Site icon Vistara News

IPL 2024: ಯಾರಿಗೆ ಒಲಿಯಲಿದೆ ಐಪಿಎಲ್ ಟ್ರೋಫಿಯ​ ಶೀರ್ಷಿಕೆ ಪ್ರಾಯೋಜಕತ್ವ?

ipl trophy

ಮುಂಬಯಿ: 2024 ಐಪಿಎಲ್​ ಟೂರ್ನಿಯ ಆಟಗಾರರ ಮಿನಿ ಹರಾಜು(IPL 2024 Auction) ಪ್ರಕ್ರಿಯೆ ಡಿ.19ರಂದು ದುಬೈನಲ್ಲಿ ನಡೆಯಲಿದೆ. ಆದರೆ ಮುಂದಿನ ಆವೃತ್ತಿಗಾಗಿ ಬಿಸಿಸಿಐ ಇದೀಗ ನೂತನ ಶೀರ್ಷಿಕೆ(IPL 2024 Title Sponsor) ಪ್ರಾಯೋಜಕರನ್ನು ಹುಡುಕುವ ಕಾರ್ಯ ಆರಂಭಿಸಬೇಕಿದೆ. ಹಿಂದಿನ ಎರಡು ಆವೃತ್ತಿಯಲ್ಲಿ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ್ದ ಟಾಟಾ ಗ್ರೂಪ್‌ ಹಿಂದೆ ಸರಿದಿದೆ.

ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಭಾರಿ ಮನ್ನಣೆ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಸೀಸನ್​​ಗಾಗಿ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಆಹ್ವಾನಿಸಲಾಗಿದೆ. ಐಪಿಎಲ್‌ನ 2024–2028ರ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳು ಬಿಡ್‌ಗೆ ಸಿದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಇತ್ತೀಚೆಗಷ್ಟೇ ಹೊಸ ಟೆಂಡರ್‌ಗಳನ್ನು ಸಹ ಬಿಡುಗಡೆ ಮಾಡಿತ್ತು. 2021ರಿಂದ 2024ರ ಸೀಸನ್​ವರೆಗೂ ಟಾಟಾ ಗ್ರೂಪ್‌ನೊಂದಿಗೆ ಒಪ್ಪಂದವಾಗಿತ್ತು. ಇದೀಗ ಟಾಟಾ ಗುಡ್​ಬೈ ಹೇಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಟೆಂಡರ್​ಗಳನ್ನು ಬಿಡುಗಡೆ ಮಾಡಿದೆ. ರೇಸ್​ನಲ್ಲಿ ಮತ್ತೆ ವಿವೋ ಕಾಣಿಸಿಕೊಂಡಿದೆ. ಆದರೆ ಇದಕ್ಕೆ ಕೇಂದ್ರ ಒಪ್ಪಿಗೆ ಸೂಚಿಸುತ್ತಾ ಎಂದು ಕಾದು ನೋಡಬೇಕಿದೆ. ಏಕೆಂದರೆ ಭಾರತ ಮತ್ತು ಚೀನಾ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ವಿವೋವನ್ನು ಪ್ರಯೋಜಕತ್ವದಿಂದ ಕೈ ಬಿಡಲಾಗಿತ್ತು.

ಇದನ್ನೂ ಓದಿ IPL 2024 Auction: ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ-ಕಿರಿಯ ಆಟಗಾರ ಯಾರು?

ಐಪಿಎಲ್ ಶೀರ್ಷಿಕೆ ಪ್ರಾಯೋಜಕರ ಪಟ್ಟಿ

  1. ಡಿಎಲ್​ಎಫ್​ (2008 ರಿಂದ 2012)
  2. ಪೆಪ್ಸಿ (2013 ರಿಂದ 2015)
  3. ವಿವೋ ಐಪಿಎಲ್​ (2016 ರಿಂದ 2017)
  4. ವಿವೋ ಐಪಿಎಲ್​ (2018 ರಿಂದ 2019)
  5. ಡ್ರೀಮ್​ 11 (2020)
  6. ವಿವೋ ಐಪಿಎಲ್​ (2021)
  7. ಟಾಟಾ ಐಪಿಎಲ್​ (2022-2023)

ಇದೇ ಮೊದಲ ಬಾರಿಗೆ ವಿದೇಶದಲ್ಲಿ ನಡೆಯುವ ಆಟಗಾರರ ಮಿನಿ ಹರಾಜಿನಲ್ಲಿ ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ.

ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್​ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್​ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್​ನ ಸ್ಟೀವನ್​ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version