ಮುಂಬಯಿ: ಐಪಿಎಲ್ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿರುವ 2024ನೇ ಸಾಲಿನ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೆ(IPL 2024 Auction) ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಡಿಸೆಂಬರ್ 19 ಮಂಗಳವಾರದಂದು ಆಟಗಾರರ ಹರಾಜು ದುಬೈನಲ್ಲಿ ನಡೆಯಲಿದೆ. ಇದೀಗ ಹರಾಜು ನಡೆಯುವ ಸಮಯವನ್ನು ಬದಲಿಸಿ ಪರಿಷ್ಕೃತ ಸಮಯವನ್ನು ಬಿಸಿಸಿಐ ಪ್ರಕಟಿಸಿದೆ.
ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪೂರ್ವ ನಿಗದಿಯಂತೆ ಈ ಹರಾಜು ಪ್ರಕ್ರಿಯೆ ಭಾರತೀಯ ಕಾಲಮಾನಕ್ಕೆ ತಕ್ಕಂತೆ ಮಧ್ಯಾಹ್ನ 2:30ಕ್ಕೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಮಧ್ಯಾಹ್ನ 1 ಗಂಟೆಗೆ ಪ್ರಾರಂಭಗೊಳ್ಳುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಹರಾಜಿನಲ್ಲಿ ಒಟ್ಟು 262.95 ಕೋಟಿ ರೂ. ಹಣದ ಮಿತಿಯಿದೆ.
214 ಭಾರತೀಯ ಆಟಗಾರರು
ಎಲ್ಲ ಪ್ರಾಂಚೈಸಿಗಳು ಬಿಡ್ಡಿಂಗ್ನಲ್ಲಿ ಆಟಗಾರರನ್ನು ಖರೀದಿಸಲು ಸಕಲ ಸಿದ್ಧತೆ ನಡೆಸಿವೆ. ಇದೀಗ ಐಪಿಎಲ್ ಮಂಡಳಿಯು ಹರಾಜಿಗೆ ಒಳಗಾಗಲಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ.
𝗧𝗵𝗲 𝗖𝗼𝘂𝗻𝘁𝗱𝗼𝘄𝗻 𝗶𝘀 🔛! ⏳
— IndianPremierLeague (@IPL) December 12, 2023
A week left for the #IPLAuction. 👏 👏
How excited are you for the auction❓#IPL pic.twitter.com/ZQj18nc06y
23 ಆಟಗಾರರಿಗೆ 2 ಕೋಟಿ ರೂ ಮೂಲಬೆಲೆ
ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್ನ ಸ್ಟೀವನ್ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕದ ಆಟಗಾರರು
ಈ ಬಾರಿಯ ಹಾರಾಜಿನಲ್ಲಿ ಒಟ್ಟು 14 ಕರ್ನಾಟಕದ ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರೆಂದರೆ ಮನೀಷ್ ಪಾಂಡೆ, ಜಗದೀಶ್ ಸುಚಿತ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ್, ಬಿ.ಆರ್ ಶರತ್, ಮನ್ವಂತ್ ಕುಮಾರ್, ಎಲ್.ಆರ್ ಚೇತನ್, ಕೆ.ಎಲ್ ಶ್ರೀಜಿತ್, ಎಂ. ವೆಂಕಟೇಶ್, ಮೋನಿಶ್ ರೆಡ್ಡಿ, ಅಭಿಲಾಷ್ ಶೆಟ್ಟಿ.
2 ಕೋಟಿ ರೂ ಮೂಲಬೆಲೆಯ ಆಟಗಾರರು
ಶಾರ್ದೂಲ್ ಠಾಕೂರ್-ಭಾರತ | ಉಮೇಶ್ ಯಾದವ್-ಭಾರತ | ಹರ್ಷಲ್ ಪಟೇಲ್-ಭಾರತ |
ಹ್ಯಾರಿ ಬ್ರೂಕ್ – ಇಂಗ್ಲೆಂಡ್ | ಟ್ರಾವಿಸ್ ಹೆಡ್ –ಆಸ್ಟ್ರೇಲಿಯಾ | ರೈಲಿ ರೊಸೊ– ದಕ್ಷಿಣ ಆಫ್ರಿಕಾ |
ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ | ಜೆರಾಲ್ಡ್ ಕೋಟ್ಜಿ – ದಕ್ಷಿಣ ಆಫ್ರಿಕಾ | ಪ್ಯಾಟ್ ಕಮ್ಮಿನ್ಸ್– ಆಸೀಸ್ |
ಕ್ರಿಸ್ ವೋಕ್ಸ್ – ಇಂಗ್ಲೆಂಡ್ | ಜೋಶ್ ಇಂಗ್ಲಿಸ್ – ಆಸ್ಟ್ರೇಲಿಯಾ | ಲಾಕಿ ಫರ್ಗುಸನ್ – ನ್ಯೂಜಿಲ್ಯಾಂಡ್ |
ಜೋಶ್ ಹ್ಯಾಜಲ್‌ವುಡ್ – ಆಸ್ಟ್ರೇಲಿಯಾ | ಮಿಚೆಲ್ ಸ್ಟಾರ್ಕ್ – ಆಸ್ಟ್ರೇಲಿಯಾ | ಮುಜೀಬ್ ಉರ್ ರೆಹಮಾನ್ – ಅಫ್ಘಾನಿಸ್ತಾನ |
ಜೇಮೀ ಓವರ್ಟನ್ – ಇಂಗ್ಲೆಂಡ್ | ಡೇವಿಡ್ ವಿಲ್ಲಿ – ಇಂಗ್ಲೆಂಡ್ | ಬೆನ್ ಡಕೆಟ್ – ಇಂಗ್ಲೆಂಡ್ |
ಮುಸ್ತಾಫಿಜುರ್ ರೆಹಮಾನ್ – ಬಾಂಗ್ಲಾದೇಶ | ಆದಿಲ್ ರಶೀದ್ – ಇಂಗ್ಲೆಂಡ್ | ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ – ದಕ್ಷಿಣ ಆಫ್ರಿಕಾ |
ಜೇಮ್ಸ್ ವಿನ್ಸ್ – ಇಂಗ್ಲೆಂಡ್ | ಸೀನ್ ಅಬಾಟ್ – ಆಸ್ಟ್ರೇಲಿಯಾ |