಆಫ್ರಿಕಾ, ನುವಾನ್ ತುಷಾರ – ಶ್ರೀಲಂಕಾ, ಒಶಾನೆ ಥಾಮಸ್ – ವೆಸ್ಟ್ ಇಂಡೀಸ್, ಜಾರ್ಜ್ ಸ್ಕ್ರಿಮ್ಶಾ – ಇಂಗ್ಲೆಂಡ್, ರಿಚರ್ಡ್ ನಾಗ್ವಾರ – ಜಿಂಬಾಬ್ವೆ, ಬ್ಲೆಸ್ಸಿಂಗ್ ಮುಜರ್ಬಾನಿ – ಜಿಂಬಾಬ್ವೆ, ಒಬೆಡ್ ಮೆಕಾಯ್ – ವೆಸ್ಟ್ ಇಂಡೀಸ್, ಲಹಿರು ಕುಮಾರ- ಶ್ರೀಲಂಕಾ, ಸ್ಪೆನ್ಸರ್ ಜಾನ್ಸನ್ – ಆಸ್ಟ್ರೇಲಿಯಾ, ಶೋರಿಫುಲ್ ಇಸ್ಲಾಂ – ಬಾಂಗ್ಲಾದೇಶ, ರಿಚರ್ಡ್ ಗ್ಲೀಸನ್ – ಇಂಗ್ಲೆಂಡ್, ಬೆನ್ ದ್ವಾರಶಿಯಸ್ – ಆಸ್ಟ್ರೇಲಿಯಾ, ಫರೀದ್ ಅಹ್ಮದ್ – ಅಫ್ಘಾನಿಸ್ತಾನ, ಜಾನ್ಸನ್ ಚಾರ್ಲ್ಸ್ – ವೆಸ್ಟ್ ಇಂಡೀಸ್, ಒಡಿಯನ್ ಸ್ಮಿತ್ – ವೆಸ್ಟ್ ಇಂಡೀಸ್, ಮ್ಯಾಥ್ಯೂ ಶಾರ್ಟ್ –ಆಸ್ಟ್ರೇಲಿಯಾ, ದಾಸುನ್ ಶನಕ – ಶ್ರೀಲಂಕಾ, ವಿಯಾಮ್ ಮುಲ್ಡರ್ – ದಕ್ಷಿಣ ಆಫ್ರಿಕಾ, ಕೇಶವ ಮಹಾರಾಜ್ – ದಕ್ಷಿಣ ಆಫ್ರಿಕಾ, ಜಾರ್ಜ್ ಲಿಂಡೆ -ದಕ್ಷಿಣ ಆಫ್ರಿಕಾ, ಜಾರ್ಜ್ ಕಾರ್ಟನ್ – ಇಂಗ್ಲೆಂಡ್, ಮ್ಯಾಥ್ಯೂ ಫೋರ್ಡ್ – ವೆಸ್ಟ್ ಇಂಡೀಸ್, ಬೆನ್ ಕಟಿಂಗ್ – ಆಸ್ಟ್ರೇಲಿಯಾ, ಬ್ರೈಡನ್ ಕಾರ್ಸೆ – ಇಂಗ್ಲೆಂಡ್, ಚರಿತ್ ಅಸಲಂಕಾ – ಶ್ರೀಲಂಕಾ, ರೆಹಾನ್ ಅಹ್ಮದ್- ಇಂಗ್ಲೆಂಡ್, ಖೈಜ್ ಅಹ್ಮದ್ – ಅಫಘಾನಿಸ್ತಾನ, ವೆಸ್ಲಿ ಅಗರ್ – ಆಸ್ಟ್ರೇಲಿಯಾ, ನಜಿಬುಲ್ಲಾ ಜದ್ರಾನ್ – ಅಫಘಾನಿಸ್ತಾನ, ಇಬ್ರಾಹಿಂ ಜದ್ರಾನ್ – ಅಫಘಾನಿಸ್ತಾನ, ಬ್ರಾಂಡನ್ ಕಿಂಗ್ – ವೆಸ್ಟ್ ಇಂಡೀಸ್, ರೀಜಾ ಹೆಂಡ್ರಿಕ್ಸ್ – ದಕ್ಷಿಣ ಆಫ್ರಿಕಾ, ಸ್ಯಾಮ್ಯುಯೆಲ್ ಹೈನ್ – ಇಂಗ್ಲೆಂಡ್, ಮಾರ್ಕ್ ಚಾಪ್ಮನ್ – ನ್ಯೂಜಿಲ್ಯಾಂಡ್​, ಅಲಿಕ್ ಅಥನಾಜೆ – ವೆಸ್ಟ್ ಇಂಡೀಸ್, ಮೊಹಮ್ಮದ್ ವಕಾರ್ – ಅಫಘಾನಿಸ್ತಾನ, ಅಕೇಲ್ ಹೊಸೈನ್ – ವೆಸ್ಟ್ ಇಂಡೀಸ್, ದಿಲ್ಶನ್ ಮಧುಶಂಕ – ಶ್ರೀಲಂಕಾ, ಟ್ರಿಸ್ಟಾನ್ ಸ್ಟಬ್ಸ್ – ದಕ್ಷಿಣ ಆಫ್ರಿಕಾ, ಕುಸಾಲ್ ಮೆಂಡಿಸ್ – ಶ್ರೀಲಂಕಾ.

Exit mobile version