Site icon Vistara News

IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

IPL Auction 1

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ರ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ದೃಢಪಡಿಸಿದೆ. ಅಂದ ಹಾಗೆ ವಿದೇಶದಲ್ಲಿ ಐಪಿಎಲ್​ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಮೂರು ಬಾರಿ ವಿದೇಶಿ ನೆಲದಲ್ಲಿ ಟೂರ್ನಿ ನಡೆದಿದೆ.

ಮಿನಿ ಹರಾಜಿಗೆ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336.

ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಮುಸ್ತಾಫಿಜುರ್ ರೆಹಮಾನ್, ಹ್ಯಾರಿ ಬ್ರೂಕ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲಾಕಿ ಫರ್ಗುಸನ್ ಮತ್ತು ಜೆರಾಲ್ಡ್ ಕೊಟ್ಜೆ ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರೂ.ಗೆ ನಿಗದಿಪಡಿಸಿದ್ದಾರೆ. 2024ರ ಟಿ 20 ವಿಶ್ವಕಪ್​​ಗೆ ರೋಹಿತ್ ಮತ್ತು ಕೊಹ್ಲಿ ಆಯ್ಕೆಯ ಬಗ್ಗೆ ಕೆವಿನ್ ಪೀಟರ್ಸನ್ “ಐಪಿಎಲ್ನಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ನೋಡಬೇಕಾಗಿದೆ” ಎಂದು ಹೇಳಿದ್ದಾರೆ.

ಐಪಿಎಲ್ ತಂಡಗಳು ನವೆಂಬರ್ 26 ರ ಗಡುವಿನೊಳಗೆ ತಮ್ಮ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವುದಾಗಿ ಘೋಷಿಸಿದವು. ಆದಾಗ್ಯೂ, ಮಿನಿ ಹರಾಜಿಗೆ ಒಂದು ವಾರ ಮೊದಲು ಡಿಸೆಂಬರ್ 12 ರವರೆಗೆ ತಂಡಗಳು ಆಟಗಾರರನ್ನು ಟ್ರೇಡ್​​ ಮಾಡಬಹುದು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ (ಇಸಿಐ) ಮತದಾನದ ವೇಳಾಪಟ್ಟಿಯನ್ನು ಘೋಷಿಸಿದ ನಂತರ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಐಪಿಎಲ್ 2024 ರ ದಿನಾಂಕಗಳನ್ನು ನಿರ್ಧರಿಸಲಿದೆ.

2 ಕೋಟಿ ಮೂಲ ಬೆಲೆಯ ಭಾರತದ ಆಟಗಾರರು

ಇತ್ತೀಚೆಗೆ ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಭಾರತೀಯರ ಪೈಕಿ ಹರ್ಷಲ್ ಪಟೇಲ್, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಮಾತ್ರ ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರೂ.ಗೆ ನಿಗದಿಪಡಿಸಿದ್ದಾರೆ. ಉಳಿದ 14 ಆಟಗಾರರು 50 ಲಕ್ಷ ರೂ.ಗಳ ಮೀಸಲು ಬೆಲೆಯಲ್ಲಿ ಲಭ್ಯವಿದ್ದಾರೆ.

ಆರ್ಚರ್ (27) ಹರಾಜಿಗೆ ತಮ್ಮ ಹೆಸರನ್ನು ಏಕೆ ನೀಡಿಲ್ಲ ಎಂಬುದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರತಿಕ್ರಿಯಿಸಿಲ್ಲ ಆದರೆ ಗಾಯದಿಂದಾಗಿ ಅವರು ಈ ವರ್ಷ ಹಾಜರಾಗುವುದಿಲ್ಲ ಎಂದು ಐಪಿಎಲ್ ತಂಡಗಳಲ್ಲಿ ಮಾತನಾಡಲಾಗುತ್ತಿದೆ. ಆದಾಗ್ಯೂ, ವಿಶ್ವಕಪ್ ಆಟಗಾರರಾದ ಆದಿಲ್ ರಶೀದ್, ಹ್ಯಾರಿ ಬ್ರೂಕ್ ಮತ್ತು ಡೇವಿಡ್ ಮಲಾನ್ ಸೇರಿದಂತೆ ಸಾಕಷ್ಟು ಇಂಗ್ಲಿಷ್ ಆಟಗಾರರಿದ್ದಾರೆ. ರೆಹಾನ್ ಅಹ್ಮದ್ (50 ಲಕ್ಷ ರೂ.), ಗಸ್ ಅಟ್ಕಿನ್ಸನ್ (1 ಕೋಟಿ ರೂ.), ಟಾಮ್ ಬ್ಯಾಂಟನ್ (2 ಕೋಟಿ ರೂ.), ಸ್ಯಾಮ್ ಬಿಲ್ಲಿಂಗ್ಸ್ (1 ಕೋಟಿ ರೂ.), ಹ್ಯಾರಿ ಬ್ರೂಕ್ (2 ಕೋಟಿ ರೂ.), ಬ್ರೈಡನ್ ಕಾರ್ಸ್ (50 ಲಕ್ಷ ರೂ.), ಟಾಮ್ ಕರ್ರನ್ (1.5 ಕೋಟಿ ರೂ.), ಬೆನ್ ಡಕೆಟ್ (2 ಕೋಟಿ ರೂ.), ಜಾರ್ಜ್ ಗಾರ್ಟನ್ (50 ಲಕ್ಷ ರೂ.), ರಿಚರ್ಡ್ ಗ್ಲೀಸನ್ (50 ಲಕ್ಷ ರೂ.) ಸ್ಯಾಮ್ಯುಯೆಲ್ ಹೇನ್ (50 ಲಕ್ಷ ರೂ.), ಕ್ರಿಸ್ ಜೋರ್ಡಾನ್ (1.5 ಕೋಟಿ ರೂ.), ಡೇವಿಡ್ ಮಲಾನ್ (1.5 ಕೋಟಿ ರೂ.), ಟೈಮಲ್ ಮಿಲ್ಸ್ (1.5 ಕೋಟಿ ರೂ.), ಜೇಮಿ ಓವರ್ಟನ್ (2 ಕೋಟಿ ರೂ.), ಆಲ್ಲಿ ಪೋಪ್ (50 ಲಕ್ಷ ರೂ.), ಆದಿಲ್ ರಶೀದ್ (2 ಕೋಟಿ ರೂ.), ಫಿಲಿಪ್ ಸಾಲ್ಟ್ (1.5 ಕೋಟಿ ರೂ.), ಜಾರ್ಜ್ ಸ್ಕ್ರಿಮ್ಶಾ (50 ಲಕ್ಷ ರೂ.), ಓಲಿ ಸ್ಟೋನ್ (75 ಲಕ್ಷ ರೂ.), ಡೇವಿಡ್ ವಿಲ್ಲಿ (2 ಕೋಟಿ ರೂ.), ಕ್ರಿಸ್ ವೋಕ್ಸ್ (2 ಕೋಟಿ ರೂ.) ಲ್ಯೂಕ್ ವುಡ್ (50 ಲಕ್ಷ ರೂ.) ಮತ್ತು ಮಾರ್ಕ್ ಅಡೈರ್ (50 ಲಕ್ಷ ರೂ.)

ಫ್ರಾಂಚೈಸಿಗಳಿಗೆ ಸೂಚನೆ

ಹರಾಜು ರಿಜಿಸ್ಟರ್​ನಲ್ಲಿ ಪಟ್ಟಿ ಮಾಡದ ಹೆಚ್ಚುವರಿ ಆಟಗಾರರ ವಿನಂತಿಗಳೊಂದಿಗೆ ಪ್ರತಿಕ್ರಿಯಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳನ್ನು ವಿನಂತಿಸಿದೆ. ವಿನಂತಿಸಿದ ಆಟಗಾರರು ಅರ್ಹರಾಗಿದ್ದರೆ ಮತ್ತು ಆಸಕ್ತಿ ಹೊಂದಿದ್ದರೆ ಸ್ವಯಂಚಾಲಿತವಾಗಿ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಸೇರಿಸಲು ಬಯಸುವ ಆಟಗಾರರ ಪಟ್ಟಿಯೊಂದಿಗೆ ಪ್ರತಿಕ್ರಿಯಿಸಲು ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ. ಕೇವಲ 77 ಸ್ಲಾಟ್​ಗಳನ್ನು ಮಾತ್ರ ಭರ್ತಿ ಮಾಡಬೇಕಾಗಿದೆ, ಅದರಲ್ಲಿ ಗರಿಷ್ಠ 30 ವಿದೇಶಿ ಆಟಗಾರರು ಇರಬಹುದು.

Exit mobile version